ಹೊಸದಿಲ್ಲಿ: ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಯಶಸ್ಸಿನ ನಿರೀಕ್ಷೆ ಹೊತ್ತಿರುವ ಇಸ್ರೋಗೆ, ತನ್ನ ವಿಕ್ರಂ ಲ್ಯಾಂಡರ್ ಅನ್ನು ಚಂದಿರನ ಅಂಗಳದಲ್ಲಿ ಇಳಿಸಲು ಹಲವು ಸವಾಲುಗಳನ್ನು ಎದುರಿ ಸಲೇಬೇಕಾದ ಅನಿವಾರ್ಯತೆಯಿದೆ.
ದೂರದಿಂದ ನೋಡುವ ನಮಗೆ ಚಂದಿರನೆಂದರೆ ತಂಪು ಎಂಬ ಭಾವನೆ ಬರುತ್ತದೆ. ಆದರೆ, ವಾಸ್ತವದಲ್ಲಿ ಚಂದ್ರ ನಲ್ಲಿನ ವಾತಾವರಣ ವಿಪರೀತ ತಾಪ ಹಾಗೂ ವಿಪರೀತ ಶೀತದಿಂದ ಕೂಡಿದೆ. ಅಂದರೆ, ಚಂದ್ರನ ಸಮಭಾಜಕದ ಸಮೀಪ ಹಗಲು ಹೊತ್ತಿನ ತಾಪ ಮಾನ 120 ಡಿಗ್ರಿ ಸೆಲಿÏಯಸ್ ಇದ್ದರೆ, ರಾತ್ರಿ ಹೊತ್ತು ಇದು ಸುಮಾರು -130 ಡಿ.ಸೆ. ಆಗಿರುತ್ತದೆ. ಅಂದರೆ, ಇಲ್ಲಿ ಉಷ್ಣವಾಗಲೀ, ಶೀತವಾಗಲೀ ಎರಡೂ ವಿಪರೀತದಲ್ಲೇ ವಿಪರೀತ ಎಂಬಂತಿರುತ್ತದೆ ಎನ್ನುತ್ತಾರೆ ನಾಸಾದ ಮಾಜಿ ಥರ್ಮಲ್ ಎಂಜಿನಿಯರ್ ರಾನ್ ಕ್ರೀಲ್. ಕ್ರೀಲ್ ಅವರು 1969 ರಿಂದಲೂ ಅಪೋಲೋ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದವರು.
ಇನ್ನು ಇಸ್ರೋದ ವಿಕ್ರಂ ಲ್ಯಾಂಡ್ ಆಗುವ ಪ್ರದೇಶದಲ್ಲಿ ರಾತ್ರಿ ಹೊತ್ತು ತಾಪ ಮಾನ -180 ಡಿ.ಸೆ.ಇರುತ್ತದೆ. ಇದು ಅಂಟಾರ್ಟಿಕಾದ ಅತಿ ಚಳಿಯ ರಾತ್ರಿ ಎಂದು ನಾವು ಏನನ್ನು ಕರೆಯುತ್ತೇವೆಯೋ, ಅದಕ್ಕಿಂತಲೂ ಹೆಚ್ಚಿನ ಚಳಿಯಿರುವ ಸ್ಥಿತಿ. ಇಂಥ ತಾಪಮಾನದಲ್ಲಿ ಸೆನ್ಸರ್‌ಗಳು ಹಾಗೂ ಕ್ಯಾಮೆರಾಗಳಲ್ಲಿನ ಬಹುತೇಕ ಎಲೆಕ್ಟ್ರಾನಿಕ್ಸ್‌ಗಳು ಕೆಲಸ ಮಾಡುವುದನ್ನೇ ನಿಲ್ಲಿಸಿ ಬಿಡುತ್ತವೆ ಎಂದು ಚಂದ್ರಯಾನ 1ರ ವಿಜ್ಞಾನಿಗಳ ತಂಡದ ಪ್ರಮುಖರಾದ ನರೇಂದ್ರ ಭಂಡಾರಿ ಹೇಳಿದ್ದಾರೆ.
ಈವರೆಗೆ ಕೇವಲ ಮೂರು ಚಂದ್ರ ಯಾನ ಯೋಜನೆಗಳಷ್ಟೇ ಚಂದ್ರನಲ್ಲಿನ ರಾತ್ರಿ ಯನ್ನು ಯಶಸ್ವಿಯಾಗಿ ಕಳೆದಿವೆ. ಆದರೆ ಈ ಮೂರರಲ್ಲೂ ಚಂದ್ರನ ಶೀತ ವಾತಾ ವರಣವನ್ನು ಎದುರಿಸಲೆಂದೇ ರೇಡಿಯೋ ಐಸೋಟೋಪ್‌ಗ್ಳನ್ನು ಬಳಸ ಲಾಗಿತ್ತು. ಆದರೆ, ಭಾರತವು ಈವರೆಗೆ ತನ್ನ ಬಾಹ್ಯಾಕಾಶ ಯೋಜನೆ ಗಳಲ್ಲಿ ಪರಮಾಣು ಚಾಲಿತ ವ್ಯವಸ್ಥೆಗಳನ್ನು ಬಳಸದೇ ಇರಲು ನಿರ್ಧರಿಸಿದೆ.
ಚಂದ್ರನಲ್ಲಿನ ಈ ವಿಪರೀತ ಶೀತ ವಾತಾ ವರಣದಲ್ಲಿ ವೈಜ್ಞಾನಿಕ ಉಪಕರಣಗಳು ಹಾಗೂ ಎಲೆಕ್ಟ್ರಾನಿಕ್ಸ್‌ಗಳು ನಿರುಪಯುಕ್ತಗೊಳ್ಳುವಂಥ, ಬ್ಯಾಟರಿಗಳು ಚಾರ್ಜ್ ಆಗದೇ ಇರುವಂಥ ಅಥವಾ ಸಂವಹನ ವ್ಯವಸ್ಥೆಯೇ ವಿಫಲಗೊಳ್ಳುವಂಥ ಅಪಾಯ ಹೆಚ್ಚು. ಈಗ ಈ ಎಲ್ಲ ಸವಾಲು ಗಳನ್ನೂ ಎದುರಿಸಿ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿರೀಕ್ಷೆಯನ್ನು ಇಸ್ರೋ ವಿಜ್ಞಾನಿಗಳು ಹೊಂದಿದ್ದಾರೆ.