Advertisement

ಅಪ್ರಾಪ್ತ ಬಾಲಕಿಯನ್ನು ಕೊಲೆಗೈದವನ ಸೆರೆ

11:52 AM Feb 28, 2018 | Team Udayavani |

ಬೆಂಗಳೂರು: ಚಾಕಲೇಟ್‌ ಕೊಡಿಸುವ ನೆಪದಲ್ಲಿ ಮೂರು ವರ್ಷದ ಬಾಲಕಿಯನ್ನು ಕರೆದೊಯ್ದ ದುಷ್ಕರ್ಮಿ ತಲೆ ಮೇಲೆ ಕಲ್ಲು ಎತ್ತಿಹಾಕಿ ದಾರುಣವಾಗಿ ಹತ್ಯೆಗೈದ ಘಟನೆ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕ ದಂಪತಿ ಪುತ್ರಿ ಮೃತ ಬಾಲಕಿ. ಘಟನೆ ಸಂಬಂಧ ಉತ್ತರ ಪ್ರದೇಶ ಮೂಲದ ನಿಶಾದ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಬಾಲಕಿಯ ಪೋಷಕರು ಚಿಕ್ಕಭೈರತಿಯಲ್ಲಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಬಾಲಕಿಯ ತಂದೆ ಪೇಂಟಿಂಗ್‌ ಕೆಲಸ ಮಾಡುತ್ತಿದ್ದು ಪಕ್ಕದ ಮನೆಯಲ್ಲೇ ಆರೋಪಿ ನಿಶಾದ್‌ ಕೂಡ ವಾಸಿಸುತ್ತಿದ್ದ.

ಆಗಾಗ್ಗೆ ದಂಪತಿ ಮನೆಗೆ ಬರುತ್ತಿದ್ದ ಈತ ಸೋಮವಾರ ಬೆಳಗ್ಗೆ 7ಗಂಟೆ ಸುಮಾರಿಗೆ ಮನೆಗೆ ಬಂದು, ಬಾಲಕಿಗೆ ಚಾಕಲೇಟ್‌ ಕೊಡಿಸುವುದಾಗಿ ಕರೆದೊಯ್ದಿದ್ದ. ಇತ್ತ ಬಹಳ ಹೊತ್ತಾದರು ಬಾಲಕಿ ಕಾಣದಿದ್ದಾಗ ಹುಡುಕಾಟ ನಡೆಸಿದ ದಂಪತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ನಿಶಾದ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಈ ಸಂಬಂಧ ಪೊಲೀಸರು ನಿಶಾದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಯಿಂದ 50ಮೀಟರ್‌ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಬಾಲಕಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವುದಾಗಿ ತಿಳಿಸಿದ್ದಾನೆ. ಅತ್ಯಚಾರಕ್ಕೆ ಯತ್ನಿಸಿರುವ ಸಾಧ್ಯತೆಯಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next