Advertisement
ಆದರೆ ಕೋವಿಡ್‌ನಿಯಮಾನುಸಾರ ಅಂತ್ಯಕ್ರಿಯೆ ಮಾಡಲು ತಾಲೂಕುಆಡಳಿತಕ್ಕೆ ಸವಾಲಾಗಿದೆ.ನಗರದ ಡಿ.ಕ್ರಾಸ್ ರಸ್ತೆಯ ನಾಗರಕೆರೆ ಅಂಚಿನಲ್ಲಿರುವಸ್ಮಶಾನದಲ್ಲಿ ಕಳೆದ ಬಾರಿಯಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಆರಂಭಿಸಲಾಗಿ, ಮೊದಲುಶವಗಳನ್ನು ಹೂಳಲಾಗುತ್ತಿತ್ತು. ಈಗ ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಮೃತ ದೇಹಗಳನ್ನು ಸುಡಲಾಗುತ್ತಿದೆ. ಆದರೆ ದಿನೇ ದಿನೇ ಹೆಚ್ಚಾಗುತ್ತಿರುವ ಮೃತದೇಹಗಳಿಂದಾಗಿ, ಕೋವಿಡ್ ಮಾರ್ಗಸೂಚಿಗಳ ಸುರಕ್ಷತಾನಿಯಮಗಳು ಪಾಲನೆಯಾಗುತ್ತಿಲ್ಲ ಎಂದು ದೂರು,ಅಂತ್ಯ ಸಂಸ್ಕಾರಕ್ಕಾಗಿ ಹೆಚ್ಚಿನ ಹಣ ವಸೂಲಿಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
Related Articles
Advertisement
ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ :ನಗರದಹೊರವಲಯದ ಚಿಕ್ಕತುಮಕೂರು ಸಮೀಪವಿರುವದೇವಾಂಗ ಮಂಡಲಿ ನಿರ್ವಹಿಸುತ್ತಿರುವ ಮುಕ್ತಿಧಾಮದಲ್ಲಿಕೋವಿಡ್‌ನಿಂದ ಮೃತಪಟ್ಟವರನ್ನು ಸುಡಲು ವ್ಯವಸ್ಥೆಮಾಡಲಾಗಿದೆ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್‌ತಿಳಿಸಿದ್ದಾರೆ. ಮುಕ್ತಿಧಾಮದ ವ್ಯವಸ್ಥೆಗಳನ್ನು ಪರಿಶೀಲಿಸಿದಬಳಿಕ ಮಾತನಾಡಿ, ಮುಕ್ತಿಧಾಮದಲ್ಲಿ ಈಗಾಗಲೇ ಬುಧವಾರ ಸಂಜೆ 2 ಕೋವಿಡ್ ಮೃತದೇಹಗಳನ್ನುಸುಡಲಾಗಿದೆ. ಇಲ್ಲಿ ಕೋವಿಡ್ ಮೃತದೇಹ ಸುಡಲುದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್‌ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಇಲ್ಲಿರುವ 6ರ ಪೈಕಿ2 ಸಿಲಿಕಾನ್ ಕಂಟೈನರ್‌ಗಳನ್ನು ಕೋವಿಡ್ ಮೃತದೇಹವನ್ನುಸುಡಲು ದೇವಾಂಗ ಮಂಡಲಿ ಅನುಮತಿ ನೀಡಿದ್ದಾರೆ.
ಕೋವಿಡ್ ಹೊರತಾದ ಸ್ವಾಭಾವಿಕ ಸಾವುಗಳಿಂದಮೃತಪಟ್ಟಿರುವವರಿಗೆ ಉಳಿದ ಸಿಲಿಕಾನ್ ಕಂಟೈನರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ತಾಲೂಕು ಆಡಳಿತನೇಮಿಸಿರುವ ತಂಡವೇ ಮುಕ್ತಿಧಾಮದ ಆಡಳಿತದೊಂದಿಗೆಸಂಪರ್ಕದಲ್ಲಿದ್ದು, ನಿಯಮಾನುಸಾರ ಅಂತ್ಯಕ್ರಿಯೆನಡೆಸುತ್ತದೆ. ಆ್ಯಂಬುಲೆನ್ಸ್‌ಗಾಗಿ ಯಾರೂ ಹಣಕೊಡಬೇಕಿಲ್ಲ. ದೇವಾಂಗ ಮಂಡಲಿಯ ಮುಕ್ತಿಧಾಮದ ಅಂತ್ಯಕ್ರಿಯೆ ನಿಯಮದಂತೆ ಅಂತ್ಯಕ್ರಿಯೆ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದರು.ಪರಿಶೀಲನೆ ವೇಳೆ ನಗರಸಭೆ ಪೌರಾಯುಕ್ತ ರಮೇಶ್‌ಎಸ್.ಸುಣಗಾರ್, ದೇವಾಂಗ ಮಂಡಲಿ ಅಧ್ಯಕ್ಷಎಂ.ಜಿ.ಶ್ರೀನಿವಾಸ್ ಇತರರಿದ್ದರು.