Advertisement

ಕೇಂದ್ರ ಸರಕಾರಕ್ಕೆ ಜನರ ಕಷ್ಟ ಅರ್ಥವಾಗುತ್ತಿಲ್ಲ: ಖರ್ಗೆ

08:59 PM Sep 09, 2021 | Team Udayavani |

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸಂಸತ್ತಿನ ಒಳಗೆ ಮತ್ತು ಹೊರಗೆ ನಾವು ಹೋರಾಟ ಮಾಡಿದರೂ ಆಡಳಿತಾರೂಢ ಬಿಜೆಪಿಗೆ ಸಮಸ್ಯೆ ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಲೆ ಏರಿಕೆ ಬಗ್ಗೆ ಸೈಕಲ್‌ ರ್‍ಯಾಲಿ ನಡೆಸಿದ್ದೇವೆ. ಪೆಟ್ರೋಲ್‌ ಬಂಕ್‌ಗಳ ಮುಂದೆ ಧರಣಿ ಕೂತಿದ್ದೇವೆ, ರಾಜಭವನ ಚಲೋ ಮಾಡಿದ್ದೇವೆ. ಇನ್ನೇನು ಮಾಡಲು ಸಾಧ್ಯ? ಕೇಂದ್ರ ಸರಕಾರಕ್ಕೂ ಜನಪರ ಕಾಳಜಿ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.

ಮಾಧ್ಯಮದವರು ಸಹಿತ ಎಲ್ಲರನ್ನೂ ನರೇಂದ್ರ ಮೋದಿಯವರು ಹೆದರಿಸುತ್ತಿದ್ದಾರೆ. ಹೀಗಾಗಿ, ನಾವು ಏನೇ ಮಾಡಿದರೂ ದೊಡ್ಡ ಸುದ್ದಿಯೂ ಆಗುವುದಿಲ್ಲ. ಪೆಟ್ರೋಲ್‌, ಡೀಸೆಲ್‌, ಅಡುಗೆ ಎಣ್ಣೆ, ಅಡುಗೆ ಅನಿಲ ಹೀಗೆ ಎಲ್ಲವೂ ದುಬಾರಿಯಾಗಿದೆ. ಆದರೂ ಸರಕಾರ ಇದನ್ನು ಸಮರ್ಥಿಸಿ ಕೊಳ್ಳುತ್ತಿದ್ದು, ಇದಕ್ಕೆ ಅರ್ಥವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ನೀಟ್ ಪರೀಕ್ಷೆ ಹಿನ್ನೆಲೆ: ಹುಬ್ಬಳ್ಳಿ- ಗಂಗಾವತಿ ರೈಲು ಸಂಚಾರ ಸಮಯ ಬದಲಾವಣೆ

ಬಿಜೆಪಿಯವರು ಎಲ್ಲದಕ್ಕೂ ಹಿಂದಿನ ಯುಪಿಎ ಸರಕಾರ ಕಾರಣ ಎಂದು ಬೊಬ್ಬಿಡುತ್ತಾರೆ. ನಾವು ಆಯಿಲ್‌ ಬಾಂಡ್‌ ತೆಗೆದುಕೊಂಡಿದ್ದು 1.34 ಲಕ್ಷ ಕೋಟಿ ರೂ. ಮೊತ್ತದ್ದು ಮಾತ್ರ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಲಾಭ ಮಾಡಿದ ಮೊತ್ತ 24 ಲಕ್ಷ ಕೋಟಿ ರೂ. ಆಗಿದೆ. ಇದರ ಬಗ್ಗೆ ಬಹಿರಂಗ ಸಂವಾದಕ್ಕೆ ನಾವು ಸಿದ್ಧರಿದ್ದೇವೆ. ಜನರೂ ಜಾಗೃತರಾಗಬೇಕು ಎಂದು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next