Advertisement

ಕುಸ್ತಿಪಟುಗಳಿಗೂ ಇನ್ನು “ಕೇಂದ್ರ ಒಪ್ಪಂದ’ಜಾರಿ

06:00 AM Nov 01, 2018 | Team Udayavani |

ಹೊಸದಿಲ್ಲಿ: ಭಾರತೀಯ ಕುಸ್ತಿಯಲ್ಲಿ ಬಹುದೊಡ್ಡ ಬದಲಾವಣೆಯಾಗಲಿದ್ದು, ಇದರಿಂದ ಕುಸ್ತಿಪಟುಗಳಿಗೆ ಭಾರೀ ಪ್ರಯೋಜನವಾಗಲಿದೆ. ಭಾರತೀಯ ಕುಸ್ತಿಯಲ್ಲಿ ಕ್ರಿಕೆಟ್‌ನಲ್ಲಿರುವಂತೆ ಕೇಂದ್ರ ಒಪ್ಪಂದ ನಿಯಮವನ್ನು ಅಳವಡಿಸುವ ಚಿಂತನೆ ನಡೆಸಲಾಗುತ್ತಿದೆ. ಈ ಒಪ್ಪಂದದ ಪ್ರಕಾರ, ಕುಸ್ತಿ ಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನದ ಬಳಿಕ ಶ್ರೇಣಿಗಳನ್ನು ನೀಡಲಾಗುವುದು. ಇದಕ್ಕೆ ತಕ್ಕ ವೇತನವೂ ಲಭಿಸಲಿದೆ.

Advertisement

ನ. 15ರಿಂದ ಈ ಒಪ್ಪಂದ ಜಾರಿಗೆ ಬರಲಿದೆ. ಜೂನಿಯರ್‌, ಸಬ್‌-ಜೂನಿಯರ್‌, ಅಂಡರ್‌-23 ಕುಸ್ತಿಪಟಗಳೂ ಒಳಗೊಂಡಂತೆ 150 ಕುಸ್ತಿ ಪಟುಗಳಿಗೆ ಈ ಒಪ್ಪಂದ ಸಹಾಯಕವಾಗಲಿದೆ. ಪ್ರತಿ ವರ್ಷ ಈ ಒಪ್ಪಂದ ಪರಿಶೀಲನೆಗೊಳ್ಳಲಿದೆ. 5 ಹಂತಗಳಲ್ಲಿ ಹಿರಿಯ ಕುಸ್ತಿ ಪಟುಗಳಿಗೆ ಹಾಗೂ 4 ಹಂತಗಳಲ್ಲಿ ಕಿರಿಯ ಕುಸ್ತಿಪಟುಗಳಿಗೆ ಶ್ರೇಣಿಗಳನ್ನು ಮೀಸಲಿರಿಸಲಾಗಿದೆ. ಈ ಶ್ರೇಣಿಯಲ್ಲಿ ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ಶಿಪ್‌, ಏಶ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ ಗೇಮ್ಸ್‌, ಯೂತ್‌ ಒಲಿಂಪಿಕ್‌ ಹಾಗೂ ಉಳಿದ ಪ್ರಮುಖ ಕೂಟಗಳಲ್ಲಿ ಗೆದ್ದ ಪದಕಗಳನ್ನು ಗಣನೆಗೆ ತೆಗೆದು ಕೊಳ್ಳಲಾಗುತ್ತದೆ. ಇದರೊಂದಿಗೆ ಮೊದಲ ಬಾರಿಗೆ ಕುಸ್ತಿ ಸ್ಪರ್ಧೆಯ ನೇರ ಪ್ರಸಾರಕ್ಕಾಗಿ ವಿವಿಧ ಕ್ರೀಡಾ ವಾಹಿನಿಗಳೊಂದಿಗೆ ಮಾತು ಕತೆ ಕೂಡ ನಡೆದಿದೆ.

ಕುಸ್ತಿಯನ್ನು ಪೂರ್ಣ ಪ್ರಮಾಣದ ವಾಣಿಜ್ಯ ಕ್ರೀಡೆಯಾಗಿಸುವ ಕನಸನ್ನು ನನಸು ಮಾಡಲು ಹತ್ತಿರವಾಗುತ್ತಿದ್ದೇವೆ. ಈ ಮೂಲಕ ನಮ್ಮೆಲ್ಲ ಕುಸ್ತಿ ಪಟುಗಳು ಆರ್ಥಿಕವಾಗಿ ಉತ್ತಮರಾಗುತ್ತಾರೆ. 
-ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌, ಡಬ್ಲ್ಯುಎಫ್ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next