Advertisement

Actor Kichcha Sudeepa ದಾಖಲಿಸಿದ್ದ ಪ್ರಕರಣ ರದ್ದಿಗೆ “ಹೈಕೋರ್ಟ್‌’ ನಕಾರ

11:25 PM Mar 26, 2024 | Team Udayavani |

ಬೆಂಗಳೂರು: ನಿರ್ಮಾಪಕ ಎನ್‌.ಎಂ. ಸುರೇಶ್‌ ಹಾಗೂ ಇತರರ ವಿರುದ್ಧ ನಟ ಸುದೀಪ್‌ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದು ಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ವಿಚಾರಣ ನ್ಯಾಯಾಲಯ ಹೊರಡಿಸಿರುವ ಸಮನ್ಸ್‌ ಹಾಗೂ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ನಿರ್ಮಾಪಕ ಎನ್‌.ಎಂ. ಸುರೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಆವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

ದೂರು ಮತ್ತು ಅವರು ನೀಡಿರುವ ಸ್ವಯಂ ಹೇಳಿಕೆಯಲ್ಲಿನ ಅಂಶಗಳನ್ನು ಗಮನಿಸಿದರೆ ಅರ್ಜಿದಾರರ ಹೇಳಿಕೆ ಅವಹೇಳನಕಾರಿಯಾಗಿದೆ ಮತ್ತು ಅದರಿಂದ ಸಮಾಜದಲ್ಲಿ ದೂರುದಾರರ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಮೇಲ್ನೋಟಕ್ಕೆ ದೂರುದಾರರ ಅನಿಸಿಕೆ ಸರಿಯಾಗಿದೆ. ಹಾಗಾಗಿ ವಿಚಾರಣಾ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿರುವುದರಲ್ಲಿ ಯಾವುದೇ ಲೋಪವಿಲ್ಲ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ ನ್ಯಾಯಾಲಯ ನಿರ್ಮಾಪಕ ಎನ್‌.ಎಂ. ಸುರೇಶ್‌ ಅರ್ಜಿಯನ್ನು ವಜಾಗೊಳಿಸಿದೆ.

ಏನಿದು ಪ್ರಕರಣ?
ನಿರ್ಮಾಪಕರಾದ ಎನ್‌.ಎಂ. ಸುರೇಶ್‌, ಎನ್‌.ಎಂ. ಕುಮಾರ್‌ ಮತ್ತಿತರರು ನಟ ಸುದೀಪ್‌ ವಿರುದ್ಧ ಸುದ್ದಿಗೋಷ್ಠಿಯೊಂದರಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದರು. ಆ ಹಿನ್ನೆಲೆಯಲ್ಲಿ ನಟ ಸುದೀಪ್‌ ನಿರ್ಮಾಪಕರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆ ಕುರಿತು ವಿಚಾರಣೆ ನಡೆಸಿದ್ದ ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್‌ ಎನ್‌.ಎಂ.ಸುರೇಶ್‌ ಮತ್ತಿತರರ ನಿರ್ಮಾಪಕರಿಗೆ ಸಮನ್ಸ್‌ ಜಾರಿಗೊಳಿಸಿತ್ತು. ಆ ಸಮನ್ಸ್‌ ರದ್ದುಪಡಿಸುವಂತೆ ಕೋರಿ ಎನ್‌.ಎಂ. ಸುರೇಶ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next