Advertisement
ಪಂಚ ರಥೋತ್ಸವದ ಪ್ರಮುಖ ಕೇಂದ್ರ ಬಿಂದುವಾದ ಐದು ರಥಗಳು ಶಿಥಿಲಗೊಂಡಿದ್ದು, ಈ ಪೈಕಿ ಮೂರು ರಥಗಳು ಚಲಿಸಲು ಸಾಧ್ಯವಿಲ್ಲದಷ್ಟು ದುಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಈ ಮೂರು ರಥಗಳನ್ನು ಜಾತ್ರೆ ಅಂಗವಾಗಿ ತಾತ್ಕಾಲಿಕವಾಗಿ ದುರಸ್ತಿಪಡಿಸಲಾಗುತ್ತಿದೆ. ರಥಗಳ ದುರಸ್ತಿ ಕಾರ್ಯ ಅತ್ಯಂತ ಭರದಿಂದ ಸಾಗಿದೆ.
Related Articles
Advertisement
ಇತ್ತೀಚೆಗೆ ತಿಪಟೂರಿನ ರಂಗಾಪುರ ಮಠದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಬೆಳ್ಳಿ ಹಾಗೂ ಮರಗಳ ಐದು ರಥ ಹಾಗೂ ಕಾರ್ಕಾಳದ ದೇವಾಲಯಕ್ಕೆ ಪುಷ್ಪರಥ ನಿರ್ಮಿಸಿದ ಹೆಗ್ಗಳಿಕೆ ತಮ್ಮ ಕುಟುಂಬದ್ದಾಗಿದೆ ಎಂದು ಗಂಗಾಧರ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಹೊರರಥಕ್ಕೆ 2 ವರ್ಷ ಸಮಯ: ಈ ರಥದ ಬದಲಾಗಿ ಇದೇ ರೀತಿಯ ವಾಸ್ತು ವಿನ್ಯಾಸದ ಶಿಲ್ಪಕಲೆಯುಳ್ಳ ಇದರ ತದ್ರೂಪದ ನೂತನ ರಥ ನಿರ್ಮಿಸಬೇಕಿದೆ. ಹೊಸ ರಥ ನಿರ್ಮಿಸಲು ಎರಡು ವರ್ಷ ಸಮಯ ಬೇಕಾಗುತ್ತದೆ.
ರಥಕ್ಕೆ ಬೇಕಿದೆ ನೆರಳು: ಪ್ರತಿವರ್ಷ ಪಂಚ ಮಹಾರಥೋತ್ಸವದ ವೈಭವಕ್ಕೆ ಸಾಕ್ಷಿಯಾಗುವ ಈ ಐದು ರಥಗಳು ಸೂಕ್ತ ನೆರಳು ವ್ಯವಸ್ಥೆಯಿಲ್ಲದೇ ಮಳೆ, ಗಾಳಿ, ಬಿಸಿಲುಗೆ ಸಿಲುಕಿ ಸಂಪೂರ್ಣವಾಗಿ ಶಿಥಿಲಗೊಂಡಿವೆ. ದುರಸ್ತಿ ಕಾರ್ಯ ಮುಗಿದ ಬಳಿಕವಾದರೂ ರಥಗಳಿಗೆ ಸಮರ್ಪಕ ನೆರಳಿನ ವ್ಯವಸ್ಥೆ ಕಲ್ಪಿಸಿ ದೀರ್ಘಕಾಲ ಬಾಳಿಕೆ ಬರುವಂತೆ ಮಾಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಮಾ.19ಕ್ಕೆ ಪಂಚ ಮಹಾರಥೋತ್ಸವ: ಮಾ.19ರಂದು ಮಂಗಳವಾರ ಬೆಳಗ್ಗೆ 5.20 ರಿಂದ 6.20ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪಂಚ ಮಹಾ ರಥೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇದಕ್ಕಾಗಿ ಮೂಲಭೂತ ಸೌಲಭ್ಯ ಕಲ್ಪಿಸಲು ದೇಗುಲದ ಆಡಳಿತ ಮಂಡಳಿ ಸಜ್ಜಾಗುತ್ತಿದೆ. ದೇಗುಲದ ಪ್ರಮುಖ ಸ್ಥಳಗಳಲ್ಲಿ ಹಾಗೂ ಕಪಿಲಾ ನದಿ ದಡದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತಾದಿಗಳಿಗೆ ಬೃಹತ್ ಅನ್ನ ಸಂತರ್ಪಣೆ, ಪಾನಕ ನೀಡಲು ವಿವಿಧ ಸಂಘ ಸಂಸ್ಥೆಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.
* ಶ್ರೀಧರ್ ಆರ್. ಭಟ್