Advertisement

ನೂರು ದಿನ ಯಶಸ್ವಿಯಾಗಿ ಪೂರೈಸಿದ ಕೇಂದ್ರ ಸರ್ಕಾರ

11:19 PM Sep 07, 2019 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2ನೇ ಅವಧಿಗೆ ಅಧಿಕಾರ ಸ್ವೀಕರಿಸಿ, ಹಲವು ಉಪಯುಕ್ತ ಯೋಜನೆಗಳ ಅನುಷ್ಠಾನದೊಂದಿಗೆ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಭಾರತೀಯರು ಹೆಮ್ಮೆ ಪಡುವಂತೆ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡಿರುವ ಪ್ರಧಾನಿ ಮೋದಿಯವರು, ವಿಶ್ವದಲ್ಲೇ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ.

Advertisement

ದೇಶದ ಅತ್ಯಂತ ಬಡವರು ಮತ್ತು ದುರ್ಬಲರ ಪರವಾದ ಸ್ಪಂದನಾಶೀಲ ಆಡಳಿತ ನೀಡುವುದಾಗಿ ಪ್ರಧಾನಿಯವರು ಭರವಸೆ ನೀಡಿದ್ದರು. ಅದರಂತೆ ಎರಡನೇ ಅವಧಿಯ 100 ದಿನದಲ್ಲಿ ಅನೇಕ ಮೈಲಿಗಲ್ಲು ಸಾಧಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈತ ಸಮುದಾಯಕ್ಕೆ ಶಕ್ತಿ ತುಂಬುವ ಉದ್ದೇಶದಿಂದ 14 ಕೋಟಿ ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂ.ವರ್ಗಾಯಿಸಿದ್ದಾರೆ. ರೈತರ ಪಿಂಚಣಿ ಯೋಜನೆ, ರೈತರ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ 10 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದಾರೆ.

2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಪ್ರಧಾನಿಯವರ ಆದ್ಯತೆಯಾಗಿದೆ. ಕಾಶ್ಮೀರದ ವಿಶೇಷ ಮಾನ್ಯತೆ ರದ್ದು ಪಡಿಸಿ, ದೇಶದ ಇತರ ರಾಜ್ಯಗಳಂತೆ ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಸಮಾನತೆಯ ಹೊಸ ಪರ್ವಕ್ಕೆ ನಾಂದಿ ಹಾಡಿದರು. ದೇಶದ ಪ್ರಗತಿಯ ಹಾದಿಯಲ್ಲಿ ಎದುರಾಗಿರುವ ತೊಡಕುಗಳನ್ನು ಒಂದೊಂದಾಗಿ ನಿವಾರಿಸುವ ಪ್ರಮಾಣಿಕ ಪ್ರಯತ್ನವನ್ನು ಪ್ರಧಾನಿಯವರು ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next