Advertisement

ಕೊಲೀಜಿಯಂ ಕ್ರಮದ ಬಗ್ಗೆ ಕೇಂದ್ರ ಸರಕಾರ ಅತೃಪ್ತಿ

06:00 AM Mar 31, 2018 | |

ಹೊಸದಿಲ್ಲಿ: ನ್ಯಾಯಾಂಗದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ನಡೆಸುತ್ತಿದೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಜೆ.ಚಲಮೇಶ್ವರ್‌ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾಗೆ ಬರೆದ ಪತ್ರಕ್ಕೆ ಕೇಂದ್ರ ಸರಕಾರ ಶುಕ್ರವಾರ ಪ್ರತಿಕ್ರಿಯೆ ನೀಡಿದೆ.

Advertisement

ಪ್ರಿನ್ಸಿಪಾಲ್‌ ಜಿಲ್ಲಾ ನ್ಯಾಯಾಧೀಶ ಪಿ.ಕೃಷ್ಣ ಭಟ್‌ ವಿರುದ್ಧ ಮಹಿಳಾ ನ್ಯಾಯವಾದಿಯೊಬ್ಬರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಉನ್ನತಾ ಧಿಕಾರದ ಸಮಿತಿ (ಕೊಲೀಜಿಯಂ) ಪರಿಗಣಿಸಿರಲಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಅವರ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸ್ಥಾನಕ್ಕೆ ಅವರ ಹೆಸರನ್ನು ಕೊಲೀಜಿಯಂ ಶಿಫಾರಸು ಮಾಡಿದ್ದರೂ, ನಾವು ಯಾವುದೇ ತೀರ್ಮಾನ ಕೈಗೊಂಡಿಲ್ಲ. ನೇಮಕ ಪ್ರಕ್ರಿಯೆಯಲ್ಲಿ ಇಂತಿಷ್ಟೇ ಸಮಯದ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಪ್ರಸ್ತಾಪವಾಗಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

 ಇದೇ ವೇಳೆ ನ್ಯಾ.ಜೆ.ಚಲಮೇಶ್ವರ್‌ ಬರೆದಿರುವ ಪತ್ರಕ್ಕೆ ಸಹಮತ ವ್ಯಕ್ತಪಡಿಸಿ ಅಖೀಲ ಭಾರತ ವಕೀಲರ ಒಕ್ಕೂಟ (ಎಐಎಲ್‌ಯು) ಶುಕ್ರವಾರ ಪ್ರತಿಕ್ರಿಯೆ ನೀಡಿದೆ.

ಇಂದು ಸಭೆ: ನ್ಯಾಯಮೂರ್ತಿಗಳ ವಿರುದ್ಧ ಸಂಸತ್‌ನಲ್ಲಿ ಮಹಾಭಿಯೋಗ ನಡೆಸುವ ಪ್ರಕ್ರಿಯೆಯಲ್ಲಿ ಕೆಲ ವಕೀಲರು ಇದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ (ಬಿಸಿಐ) ಶನಿವಾರ ನವದೆಹಲಿಯಲ್ಲಿ ಸಭೆ ನಡೆಸಲಿದೆ. ಶಾಸಕರು, ಸಂಸದರಾದವರು ನ್ಯಾಯವಾದಿಗಳಾಗಿ ಸೇವೆ ಸಲ್ಲಿಸ ಬಹುದೇ ಎಂಬ ಬಗ್ಗೆಯೂ ಈ ಸಭೆಯಲ್ಲಿ ತೀರ್ಮಾನಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next