Advertisement

ಒಂಟಿ ಮಹಿಳೆಯರ ಸರ ಕಸಿಯುತ್ತಿದ್ದವನ ಸೆರೆ

11:20 AM Jul 23, 2017 | Team Udayavani |

ಬೆಂಗಳೂರು: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿ 4.5ಲಕ್ಷ ಮೌಲ್ಯದ 191 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ನಗರದ ವಿವಿಧ ಐದು ಠಾಣೆಗಳಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಜೀವನ ಭೀಮಾನಗರ ನಿವಾಸಿ ಪ್ರಭಾಕರ್‌(32) ಬಂಧಿತ ಆರೋಪಿ.

Advertisement

ಬೆಳಗ್ಗೆ ಮತ್ತು ಸಂಜೆ ವೇಳೆ ವಾಯು ವಿಹಾರಕ್ಕೆ ಬರುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಆರೋಪಿ, ಇತ್ತೀಚೆಗೆ ಲಕ್ಷ್ಮಿ ಎಂಬ ಮಹಿಳೆ ಜೀವನ್‌ ಭೀಮಾನಗರದ ಪಾರ್ಕ್‌ ಬಳಿ ನಡೆದುಕೊಂಡು ಹೋಗುವಾಗ ಆಕೆಯ ಸರ ಕಸಿದು ಪರಾರಿಯಾಗಿದ್ದ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜು.16 ರಂದು ಬೈಕ್‌ನಲ್ಲಿ ಹೋಗುತ್ತಿದ್ದ ಪ್ರಭಾಕರ್‌ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ತಡೆದ ವಿಚಾರಣೆ ನಡೆಸಿದ್ದು, ಆತ ಗೊಂದಲದ ಹೇಳಿಕೆಗಳನ್ನು ನೀಡತ್ತಿದ್ದ. ಇದರಿಂದ ಅನುಮಾನ ಮತ್ತಷ್ಟು ಬಲಗೊಂಡಿದ್ದರಿಂದ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ಸರಗಳ್ಳತನ ಮಾಡುತ್ತಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಅಲ್ಲದೆ, ಆತ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿ ಅದರ ನಂಬರ್‌ ಪ್ಲೇಟ್‌ ಬದಲಾಯಿಸಿ ಬೈಕ್‌ನಲ್ಲಿ ಒಡಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನ ಬಂಧನದಿಂದ ಜೀವನ ಭೀಮಾನಗರ ಪೊಲೀಸ್‌ ಠಾಣೆಯಲ್ಲಿ ನಡೆದಿದ್ದ 3 ಸರಗಳ್ಳತನ ಎಚ್‌.ಎ.ಎಲ್‌ ಹಾಗೂ ಇಂದಿರಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಲಾ 1 ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next