Advertisement

Daily Horoscope: ಪೂರ್ವಸಿದ್ಧತೆಯಿಲ್ಲದೆ ಕಾರ್ಯಕ್ಕೆ ಧುಮುಕದಿರಿ, ಪ್ರಯತ್ನದಲ್ಲಿ ಪ್ರಗತಿ

07:32 AM Dec 01, 2024 | Team Udayavani |

ಮೇಷ: ರಜಾದಿನವಾದರೂ ಅವಿಶ್ರಾಂತ ಬದುಕು. ವ್ಯವಹಾರದ ಒತ್ತಡಗಳಿಂದ ಬಿಡುಗಡೆ ಇಲ್ಲ. ಮನೆಯಲ್ಲಿ ಸಂಭ್ರಮದ ವಾತಾವರಣ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನೋಲ್ಲಾಸ.

Advertisement

ವೃಷಭ: ಅನೇಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ವರಿಗೆ ಲಾಭ. ವ್ಯವಹಾರ ಕ್ಷೇತ್ರ ವಿಸ್ತರಣೆಯಲ್ಲಿ ತೀವ್ರ ಆಸಕ್ತಿ. ಮನೆಯಲ್ಲಿ ಹಬ್ಬದ ವಾತಾವರಣದ ನಡುವೆ ವಿವಾಹ ಮಾತುಕತೆ.ಮಕ್ಕಳ ವ್ಯಾಸಂಗಾಸಕ್ತಿ ವೃದ್ಧಿಗೆ ಪ್ರಯತ್ನ ಅವಶ್ಯ.

ಮಿಥುನ: ಪೂರ್ವಸಿದ್ಧತೆಯಿಲ್ಲದೆ ಕಾರ್ಯಕ್ಕೆ ಧುಮುಕದಿರಿ. ದೇವಕಾರ್ಯದಲ್ಲಿ ಮನಸ್ಸು ತಲ್ಲೀನ. ಬಾಕಿಯುಳಿದಿರುವ ಕಾರ್ಯಗಳನ್ನು ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ಹೊಸ ಸವಾಲುಗಳು ಎದುರು.

ಕರ್ಕಾಟಕ: ಆರೋಗ್ಯದ ಮೇಲೆ ವಾತಾವರಣ ಪರಿವರ್ತನೆಯ ಪರಿಣಾಮ. ದೇವತಾರಾಧನೆಯಿಂದ ಮನೆಯಲ್ಲಿ ಶಾಂತಿ. ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಾಮಾಣಿಕತೆಗೆ ಪ್ರಾಧಾನ್ಯವಿರಲಿ.

ಸಿಂಹ: ವ್ಯವಹಾರ ಸುಧಾರಣೆ ಮತ್ತು ಕಾರ್ಯರಂಗ ವಿಸ್ತರಣೆಯ ಚಿಂತೆ. ಕಟ್ಟಡ ನಿರ್ಮಾಪಕರಿಗೆ ಕೆಲಸದ ಒತ್ತಡ. ವೃತ್ತಿಪರರಿಗೆ ನಿಗದಿತ ಅವಧಿಯಲ್ಲಿ ಕಾರ್ಯ ಮುಗಿಸುವ ಒತ್ತಡ. ಗೃಹಿಣಿಯರ ಆದಾಯ ಹೆಚ್ಚಳ.

Advertisement

ಕನ್ಯಾ: ಅಪಾತ್ರ ದಾನ ಮಾಡದಿರಿ.ದೇಹಾರೋಗ್ಯ ಉತ್ತಮ. ದೈವಾನುಗ್ರಹ ಪ್ರಾಪ್ತಿಗೆ ವಿಶೇಷ ಪ್ರಯತ್ನದಲ್ಲಿ ನಿರತರಾಗುವಿರಿ.ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಸುದ್ದಿ.

ತುಲಾ: ಮನಸ್ಸು ಸ್ಥಿರವಾದರೆ ಮುಂದಿನ ಮಾರ್ಗ ಗೋಚರ. ದೇಹಾರೋಗ್ಯ ಸಮಾಧಾನಕರ. ಬಂಧುವಿನ ಭರವಸೆ ತುಂಬುವ ಮಾತುಗಳಿಂದ ಧೈರ್ಯ. ಮಕ್ಕಳ ಭವಿಷ್ಯ ಭದ್ರವೆಂಬ ಭರವಸೆ ಇರಲಿ.

ವೃಶ್ಚಿಕ: ವೈಭವ ಇಲ್ಲವಾದರೂ ಸುಖಜೀವನಕ್ಕೆ ಕೊರತೆಯಿಲ್ಲ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ದೇವತಾರಾಧನೆಯಲ್ಲಿ ಆಸಕ್ತಿ. ಗೃಹಿಣಿಯರಿಗೆ, ಮಕ್ಕಳಿಗೆ ಸಂಭ್ರಮದ ದಿನ.

ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಮಕ್ಕಳ ಮದುವೆಯ ಮಾತುಕತೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿಯ ಪ್ರಗತಿ. ಗೃಹಾಲಂಕಾರದ ಕೆಲಸಗಾರ ರಿಗೆ ಕೈತುಂಬಾ ಕೆಲಸ. ಮಕ್ಕಳ ಆರೋಗ್ಯ ಉತ್ತಮ.

ಮಕರ: ತಾಳ್ಮೆ, ಜಾಣ್ಮೆಗಳೇ ನಿಮ್ಮ ಯಶಸ್ಸಿನ ಪ್ರಮುಖ ಸಾಧನಗಳು. ಸಾಧನೆಯ ಮಾರ್ಗದಲ್ಲಿ ಅಚಲವಾಗಿ ನಿಲ್ಲುವುದರಿಂದ ಇಷ್ಟಾರ್ಧ ಸಿದ್ಧಿ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ನಿಗದಿತ ಸಮಯ ದಲ್ಲಿ ಕಾರ್ಯ ಪೂರ್ತಿಗೆ ಮೇಲಿನವರ ಒತ್ತಡ.

ಕುಂಭ: ಧಾರ್ಮಿಕ ಚಿಂತನೆಯೊಂದಿಗೆ ಜನಸೇವೆಯಲ್ಲಿ ಆಸಕ್ತಿ. ಹೊಸ ಅವಕಾಶಗಳ ಅನ್ವೇಷಣೆ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಹಿರಿಯರಿಗೆ ಸ್ವಾವಲಂಬಿ ಬದುಕು. ಗೃಹಿಣಿಯರಿಗೆ ಸ್ವೋದ್ಯೋಗದಲ್ಲಿ ಆಸಕ್ತಿ ಹಾಗೂ ಪ್ರಯತ್ನದಲ್ಲಿ ಪ್ರಗತಿ. ಬಂಧುಗಳ ಮನೆಯ ಸಂಭ್ರಮ.

ಮೀನ: ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ. ಗಳಿಕೆಯ ಮಾರ್ಗ ಗಳು ಸುಲಭದಲ್ಲಿ ಗೋಚರ. ಶಿವ ವಿಷ್ಣು, ಆಂಜನೇಯರ ಉಪಾಸನೆಯಿಂದ ಸಮಸ್ಯೆಗಳು ದೂರ. ಹಿರಿಯರ ಆರೋಗ್ಯ ಉತ್ತಮ. ಸಂಗಾತಿ, ಮಕ್ಕಳಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ದೇವಾಲಯಕ್ಕೆ ಭೇಟಿ.

Advertisement

Udayavani is now on Telegram. Click here to join our channel and stay updated with the latest news.

Next