Advertisement

Ludhiana: ಗಾಜಿನ ಡೋರ್‌ ಬಿದ್ದು ಮಗು ಸಾವು

10:01 PM Nov 28, 2023 | Team Udayavani |

ಲುಧಿಯಾನಾ: ಪಂಜಾಬ್‌ನ ಲುಧಿಯಾನದ ಶೋರೂಮ್‌ ಒಂದರಲ್ಲಿ ಗಾಜಿನ ಬಾಗಿಲು ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಬಿದ್ದು ಅಸುನೀಗಿದೆ. ನಗರದ ಮಾಲ್‌ ಒಂದರಲ್ಲಿ ಈ ಘಟನೆ ನಡೆದಿದೆ. ಮಗು ಗಾಜಿನ ದೊಡ್ಡ ಬಾಗಿಲು ತೆರೆಯುತ್ತಿದ್ದಂತೆಯೇ ಅದು ಆಕೆಯ ಮೇಲೆ ಬಿದ್ದಿದೆ.

Advertisement

ತೀವ್ರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಯಿತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮಗು ಕೊನೆಯುಸಿರೆಳೆಯಿತು. ಮಾಲ್‌ನ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಾವಳಿ ದಾಖಲಾಗಿದ್ದು, ಅದು ಈಗ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next