Advertisement

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

05:39 PM Sep 18, 2024 | Team Udayavani |

ನಮ್ಮ ಪರಿಚಿತ ವ್ಯಕ್ತಿಗಳನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸುವಾಗ ನಿಮ್ಮ ಹಣೆಬರಹ ಚನ್ನಾಗಿದೆ, ಕೈತುಂಬ ಹಣ, ಜೀವನ ಸುಖಮಯವಾಗಿದೆ ಎಂಬೆಲ್ಲ ಉತ್ತರಗಳು ಮಳೆಯಂತೆ ಸುರಿಯುತ್ತವೆ. ಇದಕ್ಕೆ ಕಾರಣ ಅವರಲ್ಲಿನ ಹತಾಶೆ, ನೋವು, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರವೃತ್ತಿ. ಜೀವನವನ್ನು ಎದುರಿಸದೇ ಎದುರಿಗಿದ್ದವರನ್ನು ಹೊಗಳುವ ಜಾಯಮಾನ ಅವರದು.

Advertisement

ಪ್ರಪಂಚ ವಿಶಾಲವಾಗಿದೆ ಹಾಗೂ ಸ್ಪರ್ಧಾತ್ಮಕವಾಗಿದೆ. ಏನೇನೋ ಆಗಬೇಕೆಂದು ಸಾಲಸೂಲ ಮಾಡಿ ಹಣವನ್ನು ಕೂಡಿಟ್ಟು ಉನ್ನತವಾದ ಡಿಗ್ರಿಗಳನ್ನು ಕಷ್ಟಪಟ್ಟು ಪಡೆದುಕೊಳ್ಳುತ್ತೇವೆ. ಆದರೆ ಅದರ ಉಪಯೋಗ ಮಾಡಿಕೊಳ್ಳದೆ ಬೋನಿಗೆ ಬಿದ್ದ ಇಲಿಯಂತೆ ಒದ್ದಾಡುತ್ತೇವೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳದ ಹಾಜಬ್ಬನವರು ಕಿತ್ತಳೆ ಹಣ್ಣನ್ನು ಮಾರಿ ಶಾಲೆಯೊಂದನ್ನು ಕಟ್ಟಿಸಿದ್ದಾರೆ ಎಂದಾದರೆ ಅವರ ಶ್ರಮ ಮತ್ತು ಸಾಧನೆ ಇತರಿಗೆ ಮಾದರಿ.

ನಮ್ಮ ಹಣೆಬರಹವೇ ಸರಿ ಇಲ್ಲ ಅನ್ನುವವರು ಹೆದರುಪುಕ್ಕಲರು. ಏನನ್ನೂ ಸಾಧಿಸದವರು ಇತರರಿಗೆ ಮಾದರಿಯಾಗಲು ಸಾಧ್ಯವೇ ಇಲ್ಲ. ಎದುರಾಗುವ ಸಮಸ್ಯೆಗಳಿಗೆ ಅಂಜಿ ಹಿಂದೆ ಸರಿಯುವ ಬದಲು ಪ್ರಯತ್ನಿಸಿ ನೋಡೇ ಬಿಡೋಣ ಎನ್ನುವ ಮನೋಭಾವ ಬೆಳೆಸಿಕೊಳ್ಳಿ. ಪ್ರಯತ್ನ ಯಶಸ್ವಿಯಾದರೆ ಗೆಲುವಿನ ಉತ್ತುಂಗ, ಸೋತರೆ ಒಳ್ಳೆಯ ಅನುಭವ. ಖ್ಯಾತ ವಿಜ್ಞಾನಿಯೊಬ್ಬರ ನೂರು ಪ್ರಯತ್ನಗಳು ವಿಫ‌ಲಗೊಂಡು ಕೊನೆಯ ಪ್ರಯತ್ನ ಯಶಕಂಡಿದ್ದು ಇತಿಹಾಸ. ಹುಟ್ಟುತ್ತಲೆ ಯಾರೂ ಸಾಧಕರಲ್ಲ ಅವರ ಸುತ್ತಲಿನ ಪರಿಸರ ಅವರ ಸಾಧನೆಗೆ ಪ್ರೇರಣೆಯಾಗುತ್ತದೆ.

ದೇಶದ ಮಾಜಿ ಪ್ರಧಾನಿ ತಮಿಳುನಾಡಿನ ಎÇÉೋ ಒಂದು ಕಡೆ ಬೀಡಿಯನ್ನು ಮಾರುವ ಹುಡುಗ ದೇಶದ ಉನ್ನತ ಹುದ್ದೆಗೆ ಏರುತ್ತಾನೆಂದರೆ ಸಾಮಾನ್ಯದ ಮಾತಲ್ಲ ಬಿಡಿ. ಈಗಿನ ಕಾಲದಲ್ಲಿ ನೌಕರಿಗಳು ಅದೃಷ್ಟವನ್ನು ಅವಲಂಭಿಸಿಲ್ಲ ಬದಲಾಗಿ ಸ್ಪರ್ಧೆಯನ್ನು ಅವಲಂಬಿಸಿವೆ. ನಾವು ಆಯ್ದುಕೊಂಡ ಮಾರ್ಗವನ್ನು ಹಣೆಬರಹಕ್ಕೆ ಹೋಲಿಸುವುದು ವ್ಯರ್ಥವಷ್ಟೆ. ಎದುರಿಸುವ ಮನೋಭಾವ ನಿಮ್ಮಲ್ಲಿ ಇಲ್ಲದಿದ್ದರೆ ಚಿಕ್ಕ ಸಮಸ್ಯೆಯೂ ಬೆಟ್ಟದಂತೆ ಗೋಚರಿಸುತ್ತದೆ. ಹಾಗಾಗಿ ಆಯ್ಕೆ ನಿಮ್ಮ ಕೈಯಲ್ಲಿದೆ.

-ಶಂಕರಾನಂದ

Advertisement

ಹೆಬ್ಟಾಳ

Advertisement

Udayavani is now on Telegram. Click here to join our channel and stay updated with the latest news.

Next