Advertisement
ಎಂಟು ವರ್ಷಗಳ ಹಿಂದೆ ರಾ. ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮ್ಯ ರಸ್ತೆಗಿಂತಲೂ ಕಳಪೆ ಸ್ಥಾನಮಾನದಲ್ಲಿರುವ ಬಂಟ್ವಾಳ – ಕಡೂರು ರಸ್ತೆ ಬಿ.ಸಿ. ರೋಡಿನಿಂದ ಚಾರ್ಮಾಡಿ ತನಕ ದ್ವಿಪಥವಾಗಬೇಕಿದೆ.
Related Articles
Advertisement
ಸಚಿವರು, ಶಾಸಕರು, ಸಂಸದರಿಗೂ ಈ ರಸ್ತೆಯಲ್ಲಿ ವಾಹನ ದಟ್ಟಣೆಯ ಅನುಭವವಾಗಿದೆ. ಶಾಸಕರು ಕೇಂದ್ರದ ಕಡೆಗೆ ಬೊಟ್ಟು ಮಾಡಿದರೆ, ಸಂಸದರು ಅನುದಾನ ಬಿಡುಗಡೆಯಾಗಿದೆ ಎನ್ನುತ್ತಾರೆ. ಯಾವಾಗ, ಏನು, ಎಷ್ಟು ಎಂದು ಕೇಳಿದರೆ ಉತ್ತರವಿಲ್ಲ.
ಬಾಕಿಯಾಗಿರುವುದು: ಸಂಸೆ -ದಿಡುಪೆ ರಸ್ತೆ ನಿರ್ಮಾಣ ಭರವಸೆಗೆ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗದ ತಗಾದೆಯಿದೆ. ಶಿಶಿಲ -ಮೂಡಿಗೆರೆ ರಸ್ತೆಗೆ ಪರಿಸರವಾದಿಗಳ ವಿರೋಧ ಇದೆ. ಹೀಗಾಗಿ ಎರಡು ರಸ್ತೆಗಳ ಬೇಡಿಕೆ ಈಡೇರಿಕೆಗೆ ಬಾಕಿಯಾಗಿದೆ. ಊರಿನ ಎಲ್ಲ ರಸ್ತೆಗಳು ದುರಸ್ತಿಯಾದರೂ ಕೊಯ್ಯೂರು ರಸ್ತೆ ತಾಂತ್ರಿಕ ಕಾರಣದಿಂದ ದುರಸ್ತಿಯಾಗದೇ ಉಳಿದಿದೆ. ಧರ್ಮಸ್ಥಳ ಡಿಪೋದಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಿದ್ದು, ಡಿಪೋ ನಿರ್ಮಾಣಕ್ಕೆ ಜಾಗ ಒದಗಿಸಿಕೊಡಲು ಸಾಧ್ಯವಾಗಿಲ್ಲ. ಬೆಳ್ತಂಗಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ. ಪ್ರಮುಖ ಬೇಡಿಕೆಗಳ ಈಡೇರಿಕೆಯಾಗಿದೆ. ಆದರೂ ಒಂದಷ್ಟು ಉಳಿದುಕೊಂಡಿದೆ.
ಕ್ಷೇತ್ರಕ್ಕೆ ಲಭಿಸಿದ್ದೇನು?ತಾಲೂಕಿನ ಜನತೆ ಈ ಬಾರಿ ಸಿದ್ದರಾಮಯ್ಯ ಸರಕಾರದ ಭಾಗ್ಯಶಾಲಿಗಳು. 21,000 ಮಂದಿಗೆ 94ಸಿ, 94ಸಿಸಿ ಹಕ್ಕುಪತ್ರ ಸಿಕ್ಕಿದೆ, ವಿವಿಧ ವಸತಿ ಯೋಜನೆಗಳ 35,000 ಮನೆಗಳು ದೊರೆತಿವೆ. ಅನ್ನಭಾಗ್ಯದ ಉಚಿತ ಅಕ್ಕಿ ದೊರೆತಿದೆ. 8 ಕೋ.ರೂ. ವೆಚ್ಚದ ಮಿನಿ ವಿಧಾನ ಸೌಧ ಉದ್ಘಾಟನೆಯಾಗಿದೆ. ಒಂದೇ ವರ್ಷದಲ್ಲಿ 23 ಸೇತುವೆಗಳ ರಚನೆಯಾಗಿದೆ. 60 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣವಾಗಿದೆ. ಬಾಂಜಾರು, ಕೋಲೋಡಿಯಂತಹ ಹಿಂದುಳಿದ ಪ್ರದೇಶಗಳಿಗೂ ಕಾಂಕ್ರೀಟ್ ರಸ್ತೆ, ಸೇತುವೆಗಳಾಗಿವೆ. ತಾಲೂಕಿನ ಬಹುತೇಕ ರಸ್ತೆಗಳು ಡಾಮರು ಕಂಡಿವೆ. ಪುದುವೆಟ್ಟು, ಕಾಜೂರಿನಂತಹ ಅತ್ಯಂತ ಪ್ರಮುಖ ಬೇಡಿಕೆಯ ಸೇತುವೆಗಳ ರಚನೆಯಾಗಿ ಜನರ ಕನಸು ನನಸಾಗಿದೆ. ಕೆಲವೇ ದಿನಗಳ ಹಿಂದೆ ಮತ್ತೆ 16 ಕೋ.ರೂ. ಮಂಜೂರಾಗಿ ರಸ್ತೆ ಸೇತುವೆಗೆ ಶಿಲಾನ್ಯಾಸ ನಡೆದಿದೆ. ಪುಂಜಾಲ ಕಟ್ಟೆ ಪ್ರ.ದ. ಕಾಲೇಜು ಕಟ್ಟಡ, ಮಾಲಾಡಿ ಐಟಿಐ ಕಟ್ಟಡ ಆಗಿದೆ. ಇವೆಲ್ಲ ಬಹುದಿನಗಳ ಕಾಲ ನನೆಗುದಿಗೆ ಬಿದ್ದಿದ್ದ ಯೋಜನೆಗಳು. ಈ ಬಾರಿ ಅವುಗಳಿಗೆಲ್ಲ ಮೋಕ್ಷ ದೊರೆತಿದೆ. ಲಕ್ಷ್ಮೀ ಮಚ್ಚಿನ