ಲಡಾಖ್: ಮುಂಬರುವ ದಿನಗಳಲ್ಲಿ ಜಗತ್ತನ್ನು ಕಾಡುವ ಯಾವುದೇ ಯುದ್ಧದಲ್ಲಿ ವಾಯುಪಡೆಯು ಪ್ರಮುಖ ಪಾತ್ರ ಪಾತ್ರವಹಿಸುತ್ತದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ನೆರೆಹೊರೆಯವರಿಂದ ಹೆಚ್ಚುತ್ತಿರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಯುದ್ಧದ ವೇಳೆ ಎದುರಾಗಬಹುದಾದ ಪ್ರತಿಯೊಂದು ಅವಶ್ಯಕತೆಗಳನ್ನು ನಾವು ಸೂಕ್ಷವಾಗಿ ಗಮನದಲ್ಲಿಟ್ಟುಕೊಂಡು ಹೋರಾಡಬೇಕಿದೆ. ಯುದ್ಧದಲ್ಲಿ ಸೆಣಸಾಡಲು ನಮ್ಮ ವಾಯುಪಡೆ ಪೂರ್ಣ ಸಾಮರ್ಥ್ಯದೊಂದಿಗೆ ಸನ್ನದ್ಧವಾಗಿದೆ ಎಂದಿದ್ದಾರೆ.
ಲಡಾಖ್‌ನಲ್ಲಿ ಸೇನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾದ ಕುರಿತ ಪ್ರಶ್ನೆಗೆ ಉತ್ತರಿಸಿದ ವಾಯುಪಡೆಯ ಮುಖ್ಯಸ್ಥರು, ಅಗತ್ಯವಿರುವ ಎಲ್ಲ ಕಾರ್ಯಾಚರಣೆ ಸ್ಥಳಗಳಲ್ಲಿ ನಾವು ಸರ್ವಸನ್ನದ್ಧವಾಗಿದ್ದೇವೆ. ಯಾವುದೇ ಸವಾಲನ್ನು ಎದುರಿಸಲು ನಾವು ಶಕ್ತರಾಗಿದ್ದೇವೆ. ಭಾರತೀಯ ಗಡಿಯನ್ನು ರಕ್ಷಿಸುವ ನಮ್ಮ ನಿಲುವು ಅಚಲ. ಇದರಲ್ಲಿ ವಿವಾದದ ಪರಿಸ್ಥಿತಿ ಎದುರಾದರೆ ಚೀನ ನಮ್ಮಿಂದ ಸರಿಯಾದ ಉತ್ತರವನ್ನು ಪಡೆಯಲಿದೆ ಎಂದು ಅವರು ಹೇಳಿದ್ದಾರೆ.
Related Articles
ಯಾವುದೇ ವಿವಾದವನ್ನು ಎದುರಿಸಲು ವಾಯುಪಡೆಯು ಸಿದ್ಧವಾಗಿದೆ. ಒಂದು ವೇಳೆ ಎರಡು ರಾಷ್ಟ್ರಗಳಿಂದ ಯುದ್ಧದ ಪರಿಸ್ಥಿತಿ ಎದುರಾದರೆ ಆ ಸಂದರ್ಭದಲ್ಲಿ ನಾವು ಹೋರಾಡಲು ಸಿದ್ಧರಿದ್ದೇವೆ. ರಾಫೆಲ್, ಅಪಾಚೆ ಮತ್ತು ಚಿನೂಕ್ ನಮ್ಮ ಕಾರ್ಯಾಚರಣೆಯ ಪರಿಕಲ್ಪನೆಗೆ ಲಿಂಕ್ ಮಾಡಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ರಾಫೆಲ್ ಮತ್ತು ಎಲ್‌ಸಿಎ ಮಾರ್ಕ್ 1 ಸ್ಕ್ವಾಡ್ರನ್ ತಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲಿದೆ.
ಅಕ್ಟೋಬರ್ 8ರಂದು ನಡೆಯಲಿರುವ ವಾಯುಪಡೆ ದಿನಾಚರಣೆಯ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ರಫೇಲ್ ಸಮಾರಂಭದಲ್ಲಿ ಭಾಗವಹಿಸಲಿದೆ ಎಂದು ದೈನಿಕ್ ಬಾಸ್ಕರ್ ವರದಿ ಮಾಡಿದೆ.