Advertisement

ಜಾತಿ ವ್ಯವಸ್ಥೆಯು ಸಮಾಜವನ್ನು ಒಗ್ಗೂಡಿಸುತ್ತಿದೆ

01:00 AM Mar 12, 2019 | Harsha Rao |

ಪೊಳಲಿ: ರಾಮಕೃಷ್ಣ ಪರಮಹಂಸರು ಸ್ತ್ರೀಯರನ್ನು ದೇವಿಯಂತೆ ಕಂಡು ಈ ಸಮುದಾಯವನ್ನು ಜಾಗೃತಗೊಳಿಸಿದ್ದಾರೆ. ಸ್ವಾಮೀ ವಿವೇಕಾನಂದರು ವಿದೇಶದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿದು ಈ ಧರ್ಮಕ್ಕೆ ಸ್ಥಾನಮಾನ ತಂದುಕೊಟ್ಟಿದ್ದಾರೆ. ಇಂದು ಹಿಂದೂ ಧಾರ್ಮಿಕ ಕೇಂದ್ರಗಳು ಪುನರುತ್ಥಾನಗೊಳ್ಳುವ ಮೂಲಕ ಹಿಂದೂ ಧರ್ಮ ಮುನ್ನೆಲೆಗೆ ಬರುತ್ತಿದ್ದು, ಇದಕ್ಕೆ ಅಳಿವು ಎಂಬುದು ಇರಲು ಸಾಧ್ಯವೇ ಇಲ್ಲ ಎಂದು ಮಂಗಳೂರಿನ ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.

Advertisement

ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಪೊಳಲಿಯನ್ನು ಎಲ್ಲ ಜಾತಿ, ಸಮುದಾಯದವರು ಸೇರಿ ನವೀಕರಣಗೊಳಿಸಿ ಅವರದ್ದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಈ ಜಾತಿ ವ್ಯವಸ್ಥೆ ಎನ್ನುವುದು ಧರ್ಮವನ್ನು ಮುಂದೆ ಕೊಂಡೊಯ್ಯುವಂಥ ವ್ಯವಸ್ಥೆ ಆಗಿದ್ದು,
ವೃತ್ತಿಯಾಧಾರದಲ್ಲಿ ಜಾತಿ ಹುಟ್ಟಿಕೊಂಡಿರುವುದನ್ನು ಅರ್ಥ ಮಾಡಿಕೊಳ್ಳಬಹುದು. ಜಾತಿ ವ್ಯವಸ್ಥೆಯು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್‌ ಶೆಟ್ಟಿ ಮಾತನಾಡಿ, ಹಿಂದೂ ಧರ್ಮ ನಶಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಭಾಗವತದಲ್ಲಿ ಶ್ರೀಕೃಷ್ಣ ಪರಿತ್ರಾಣಾಯ ಸಾಧೂನಂ ವಿನಾಶಾಯಚದುಷ್ಕೃತಾಂ ಎಂದು ಹೇಳುವಂತೆ ಧರ್ಮಕ್ಕೆ ಗ್ಲಾನಿ ಬಂದಾಗ ಆತನ ಅವತಾರ ಆಗುತ್ತಿದೆ.

ಪೊಳಲಿ ದೇವಸ್ಥಾನದಲ್ಲಿ ಸೇರಿರುವ ಜನಸ್ತೋಮವನ್ನು ಗಮನಿಸಿದಾಗ ಕರಾವಳಿಯಲ್ಲಿ ಹಿಂದೂ ಧರ್ಮ ಉನ್ನತ
ಸ್ತರದಲ್ಲಿದೆ ಎಂದು ಅರ್ಥಮಾಡಿಕೊಳ್ಳಬಹುದು ಎಂದರು.

Advertisement

ಕೃಪಾ ಅಮರ್‌ ಆಳ್ವ, ಕೋಡಿ ಮಜಲು ಅನಂತ ಪದ್ಮನಾಭ ಉಪಾಧ್ಯಾಯ, ಮೊಕ್ತೇಸರರಾದ ಡಾ|ಮಂಜಯ್ಯ ಶೆಟ್ಟಿ, ಯು.ಟಿ. ತಾರಾನಾಥ ಆಳ್ವ, ಅಭಯ ಚಂದ್ರ ಜೈನ್‌ ಉಪಸ್ಥಿತರಿದ್ದರು. ಈ ವೇಳೆ ಚಂದ್ರ ಹಾಸ ಪಲ್ಲಿಪಾಡಿ, ಕಾರಮೊಗರು ಇಂಡಸ್ಟ್ರೀಸ್‌ನ ಮನೋಜ್‌ ಭಂಡಾರಿ, ಶಿವಕುಮಾರ್‌, ಹರಿಕೃಷ್ಣ ನಂಬೂದಿರಿ ಅವರನ್ನು ಸಮ್ಮಾನಿಸಲಾಯಿತು.

ರಾಜರಾಜೇಶ್ವರೀ ನಿರ್ಲಿಪೆ¤
ಧಾರ್ಮಿಕ ಉಪನ್ಯಾಸ ನೀಡಿದ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾತೃದೇವೋಭವ ಎನ್ನುವಂತೆ ಪೊಳಲಿ ಮಾತೆ ಎಲ್ಲರಿಗೂ ಮಾತೆ ಯಾಗಿ ನಿಂತು ಎಲ್ಲರನ್ನೂ ಕಂಡು ಸಂತಸಪಡುತ್ತಿದ್ದಾಳೆ. ಪೊಳಲಿಯ ಧ್ವಜಾರೋಹಣದ ದಿನ ಎಲ್ಲರಿಗೂ ಗೊತ್ತಿದ್ದರೂ ಧ್ವಜಾವರೋಹಣದ ದಿನ ಯಾರಿಗೂ ಗೊತ್ತಿರುವುದಿಲ್ಲ. ಪುತ್ತಿಗೆ ಸೋಮನಾಥ ದೇವಸ್ಥಾನದ ಜೋಯಿಸರಲ್ಲಿಗೆ ತೆರಳಿ ದಿನ ನಿಗದಿ ಮಾಡಿ ಅದನ್ನು ಸೇರಿಗಾರನಲ್ಲಿ ಹೇಳಲಾಗುತ್ತದೆ. ಸೇರಿಗಾರನು ಸೋಮಕಾಸುರ-ರೆಂಜಕಾಸುರ ಎನ್ನುವ ದೈವಪಾತ್ರಿಗಳಲ್ಲಿ ತಿಳಿಸುತ್ತಾರೆ. ದೈವಪಾತ್ರಿಯ ಮುಖಾಂತರವೇ ಜಾತ್ರೆಯ ದಿನಗಳ ಮಾಹಿತಿ ಸಿಗುತ್ತದೆ. ಇಲ್ಲಿ ಸಾಮಾನ್ಯವಾಗಿ 27, 28, 29, 30 ದಿನಗಳ ಜಾತ್ರೆ ನಡೆಯುತ್ತದೆ. ಇಲ್ಲಿನ ಮತ್ತೂಂದು ವಿಶೇಷತೆ ಎಂದರೆ ದುರ್ಗೆಯ ಮೂರ್ತಿ ಕಲ್ಲಿನದ್ದು, ರಾಜರಾಜೇಶ್ವರೀ ಮೂರ್ತಿ ಮಣ್ಣಿನದ್ದು, ಸುಬ್ರಹ್ಮಣ್ಯನ ಬಲಿಮೂರ್ತಿ ಕಂಚಿನದ್ದು, ಕ್ಷೇತ್ರಪಾಲನ ಮೂರ್ತಿ ಮರದ್ದು,ಕೊಡಮಣಿತ್ತಾಯಿ ದೈವದ ಮೊಗ ಬೆಳ್ಳಿಯದ್ದಾಗಿರುವುದು. ಇಲ್ಲಿನ ಪಟ್ಟಸ್ಥಳ, ಟ್ರಸ್ಟಿ ಎಲ್ಲವೂ ದುರ್ಗಾಪರಮೇಶ್ವರೀ ಹೆಸರಿನಲ್ಲಿದ್ದು, ಮಾತೆ ರಾಜರಾಜೇಶ್ವರೀ ನಿರ್ಲಿಪೆ¤, ಸಂತೃಪೆ¤ಯಾಗಿದ್ದು ಭಕ್ತರನ್ನು ಅನು ಗ್ರಹಿಸಿಕೊಂಡು ಬರುತ್ತಿದ್ದಾಳೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next