ಅವಲಂಬಿತ ಕೃಷಿಕರಿಗೆ ಸಮಸ್ಯೆಯಾಗಿದ್ದು, ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಬೋರ್‌ವೆಲ್ ಆಧರಿತ ನೀರಾವರಿ ಅವಲಂಬಿಸಿರುವ ರೈತರು ಬೆಳೆಗೆ ನೀರುಣಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ಪರಿವರ್ತಕ ಅಳವಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಹಾಕಿದ ಬೆಳೆಗಳಿಗೆ ಸಕಾಲದಲ್ಲಿ ನೀರು ಪೂರೈಸದ್ದರಿಂದ ಒಣಗಲಾರಂಭಿಸಿದ್ದು, ತುರ್ತಾಗಿ ಕೆಪಿಟಿಸಿಎಲ್ ರೈತರ ನೆರವಿಗೆ ಧಾವಿಸಬೇಕಿದೆ. ವಿದ್ಯುತ್ ಕೈ ಕೊಟ್ಟು ಆರು ದಿನ ಕಳೆದಿದ್ದು, 1.50 ಕೋಟಿ ವೆಚ್ಚದ ಟ್ರಾನ್ಸ್ ಫಾರ್ಮರ್ ತರಿಸುವ ಪ್ರಯತ್ನ ಮುಂದುವರಿದಿದೆ.
Advertisement
ಎಲ್ಲೆಲ್ಲಿ ಸಮಸ್ಯೆ?: ತುರುವಿಹಾಳ ಉಪಕೇಂದ್ರದಿಂದ ತಾಲೂಕಿನ ವಿರೂಪಾಪುರ, ಕಲ್ಮಂಗಿ, ಚಿಕ್ಕಬೇರಿ, ಕೆ. ಹೊಸಳ್ಳಿ, ಏಳುಮೈಲ್ ಕ್ಯಾಂಪ್, ಉಮಲೂಟಿಸೇರಿದಂತೆ ಇತರ ಗ್ರಾಮಗಳಿಗೆ ವಿದ್ಯುತ್ ಪೂರೈಸಬೇಕಿದೆ. ಉಪಕೇಂದ್ರದಲ್ಲಿನ 10ಮೆ. ವ್ಯಾಟ್ ಟ್ರಾನ್ಸ್‌ಫಾರ್ಮರ್ ಸುಟ್ಟು ನಾಲ್ಕು ದಿನ ಕಳೆದರೂ ಹೊಸ ಟ್ರಾನ್ಸ್‌ಫಾರ್ಮರ್ ಜೋಡಣೆಯಾಗಿಲ್ಲ.
ಸೀತಾಫಲ, ಮೋಸಂಬಿ, ದಾಳಿಂಬೆ ತೋಟಗಳು ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಪಂಪ್‌ಸೆಟ್ ಆರಂಭವಾದರಷ್ಟೇ ನೀರು ಪೂರೈಕೆಯಾಗುತ್ತದೆ.
ನಿರಂತರ ವಿದ್ಯುತ್ ಫೂರೈಕೆ ಇದ್ದಾಗಲೂ ತ್ರಿಫೇಸ್ ನಂತೆ 3 ತಾಸು ಪಂಪ್‌ಸೆಟ್ ಚಾಲ್ತಿಯಲ್ಲಿರುತ್ತವೆ. ಇದೇ ಲೆಕ್ಕದ ಮೇಲೆ ಜಮೀನಿನಲ್ಲಿ ಬೆಳೆ ಹಾಕಿದ ರೈತರಿಗೆ ರೋಟೇಶನ್ ಪ್ರಕಾರ ಎಲ್ಲ ಜಮೀನಿಗೆ ನೀರು ಪೂರೈಸುವಲ್ಲಿ ಸಮಸ್ಯೆಯಾಗಿದೆ. ತಾತ್ಕಾಲಿಕ ವ್ಯವಸ್ಥೆಯಾದರೂ ತ್ರಿಫೇಸ್ ವಿದ್ಯುತ್ ಸಮರ್ಪಕವಾಗಿ ದೊರೆಯದ್ದರಿಂದ ಗೊಂದಲ ಏರ್ಪಟ್ಟಿದೆ. ಕೆಪಿಟಿಸಿಎಲ್ ಜತೆ ಚರ್ಚೆ: ಜೆಸ್ಕಾಂ ವ್ಯವಸ್ಥಾಪಕ
ನಿರ್ದೇಶಕ ಪಾಂಡ್ವೆ ರಾಹುಲ್ ತುಕಾರಾಂ ತಾಲೂಕಿಗೆ ಭೇಟಿ ನೀಡಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಆದರೆ, ತಾಲೂಕಿನ ರೈತರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಗಮನ ಸೆಳೆದಾಗ, ಈ ವಿಷಯ ಗೊತ್ತಿರಲಿಲ್ಲ ಎಂದರು. ನಾಲ್ಕು ದಿನ ವಿಳಂಬ ಏಕೆ? ಎಂದು ಅಧಿ ಕಾರಿಗಳಿಗೆ ಪ್ರಶ್ನಿಸಿದ ಅವರು, ತುರ್ತಾಗಿ ಕರೆಂಟ್ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ಅಧಿ ಕಾರಿಗಳಿಗೆ ಸೂಚಿಸಿದರು. ಈ ನಡುವೆ ಶಾಸಕ ಪ್ರತಾಪ್‌ಗೌಡ ಪಾಟೀಲ್ ಕೂಡ ಜೆಸ್ಕಾಂ ಎಂಡಿಯವರ ಜತೆ ಚರ್ಚಿಸಿದ್ದು, 10 ಮೆ.ವ್ಯಾ. ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ತ್ವರಿತವಾಗಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಕೆಯಾದರೆ ಮಾತ್ರ ರೈತರ ಬೆಳೆಗಳು ಉಳಿಯಲಿದ್ದು, ಮೇಲಧಿ ಕಾರಿಗಳು ಈ ಬಗ್ಗೆ ತುರ್ತು ಕಾರ್ಯಪ್ರವೃತ್ತರಾಗಬೇಕಿದೆ.
Related Articles
Advertisement