Advertisement

ಹಸುವಿನಕಾವಲು ಕಲ್ಲು ತುಂಬಿದ್ದ ಲಾರಿಗಳ ವಶ

12:19 PM May 19, 2017 | |

ಪಿರಿಯಾಪಟ್ಟಣ: ಅಪಾರ ಪ್ರಮಾಣದಲ್ಲಿ ಕಲ್ಲು ತುಂಬಿ ರಸ್ತೆಯಲ್ಲಿ ಸಾಗಿಸುತ್ತಿದ್ದ ಲಾರಿಗಳನ್ನು ಹುಣಸೂರು ಉಪವಿಭಾಗಾಧಿಕಾರಿ ಸೌಜನ್ಯ ವಶಕ್ಕೆ ತೆಗೆದುಕೊಂಡಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಹಸುವಿನಕಾವಲು ಗ್ರಾಮದ ಸಮೀಪದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಸ್ಥಳದಿಂದ ಹಾರಂಗಿ ಕಾಲುವೆಯ ರಸ್ತೆಯ ಮೂಲಕ ಮುಖ್ಯ ರಸ್ತೆಗೆ ತಲುಪಿ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಈ ಲಾರಿಗಳು ಸಂಚರಿಸುತ್ತಿದ್ದವು ಎನ್ನಲಾಗಿದೆ.

ಅಷ್ಟೇ ಅಲ್ಲದೆ ಕೇರಳ ರಾಜ್ಯದಲ್ಲಿ ನೋಂದಾಯಿತ ಲಾರಿಗಳಾಗಿದ್ದು ಕರ್ನಾಟಕದಲ್ಲಿ ಯಾವುದೇ ಅನುಮತಿ ಮತ್ತು ನೋಂದಾಯಿಸದೆ ರಾಜಾರೋಷವಾಗಿ ಅಧಿಕವಾಗಿ ಕಲ್ಲು, ಜಲ್ಲಿಗಳನ್ನು ತುಂಬಿ ಸಾಗಿಸಲಾಗುತ್ತಿತ್ತು. ಇದರಿಂದ ರಸ್ತೆಗಳು ಹಾಳಾಗುತ್ತಿದ್ದವು ಎಂದು ದೂರಲಾಗಿದೆ.

ಕುಶಾಲನಗರ ಮೂಲದ ದಿನೇಶ್‌ ಎಂಬುವರ ಲಾರಿಗಳಾಗಿದ್ದು ಈ ಲಾರಿಗಳನ್ನು ಬೆಟ್ಟದಪುರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು ಸರಿಯಾದ ಅನುಮತಿ ಪಡೆಯುವವರೆಗೂ ಲಾರಿಗಳನ್ನು ಮಾಲೀಕರಿಗೆ ಒಪ್ಪಿಸಬಾರದು ಎಂದು ಉಪವಿಭಾಗಾಧಿಕಾರಿ ಸೌಜನ್ಯ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next