Advertisement

ಭಯೋತ್ಪಾದನೆ ಮಟ್ಟ ಹಾಕಲು ಕೇಂದ್ರ ಮುಂದಾಗಲಿ

09:45 AM Feb 17, 2019 | |

ವಿಜಯಪುರ: ದೇಶದ ಕಣಿವೆ ರಾಜ್ಯಗಳಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಸಂಪೂರ್ಣ ಮಟ್ಟ ಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಉಗ್ರಗಾಮಿಗಳ ಮಟ್ಟ ಹಾಕಲು ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದು ಮುಸ್ಲಿಂ ಧರ್ಮಗುರು,
ಮುತ್ತಹೀದಾ ಕೌನ್ಸಿಲ್‌ ಅಧ್ಯಕ್ಷ ಹಜರತ್‌ ಸೈಯ್ಯದ್‌ತನ್ವೀರ್‌ ಪೀರಾ ಹಾಶ್ಮಿ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಸೈನಿಕರ ಮೇಲೆ ದಾಳಿ ನಡೆಸುವ ಕೃತ್ಯ ಹೇಡಿತನದ್ದು. ಉಗ್ರಗಾಮಿಗಳಿಗೂ ಹಾಗೂ ಇಸ್ಲಾಂಗೂ ಯಾವುದೇ ಸಂಬಂಧವಿಲ್ಲ. ಕಾಶ್ಮೀರದ ಪುಲ್ವಾಮಾದಲ್ಲಿ ವೀರಯೋಧರ ಪ್ರಾಣ ಕಸಿದವರು ಮನುಷ್ಯರೇ ಅಲ್ಲ. ಭಯೋತ್ಪಾದನೆಯೇ ಅವರ ಧರ್ಮ, ಭಯೋತ್ಪಾದಕರ ಹೆಸರು ಮುಸಲ್ಮಾನರಾಗಿರಬಹುದು. ಇಂತಹ ಕೃತ್ಯ ಎಸಗುವವರು ಮುಸಲ್ಮಾನರೇ ಅಲ್ಲ. ಅವರು ಮನುಷ್ಯರೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ವೀರಯೋಧರ ಪ್ರಾಣ ಕಳೆದುಕೊಂಡಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ ಸೂಕ್ತ ಪ್ರತ್ಯುತ್ತರ ನೀಡಬೇಕು. ಪ್ರವಾದಿ ಹಜರತ್‌ ಮೊಹ್ಮದ್‌ ಪೈಗಂಬರ್‌ ಅವರು, ಒಬ್ಬ ಅಮಾಯಕ ಮನುಷ್ಯನನ್ನು ಕೊಂದರೆ ಅದು ಇಡಿ ಮಾನವ ಕುಲವನ್ನೇ ಕೊಂದಂತೆ ಎಂದು ಹೇಳಿದ್ದಾರೆ. ಉಗ್ರಗಾಮಿಗಳಿಗೆ ಯಾವುದೇ ಧರ್ಮವಿಲ್ಲ. ಭಯ ಹುಟ್ಟಿಸುವುದು ಮಾತ್ರ ಅವರ ಧರ್ಮ ಎಂದರು.

ಭಯೋತ್ಪಾದಕರ ಇಂತಹ ಕೃತ್ಯಗಳಿಂದ ದೇಶದಲ್ಲಿ ಭಯದ ವಾತಾವರಣ ಮೂಡಿಸಿವೆ. ಈ ರೀತಿಯ ಘಟನೆಗಳು ದೇಶದ ಏಕತೆ ಒಡೆಯುವ ಷಡ್ಯಂತ್ರವಾಗಿವೆ. ಆದರೆ ದೇಶದ ಏಕತೆಯನ್ನು ಯಾವ ಭಯೋತ್ಪಾದಕನೂ ಒಡೆಯಲು ಸಾಧ್ಯವಿಲ್ಲ ಎಂದರು.

ಅಹಿಂದ ಮುಖಂಡ ಎಸ್‌.ಎಂ. ಪಾಟೀಲ (ಗಣಿಹಾರ) ಮಾತನಾಡಿ, ದೇಶದಲ್ಲಿ ನಿರಂತರ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳನ್ನು ಸಂಪೂರ್ಣ ಮಟ್ಟ ಹಾಕಬೇಕಿದೆ. ಅಂತಹ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವವರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ
ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಸಲ್ಮಾನರು ದೇಶಭಕ್ತಿ ಪ್ರದರ್ಶಿಸಬೇಕಾದ ಅವಶ್ಯಕತೆ ಇಲ್ಲ. ಇದು ನಮ್ಮ ಮಾತೃಭೂಮಿ. ನಾವು ಇಲ್ಲಿಯೇ ಜನ್ಮತಾಳಿ ಜೀವನ ನಡೆಸುತ್ತಿದ್ದೇವೆ. ಭಾರತದ ಮುಸ್ಲಿಂರೆಲ್ಲರೂ ದೇಶಭಕ್ತರು. ಈ ಮಾತೃಭೂಮಿ ಬಗ್ಗೆ ಗೌರವ ಹೊಂದಿದ್ದಾರೆ.
ಆದರೆ ಹೃದಯ, ಧರ್ಮವಿಲ್ಲದ ಪಾಪಿ ಭಯೋತ್ಪಾದಕರು ಇಸ್ಲಾಂ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಧರ್ಮಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದರು.

Advertisement

ಹಿರಿಯ ಮುಖಂಡ ಅಬ್ದುಲ್‌ಹಮೀದ್‌ ಮುಶ್ರೀಫ್‌, ವಿವಿಧ ಪ್ರಗತಿ ಸಂಘಟನೆಗಳ ಪ್ರಮುಖರಾದ ಎಂ.ಸಿ. ಮುಲ್ಲಾ, ನ್ಯಾಯವಾದಿ ಬಷೀರುಜ್ಜಮಾ ಲಾಹೋರಿ, ಅಸ್ಲಂ ಮುಜಾವರ, ಮೊಹ್ಮದ್‌ಯೂಸೂಫ್‌ ಖಾಜಿ, ಅಬ್ದುಲ್‌ರಹಿಮಾನ ನಾಸರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next