Advertisement
ಉದ್ಘಾಟನೆ ನೆರವೇರಿಸಿ ಶುಭ ಸಂದೇಶ ನೀಡಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ, ವಿಶ್ವಾದ್ಯಂತ ಆಚರಿಸಲ್ಪಡುವ ಕ್ರಿಸ್ಮಸ್ ಹಬ್ಬವು ಜನರಲ್ಲಿ ಶಾಂತಿ, ಪ್ರೀತಿ, ಸಹಿಷ್ಣುತೆಯ ಪ್ರತೀಕವಾಗಿದೆ. ಈ ಹಬ್ಬದ ಆಚರಣೆಯು ನಾಡಿನ ಜನರಲ್ಲಿ ನೆಮ್ಮದಿ ಮತ್ತು ಸಹೋದರತಾ ಭಾವನೆಯನ್ನು ಉಂಟು ಮಾಡುವಂತಾಗಲಿ ಎಂದು ಹೇಳಿದರು.
ಗೋದಲಿ ಬಗ್ಗೆ ಮಾತನಾಡುತ್ತಾ, ಏಸುವಿನ ಜನನದ ಘಟನಾವಳಿ ಪ್ರಕಾರ, ತುಂಬು ಗರ್ಭಿಣಿ ಮಾತೆ ಮರಿಯಾ ಮತ್ತು ಆಕೆಯ ಪತಿ ಜೋಸೆಫ್, ಜನಗಣತಿಗೆ ಹೆಸರು ನೋಂದಾಯಿಸಲು ತಮ್ಮ ಹುಟ್ಟೂರಾದ ಬೆತ್ಲೆಹೆಮ್‌ಗೆ ಹೋಗುತ್ತಾರೆ. ಅವರಿಗೆ ಅಲ್ಲೆಲ್ಲೂ ಸೂಕ್ತ ನೆಲೆ ಸಿಗದೆ, ಕೊನೆಗೆ ಊರ ಹೊರಗಿನ ಹಟ್ಟಿಯೊಂದರಲ್ಲಿ ವಿಶ್ರಮಿಸುತ್ತಾರೆ. ಆ ಸಂದರ್ಭ ಅತ್ಯಂತ ಬಡ ಪರಿಸರದಲ್ಲಿ ಏಸುವಿನ ಜನನವಾಗುತ್ತದೆ. ಈ ವೃತ್ತಾಂತವನ್ನು ಸಾದರಪಡಿಸುವ ಸಂಪ್ರದಾಯ ಕ್ರಿ.ಶ. 13ನೇ ಶತಮಾನದಲ್ಲಿ ಆರಂಭಗೊಂಡಿತು. ಅಂದಿನಿಂದ, ಗೋದಲಿಯ ರಚನೆ ಮತ್ತು ಶೃಂಗಾರ ಕ್ರಿಸ್ಮಸ್ ಆಚರಣೆಯ ಒಂದು ಭಾಗವಾಗಿ ವಿಶ್ವಾದ್ಯಾಂತ ಜನಪ್ರಿಯವಾಗಿದೆ. ಸಂತ ಫಿಲೋಮಿನಾ ಕ್ಯಾಂಪಸ್ ನ ಗೋದಲಿಯು ನೈಸರ್ಗಿಕ ಪರಿಸರದಲ್ಲಿಯೇ ನಿರ್ಮಾಣಗೊಂಡಿದೆ. ಕಾಲೇಜಿನ ದಿವ್ಯ ಚೇತನ ಸಂಘದ ಸದಸ್ಯರ ಅವಿರತ ಶ್ರಮದ ಫಲವಾಗಿ ರಚನೆಯಾದ ಈ ಗೋದಲಿಯು ನೋಡುಗರ ಕಣ್ಮನ ಸೆಳೆಯುತ್ತದೆ ಎಂದು ಹೇಳಿದರು.
Related Articles
Advertisement