Advertisement

121 ಕೋಟಿ ರೂ.ದಂಡ ಸಂಗ್ರಹಿಸಿದ ಕೇಂದ್ರ ರೈಲ್ವೇ

06:10 AM Jan 16, 2018 | Harsha Rao |

ಮುಂಬಯಿ: ಕೇಂದ್ರೀಯ ರೈಲ್ವೇಯು ಟಿಕೆಟ್‌ ರಹಿತ ಪ್ರಯಾಣಿಕರಿಂದ ಬರೋಬ್ಬರಿ121.09 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿದೆ. 2017ರ ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ ಟಿಕೆಟ್‌ ರಹಿತ ಪ್ರಯಾಣ, ಪಾವತಿ ರಹಿತ ಸಾಮಾನು ಸರಂಜಾಮುಗಳ ಸಾಗಾಟ ಮತ್ತು ಇತರ ಅಶಿಸ್ತುಗಳಿಗಾಗಿ ಪ್ರಯಾಣಿಕರಿಗೆ ದಂಡ ವಿಧಿಸಿ ಇಷ್ಟು ಹಣ ಸಂಗ್ರಹಿಸಲಾಗಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

Advertisement

2016ರ ಇದೇ ಅವಧಿಯಲ್ಲಿ ದಂಡ ವಸೂಲಿಯಿಂದ 100.53 ಕೋಟಿ ಸಂಗ್ರಹಿಸಲಾಗಿತ್ತು. ಕಳೆದ ಅವಧಿಗೆ ಹೋಲಿಸಿದರೆ ದಂಡ ಸಂಗ್ರಹದಲ್ಲಿ ಶೇ.20.46ರಷ್ಟು ಹೆಚ್ಚಳವಾಗಿದೆ. ಡಿಸೆಂಬರ್‌ ತಿಂಗಳೊಂದರಲ್ಲೇ 2.06 ಲಕ್ಷ ರೂ. ಸಂಗ್ರಹವಾಗಿದೆ.

ಇದೇ ತಿಂಗಳು ಕಾಯ್ದಿರಿಸಿದ ಟಿಕೆಟ್‌ಗಳನ್ನು ಬದಲಾಯಿಸಿರುವ 439 ಕೇಸುಗಳು ಪತ್ತೆಯಾಗಿದ್ದು, ಅಂಥವರಿಂದ 3.56 ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ಪಡೆಯಲಾಗಿದೆ. ಟಿಕೆಟ್‌ರಹಿತ ಪ್ರಯಾಣ ವನ್ನು ನಿಯಂತ್ರಿಸುವುದೇ ಉದ್ದೇಶ ಎಂದಿದ್ದಾರೆ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next