Advertisement

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ

06:56 AM Feb 27, 2019 | Team Udayavani |

ಹಾಸನ: ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವುದರೊಂದಿಗೆ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಂದಿ ಹಾಡಿದರು. ಇದೇ ಸಂದರ್ಭದಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್‌ ಅವರು ನಾಡಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ ಮೊಳಗಿದವು. 

Advertisement

ನಾಡು, ನುಡಿಗೆ ಆದ್ಯತೆ ನೀಡಿ: ರಾಷ್ಟ್ರ ಧ್ವಜಾರೋಹಣದ ನಂತರ ಮಾತನಾಡಿದ ಉಪ ವಿಭಾಗಧಿಕಾರಿ ಎಚ್‌.ಎಲ್‌. ನಾಗರಾಜು ಅವರು, ನಮ್ಮ ನಾಡು ನುಡಿಗೆ ಮೊದಲ ನಾವು ಆದ್ಯತೆ ನೀಡಬೇಕು. ಹಾಸನ ಜಿಲ್ಲೆ ಬೇರೆ ಜಿಲ್ಲೆಗಳಿಗೆ ಮಾದರಿಯಾಗಿ ನಾಡು, ನುಡಿಯ ಕೆಲಸ ಮಾಡುತ್ತಿದೆ ಮೂರು ದಿನಗಳ ಜಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಬಿ.ಸಿ. ರವಿಕುಮಾರ್‌ ಮಾತನಾಡಿ, ಕನ್ನಡ ನಾಡು, ನುಡಿಯ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ. ಮಾತೃ ಭಾಷೆಗೆ ಮೊದಲ ಮಾನ್ಯತೆ ಕೊಟ್ಟು ನಂತರ ಉಳಿದ ಭಾಷೆ ಕಡೆ ಗಮನ ಕೊಡಬೇಕು. ನಾಡು, ನುಡಿ, ಸಂಸ್ಕೃತಿಯ ಜಾಗೃತಿಗಾಗಿ ನಡೆಯುವ ಜಿಲ್ಲಾ 17ನೇ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಆಶಿಸಿದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎನ್‌.ಎಲ್‌. ಚನ್ನೇಗೌಡ, ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷ ಮರ್ಕುಲಿ ಗೋಪಾಲೇಗೌಡ, ಕಸಾಪ ತಾಲೂಕು ಅಧ್ಯಕ್ಷ ಜಿ.ಓ.ಮಹಾಂತಪ್ಪ, ಭಾರತ್‌ ಸೇವಾದಳದ ಜಿಲ್ಲಾ ಸಂಘಟಕಿ ಎಸ್‌. ರಾಣಿ, ಮತ್ತಿತರರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಧ್ವಜಾರೋಹಣದ ನಂತರ ಕನ್ನಡ ಜಾಗೃತಿ ಜಾಥಾದ ನಂತರ ಬೈಕ್‌ ರ್ಯಾಲಿ ನಡೆಯಿತು. 

ಇಂದು ಸಾಹಿತ್ಯ ಸಮ್ಮೇಳದ ಉದ್ಘಾಟನೆ – ವಿಚಾರ ಗೋಷ್ಠಿಗಳು: ಫೆ.27 ರಂದು ಎರಡನೇ ದಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಗ್ಗೆ 9 ಗಂಟೆಗೆ ಬೆಳ್ಳಿ ರಥದಲ್ಲಿ ಶ್ರೀ ಭುವನೇಶ್ವರಿ ಭಾವಚಿತ್ರದೊಂದಿಗೆ ಸಾಹಿತ್ಯ ಕೃತಿಗಳ ಹಾಗೂ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎನ್‌.ಎಲ್‌.ಚನ್ನೇಗೌಡ ಅವರ ಮೆರವಣಿಗೆಗೆ ಆದಿ ಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡುವರು.

Advertisement

ಗೌರಿಕೊಪ್ಪಲು ಆದಿಚುಂಚನಗಿರಿ ಪ್ರೌಢಶಾಲೆ ಆವರಣದಿಂದ ಆರಂಭವಾಗುವ ಮೆರವಣಿಗೆ ಎಂಜಿ.ರಸ್ತೆ, ಬಸೆಟ್ಟಿಕೊಪ್ಪಲು ರಸ್ತೆ, ಸ್ಲೇಟರ್ ಹಾಲ ಮೂಲಕ ಸಾಗಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಕನ್ನಡ ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸುವರು. ಎನ್‌.ಎಲ್‌.ಚನ್ನೇಗೌಡರಿಂದ ಸಮ್ಮೇಳನಾಧ್ಯಕ್ಷರ ಭಾಷಣ.

ಮಧ್ಯಾಹ್ನ 2 ಗಂಟಗೆ ಮಹಿಳಾ ತರಂಗ ವಿಚಾರ ಗೋಷ್ಠಿ
-ಪ್ರಾಚೀನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ನೆಲೆಗಳು ವಿಷಯ ಕುರಿತು ಚೆನೈನ ತುಳ್‌ ಸೆಲ್ವಿ ಅವರಿಂದ ವಿಚಾರ ಮಂಡನೆ.
-ಆಧುನಿಕ ಸಂದರ್ಭದಲ್ಲಿ ಮಹಿಳಾಪರ ಚಿಂತನೆಗಳು ವಿಷಯ ಕುರಿತು ಮಂಡ್ಯದ ಡಾ.ಹೇಮಲತಾ ವಿಚಾರ ಮಂಡನೆ. 
-ಸಂಜೆ 4 ಗಂಟಗೆ ಮಾನವಪ್ರಜ್ಞೆ ಮತ್ತು ಶಿಕ್ಷಣ ವಿಚಾರ ಗೋಷ್ಠಿಯಲ್ಲಿ ವರ್ತಮಾನದಲ್ಲಿ ಶಿಕ್ಷಣಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ವಿಷಯ ಕುರಿತು -ಪುತ್ತೂರಿನ ಅರಂದ ಚೊಕ್ಕಾಡಿ ಅವರಿಂದ ವಿಚಾರ ಮಂಡನೆ.
-ಕನ್ನಡ ಶಾಲೆಗಳ ಅಳಿವು – ಉಳಿವು ಷಯ ಕುರಿತು ಚಾಮರಾಜನಗರದ ಪೊ›.ಜಿ.ಎಸ್‌.ಮಹಾದೇವ ವಿಚಾರ ಮಂಡನೆ ಮಾಡುವರು. 
-ಸಂಜೆ 4 ರಿಂದ ಜಾನಪದ ಕಲಾವಿದ ತಟ್ಟೆಕೆರೆ ಲಕ್ಷ್ಮಣ್‌ ಅವರಿಂದ ಸಾಂಸ್ಕೃತಿಕಕ ಕಾರ್ಯಕ್ರಮ ನಡೆಯುವುದು. 

Advertisement

Udayavani is now on Telegram. Click here to join our channel and stay updated with the latest news.

Next