Advertisement
ಮಂಗಳೂರು ವಕೀಲರ ಸಂಘ, ಕೇಶವಾನಂದ ಭಾರತಿ ತೀರ್ಪಿನ ಸುವರ್ಣ ಮಹೋತ್ಸವ ಆಚರಣೆ ಸಮಿತಿಎಡನೀರು ಮಠ ಹಾಗೂ ಮಂಗ ಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಆಶ್ರಯದಲ್ಲಿ ಶನಿವಾರ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ನಡೆದ”ಕೇಶವಾನಂದ ಭಾರತಿ ತೀರ್ಪು- ಭಾರತೀಯ ಸಂವಿಧಾನದ ನ್ಯಾಯತತ್ವದ ಹಿರಿಮೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾಡಿದರು.
ನಿಟ್ಟೆ ಸ್ವಾಯತ್ತ ವಿ.ವಿ. ಕುಲಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ಸಂವಿಧಾನದ ಮೂಲ ಸಿದ್ಧಾಂತ ಎಲ್ಲಿಯೂ ಬದಲಾ ವಣೆ ಆಗಿಲ್ಲ, ಆಗುವುದೂಇಲ್ಲ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಸಂವಿಧಾನಕ್ಕೆ ಹಲವು ತಿದ್ದುಪಡಿ ಗಳಾದರೂ ಮೂಲಭೂತ ಹಕ್ಕುಗಳು ಎಂದಿಗೂ ಸುರಕ್ಷಿತವಾಗಿರು ತ್ತದೆ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ ಎಂದರು. ಸುವರ್ಣ ಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷ ನ್ಯಾಯವಾದಿ ಎಂ. ನಾರಾಯಣ ಭಟ್ ಕಾಸರಗೋಡು ಪ್ರಸ್ತಾವನೆಗೈದರು. ಮಂಗಳೂರು ವಕೀಲ ರ ಸಂಘದ ಅಧ್ಯಕ್ಷ ಕೆ. ಪೃಥ್ವಿರಾಜ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ, ಕಾಲೇಜು ಪ್ರಾಂಶುಪಾಲ ಡಾ| ತಾರಾನಾಥ್ ಉಪಸ್ಥಿತರಿದ್ದರು.
Related Articles
ಎಡನೀರು ಮಠಾ ಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, 1970ರಲ್ಲಿ ಕೇರಳ ಸರಕಾರ ಭೂಸುಧಾರಣೆ ಕಾಯ್ದೆ ಜಾರಿಗೆ ತಂದಾಗ ಎಡನೀರು ಮಠದ 400 ಎಕರೆ ಭೂಮಿ ಒಕ್ಕಲು ಹೊಂದಿದವರ ಪಾಲಾಯಿತು. ಇದರಿಂದ ಮಠದ ಆದಾಯ ಕುಂಠಿತಗೊಂಡಿತು. ಇದಕ್ಕಾಗಿ ಕೇಶವಾನಂದ ಭಾರತಿ ಸ್ವಾಮೀಜಿ ಅವರು ಕಾಯ್ದೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅದರಲ್ಲಿ ಕೇಸು ಗೆಲ್ಲಲು ವಿಫಲವಾದರೂ ತೀರ್ಪು ಮಾತ್ರ ಐತಿಹಾಸಿಕ ಎಂದೆನಿಸಿತು. ಸಂವಿಧಾನದಲ್ಲಿ ಅನಗತ್ಯ ಬದಲಾವಣೆ ಅಸಾಧ್ಯ ಎಂಬುದನ್ನು ತೀರ್ಪು ತೋರಿಸಿದ್ದು ಅದಕ್ಕಾಗಿ ಕೇಸಿನ 50ನೇ ವರ್ಷಾಚರಣೆಯನ್ನು ಸಂಭ್ರಮವಾಗಿ ಆಚರಿಸಲಾಗುತ್ತಿದೆ ಎಂದರು.
Advertisement