ದಾರರನ್ನು ಸೆಳೆಯಲು, ಆಯಾ ಸಮಾಜದ ನಾಯಕರನ್ನೇ ಕರೆಸಿ ಪ್ರಚಾರ ನಡೆಸಿವೆ. ಕ್ಷೇತ್ರ ದಲ್ಲಿ ಒಟ್ಟು 1,02,216 ಪುರುಷ, 1,01,460 ಮಹಿಳೆಯರು ಹಾಗೂ ಇತರರು 5 ಸೇರಿ ಒಟ್ಟು 2,03,681 ಮತದಾರರಿದ್ದಾರೆ. ಜಮಖಂಡಿ ನಗರಸಭೆ ವ್ಯಾಪ್ತಿಯಲ್ಲೇ 59,458 ಮತದಾರರಿದ್ದು, ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
Advertisement
ಇಡೀ ಕ್ಷೇತ್ರದಲ್ಲಿ ದಲಿತ, ಮುಸ್ಲಿಂ, ಲಿಂಗಾಯತ, ಗಾಣಿಗ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಮುಸ್ಲಿಂ ಮತ್ತುಕುರುಬ ಮತಗಳು ಈ ಬಾರಿ ವಿಭಜನೆ ಆಗದಂತೆ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಪ್ಲ್ರಾನ್ ಮಾಡಿದ್ದು, ಶೇ.80ರಷ್ಟು ಮತಗಳು ಬರಲಿವೆ ಎಂಬ ವಿಶ್ವಾಸ ಕಾಂಗ್ರೆಸ್‌ನದ್ದು. ಕಾಂಗ್ರೆಸ್‌ನ ಈ ವಿಶ್ವಾಸವನ್ನು ಬುಡಮೇಲು ಮಾಡಲು ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರು, ಕುರುಬ ಮತಗಳು ಹೆಚ್ಚಿರುವ ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದಾರೆ. ಹೀಗಾಗಿ, ಕಾಂಗ್ರೆಸ್ ನೆಚ್ಚಿಕೊಂಡಿರುವ ಕುರುಬ ಮತಗಳಲ್ಲಿ ಒಂದಷ್ಟು ಬಿಜೆಪಿ ಪಾಲಾಗುವ ಸಾಧ್ಯತೆಯಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ 27,890 ಮತದಾರರಿದ್ದು, ಇವು ನಮ್ಮ ಸಾಂಪ್ರದಾಯಿಕ ಮತಗಳೆಂದು ಕಾಂಗ್ರೆಸ್ ನಂಬಿಕೊಂಡಿದೆ. ಆದರೆ, ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿಳಂಬ ಹಿನ್ನೆಲೆಯಲ್ಲಿ ದಲಿತರಲ್ಲಿ ಮಾದಿಗ ಸಮಾಜ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪರ ನಿಲ್ಲುವುದು ಅನುಮಾನ. ಗಾಣಿಗ ಸಮಾಜದ 25,917 ಮತಗಳಿದ್ದು, ಅದೇ ಸಮಾಜಕ್ಕೆ ಸೇರಿದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲುವ ಸಾಧ್ಯತೆ ಇದೆ.
ಸಾಲಿ-ಬಣಜಿಗ ಸೇರಿ ಲಿಂಗಾಯತ ಮತಗಳು 24 ಸಾವಿರ ಇವೆ. ಇವುಗಳೇ ಬಿಜೆಪಿಯ ಗೆಲುವಿಗೆ ನಿರ್ಣಾಯಕ ಎಂಬ ವಿಶ್ವಾಸ ಬಿಜೆಪಿಯದು. ಹೀಗಾಗಿಯೇ ಸಿದ್ದರಾಮಯ್ಯ ಧರ್ಮ ಒಡೆದವರು, ಜಾತಿಯಲ್ಲಿ ಜಗಳ ಹಚ್ಚಿದವರು ಎಂಬ ಪ್ರಮುಖ ಅಂಶವನ್ನೇ ಬಿಜೆಪಿ ಪ್ರಚಾರದ ಅಸ್ತ್ರವಾಗಿಸಿಕೊಂಡಿದೆ.
Related Articles
Advertisement
ಏಳು ಅಭ್ಯರ್ಥಿಗಳುಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ, ಕಾಂಗ್ರೆಸ್ -ಜೆಡಿಎಸ್‌ನಿಂದ ಆನಂದ ಸಿದ್ದು ನ್ಯಾಮಗೌಡ, ಪ್ರಜಾ ಪರಿವರ್ತನಾ ಪಾರ್ಟಿಯಿಂದ ಪರಶುರಾಮ ಮಹಾರಾಜನವರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಯಮನಪ್ಪ ಗುಣದಾಳ, ಪಕ್ಷೇತರರಾಗಿ ಅಂಬ್ರೋಸ್ ಡಿ.ಮೆಲ್ಲೋ, ರವಿ ಶಿವಪ್ಪ ಪಡಸಲಗಿ, ಸಂಗಮೇಶ ಚಿಕ್ಕನರಗುಂದ ಸೇರಿ ಒಟ್ಟು ಏಳು ಜನ ಕಣದಲ್ಲಿದ್ದಾರೆ. ತಂದೆ ಮಾಡಿದ ಅಭಿವೃದ್ಧಿ
ಕಾರ್ಯಗಳು, ಅವರು ಕಂಡಿದ್ದ ಮಾದರಿ ಕ್ಷೇತ್ರ, ಜಮಖಂಡಿ ಜಿಲ್ಲಾ ಕೇಂದ್ರ ಮಾಡುವ ಬೇಡಿಕೆಗೆ ಸ್ಪಂದನೆ ನನ್ನ ಗುರಿ.
ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಜನರಿದ್ದಾರೆ. ನಮ್ಮ ಪಕ್ಷದ ನಾಯಕರು ಹಲವು ಬಾರಿ ಪ್ರಚಾರ ನಡೆಸಿದ್ದಾರೆ. ತಂದೆಯಿಂದ ತೆರವಾದ ಈ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಲು ಜನ ಆಶೀರ್ವಾದ ಮಾಡಲಿದ್ದಾರೆ.
● ಆನಂದ ನ್ಯಾಮಗೌಡ, ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ಆಡಳಿತ, ಈಗಿನ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಎಲ್ಲವನ್ನೂ ಜನ ನೋಡಿದ್ದಾರೆ. ಸರ್ಕಾರ ಅಸ್ತಿತ್ವದಲ್ಲಿಲ್ಲ ಎಂಬ ಅನಿಸಿಕೆ ಜನರಲ್ಲಿದೆ. ಕಾಂಗ್ರೆಸ್ ಏನೇ ತಂತ್ರಗಾರಿಕೆ ನಡೆಸಿದರೂ ಕ್ಷೇತ್ರದ ಜನರು ಬಿಜೆಪಿ ಗೆಲ್ಲಿಸಲಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
● ಶ್ರೀಕಾಂತ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ ಶ್ರೀ ಶೈಲ ಕೆ ಬಿರಾದಾರ