Advertisement

ಸಿಸಿಬಿ ಕಚೇರಿ ಇನ್ನು ಡಿಸಿಪಿ ಆಫೀಸ್

11:30 AM Dec 02, 2019 | Suhan S |

ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಕ್ಕೆ ಹೊಸ ರೂಪರೇಷೆ ಸಿದ್ದಪಡಿಸಿ ಸಾಕಷ್ಟು ಬದಲಾವಣೆ ಮಾಡಿದ್ದ ನಗರ ಪೊಲೀಸ್‌ ಆಯುಕ್ತಭಾಸ್ಕರ್‌ ರಾವ್‌, ಇದೀಗ ಮತ್ತೂಂದು ಮಹತ್ವದ ಬದಲಾವಣೆಗೆ ಸಿದ್ಧತೆ ನಡೆಸಿದ್ದಾರೆ.

Advertisement

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನುಬೇರೆಡೆ ಸ್ಥಳಾಂತರಿಸಿ, ಆ ಕಟ್ಟಡದಲ್ಲಿ ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಕಚೇರಿ ಮಾಡಲು ಮುಂದಾಗಿದ್ದಾರೆ.ಅಲ್ಲದೆ ಸಿಸಿಬಿಯಲ್ಲಿದ್ದ ಆರು ದಳಗಳನ್ನು ನಗರದ ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದೆಎಂದು ಮೂಲಗಳು ತಿಳಿಸಿವೆ.

ಸದ್ಯ ಸಿಸಿಬಿಯಲ್ಲಿ ಸಂಘಟಿಕ ಅಪರಾಧ ದಳ, ವಿಶೇಷ ವಿಚಾರಣೆ ದಳ, ಆರ್ಥಿಕ ಅಪರಾಧ ದಳ, ಮಹಿಳಾಸುರಕ್ಷತಾ ದಳ ಹಾಗೂ ಭಯೋತ್ಪಾದನೆ ನಿಗ್ರಹ ದಳಹಾಗೂ ಇತರೆ ಮೂರು ಸೇರಿ ಒಟ್ಟು 9 ದಳಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಈ ದಳಗಳ ಪೈಕಿ ಆರು ಪ್ರಮುಖ ದಳಗಳನ್ನು ಮಡಿವಾಳ, ಜಯನಗರ, ಯಶವಂತಪುರ, ದೇವನಹಳ್ಳಿ, ವೈಟ್‌ಫೀಲ್ಡ್‌ ಹಾಗೂ ನಗರ ಇತರೆಡೆ ಸ್ಥಳಾಂತರಿಸಿ ಸಿಸಿಬಿಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ.ಈ ಮೂಲಕ ಪ್ರತಿ ದಳದ ಅಧಿಕಾರಿಗಳು ತಮ್ಮವ್ಯಾಪ್ತಿಯ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ ಉತ್ತಮ ಫ‌ಲಿತಾಂಶ ನೀಡಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೊಸ ಸಿಬ್ಬಂದಿ ನೇಮಕ: ನಗರದಲ್ಲಿ ನಿತ್ಯ ಹೊಸ ಹೊಸಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಸಿಸಿಬಿ ಅಧಿಕಾರಿಗಳು ಮಾತ್ರ ಹಳೇ ಮಾದರಿಯಲ್ಲೇತನಿಖೆ ನಡೆಸುತ್ತಿದ್ದಾರೆ. ಪ್ರತಿ ಬಾರಿ ಹಳೇ ರೌಡಿಶೀಟರ್‌ಗಳನ್ನು ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಈ ಹಳೇ ಕಾಲದ ಮಾದರಿಗಳು ಸಂಪೂರ್ಣವಾಗಿ ಬದಲಾಗಬೇಕು.

ಹೀಗಾಗಿ ಪ್ರತ್ಯೇಕ ದಳಗಳ ರಚನೆ ಮಾತ್ರವಲ್ಲ. ಅದಕ್ಕೆ ಅಗತ್ಯವಿರುವ ಹೊಸ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಕೊಡಲಾಗುತ್ತದೆ.ಅಷ್ಟೇ ಅಲ್ಲದೆ, ಹೊಸ ಕಟ್ಟಡ ಕೂಡ ಸದ್ಯದಲ್ಲೇ ನಿರ್ಮಾಣವಾಗಲಿದೆ ಎಂದು ಹಿರಿಯ ಅಧಿಕಾರಿ ಯೊ ಬ್ಬರು ಮಾಹಿತಿ ನೀಡಿದರು.

Advertisement

ಒತ್ತಡ ಹೇರುತ್ತಿದ್ದಾರೆ: ಸಿಸಿಬಿಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಬೆನ್ನಲ್ಲೇ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ಗೆ ಸಾಕಷ್ಟು ಒತ್ತಡಗಳು ಶುರುವಾಗಿವೆ ಎಂದು ಹೇಳಲಾಗಿದೆ. ಕೆಲ ಎಸಿಪಿ, ಇನ್‌ಸ್ಪೆಕ್ಟರ್‌ಗಳು ಆಯುಕ್ತರ ನಿರ್ಧಾರಕ್ಕೆ ಅಸಮಾಧಾನ ಗೊಂಡಿದ್ದು, ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ತರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next