ರಾಮನಗರ: ಬಿಡದಿಯಲ್ಲಿ ಈವರೆಗೂ 6 ಕೋವಿಡ್ 19 ಪಾಸಿಟಿವ್ ಪ್ರಕರಣಗಳು, ಒಂದು ಸಾವು ಮತ್ತು 52 ಮಂದಿ ಕ್ವಾರಂಟೈನ್ ಮಾಡಲಾಗಿದೆ. ಪಟ್ಟಣದ ಹೊಸಬೀದಿ ಮತ್ತು 8ನೇ ವಾರ್ಡ್ ಪ್ರದೇಶ ಸೀಲ್ ಡೌನ್ ಆಗಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವು ದು ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಅಧಿಕಾರಿ ಗಳು ಎಲ್ಲ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಮಾಗಡಿ ಶಾಸಕ ಎ.ಮಂಜುನಾಥ್ ಸೂಚಿಸಿದರು.
ತಾಲೂಕಿನ ಬಿಡದಿ ಪುರಸಭೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್-19 ಪ್ರಕರಣ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ಆಯೋಜಿಸಿದ್ದರು. ಸೀಲ್‌ಡೌನ್ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ತಮ್ಮ ವೈಯಕ್ತಿಕವಾಗಿ ಆಹಾರ ಕಿಟ್ ವಿತರಿಸುವುದಾಗಿ ತಿಳಿಸಿದರು. ಪುರಸಭೆಯಿಂದಲೂ ಆಹಾರದ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಬೇಕು. ಆಶಾ ಕಾರ್ಯಕರ್ತೆಯರು ಮತ್ತು ಪೌರ ಕಾರ್ಮಿಕರಿಗೆ ಪಿಪಿಇ ಕಿಟ್ ವಿತರಿಸಬೇಕು ಎಂದರು.
ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರಾಘವೇಂದ್ರ ಮಾತನಾಡಿ, ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ನಾಗರಿ ಕರು ಆತಂಕ ಪಡುವ ಅಗತ್ಯವಿಲ್ಲ. ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸ ಬೇಕು ಎಂದು ಮಾಹಿತಿ ನೀಡಿದರು. ಪಟ್ಟಣದ ವಾರ್ಡುಗಳಲ್ಲಿ ಕಸ ವಿಲೆವಾರಿ ಆಗುತ್ತಿಲ್ಲ, ಗಬ್ಬೆದ್ದು ನಾರುತ್ತಿದೆ ಎಂಬ ಆರೋಪಗಳು ಸಭೆಯಲ್ಲಿ ವ್ಯಕ್ತವಾದವು. ಕೋವಿಡ್-19 ಜೊತೆಗೆ ಬೇರೆ ಸಾಂಕ್ರಮಿಕ ರೋಗಗಳಿಗೆ ಅವಕಾಶವಾಗುವುದನ್ನು ತಪ್ಪಿಸಿ ಎಂದು ಪುರ ಸಭೆ ಸದಸ್ಯರು ಒತ್ತಡ ಹೇರಿದರು.
ಈ ಆರೋಪಕ್ಕೆ ಅಧಿ ಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಸದಸ್ಯರು ತಿಳಿಸುವ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಇದು ಸಾಧ್ಯವಾಗದ ಅಧಿಕಾರಿಗಳು ಬೇರೆ ತಮಗೆ ಅನುಕೂಲವಿರುವ ಸ್ಥಳಕ್ಕೆ ಹೋಗಬಹುದು ಎಂದು ಖಡಕ್ ಎಚ್ಚರಿಕೆ ನೀಡಿದರು. ಪುರಸಭೆ ಸದಸ್ಯ ದೇವರಾಜು, ಕುಮಾರ್, ವೈ.ರಮೇಶ್, ರಾಕೇಶ್, ಸರ ಸ್ವತಿ, ಶಿವಕುಮಾರ್, ಸಂತೋಷ್, ಮುಖ್ಯಾಧಿಕಾರಿ ಚೇತನ್ ಎಸ್.ಕೊಳವಿ, ಉಪತಹಸೀಲ್ದಾರ್ ಮಂಜು ನಾಥ್ ಮತ್ತಿತರರು ಇದ್ದರು.