Advertisement
ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಕೇಬಲ್ ಟೀವಿ ಅಸೋಸಿಯೇಷನ್‌ನ ಅಧ್ಯಕ್ಷ ಪ್ಯಾಟ್ರಿಕ್ ರಾಜ್, ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ರೂಪಿಸಿರುವ ನಿಯಮದಂತೆ ಪ್ರತಿ ತಿಂಗಳು ಗ್ರಾಹಕರು 130 ಕೇಬಲ್ ಬಿಲ್ ಮತ್ತು 24 ರೂ. ಜಿಎಸ್‌ಟಿ ಸೇರಿ 154 ರೂ.ಗಳನ್ನು ನೀಡಬೇಕು.
Related Articles
Advertisement
ಆದರೆ, ಕೇಬಲ್ ಸೇವೆಯಲ್ಲಿ ಗ್ರಾಹಕರು ಕೇಬಲ್ ಸೇವಾದಾರನಿಗೆ ಹಣ ಪಾವತಿಸಬೇಕಾಗಿರುವುದರಿಂದ ಕೆಲವು ಗೊಂದಲಗಳಿವೆ. ಕೇಬಲ್ ಗ್ರಾಹಕರು ಜ.31ರ ಒಳಗೆ ತಮಗೆ ಯಾವ ಚಾನೆಲ್ ಬೇಕು ಎಂಬುದನ್ನು ನಿರ್ಧರಿಸಿ ಆ ನಂತರ ಕೇಬಲ್ ಸೇವಾದಾರನ ಬಳಿ ಮೊದಲು ಸ್ಪಷ್ಟ ಮಾಹಿತಿ ನೀಡುವುದು ಅಗತ್ಯವಾಗಿದೆ.
ಮಾಸಿಕ 153 ರೂ.ಗೆ ಕೇಬಲ್ ಗ್ರಾಹಕ 100 ವಾಹಿನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ 100 ಚಾನೆಲ್‌ಗಳಲ್ಲಿ ಪಾವತಿ ವಾಹಿನಿಗಳೂ ಇರಬಹುದು. ಆದರೆ ಆಯ್ಕೆ ಮಾಡಿದ ಚಾನೆಲ್‌ಗಳ ದರ 130 ರೂ. ಮೀರಬಾರದು.
ನೀವು 13 ರೂ. ಬೆಲೆಯ 10 ಪಾವತಿ ಚಾನೆಲ್‌ಗಳನ್ನು ಉಚಿತವಾಗಿ ಆಯ್ಕೆ ಮಾಡಿಕೊಂಡರೆ ನಂತರ 90 ಉಚಿತವಾಗಿ ಲಭ್ಯವಿರುವ ವಾಹಿನಿಗಳು ಮಾತ್ರ ನಿಮಗೆ ದೊರೆಯಲಿವೆ. ಹೆಚ್ಚಿನ ಚಾನೆಲ್‌ಗಳು ಬೇಕಾದರೆ ಹೆಚ್ಚು ಹಣ ನೀಡಬೇಕಾಗುತ್ತದೆ.
ಮತ್ತೂಂದು ವಿಶೇಷ ಅಂದರೆ, ಹೊಸ ನಿಯಮಗಳ ಪ್ರಕಾರ ಡಿಟಿಎಚ್ ಸಂಪರ್ಕ ಹೊಂದಿರುವ ಗ್ರಾಹಕರು ಸೆಟ್ ಟಾಪ್ ಬಾಕ್ಸ್ ಅನ್ನು ಖರೀದಿ ಮಾಡಬೇಕಾದ ಅಗತ್ಯವಿಲ್ಲ. ಅದನ್ನು ಡಿಟಿಎಚ್ ಅಥವಾ ಕೇಬಲ್ ಸೇವಾದಾರರ ಮೂಲಕ ಬಾಡಿಗೆಗೂ ಪಡೆಯಬಹುದು.
ಈ ನಿಯಮ ಜಾರಿ ಏಕೆ: ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನೀಡಿದ ಮಾಹಿತಿ ಪ್ರಕಾರ 100ಕ್ಕೂ ಹೆಚ್ಚು ವಾಹಿನಿಗಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ (ಬಿಎಆರ್‌ಸಿ) ಪ್ರಕಾರ ಕೂಡ ದೇಶದ ಜನರು 40 ಕ್ಕಿಂತ ಹೆಚ್ಚು ವಾಹಿನಿಗಳನ್ನು ಬದಲಿಸುವುದೂ ಇಲ್ಲ ಎಂದು ತಿಳಿಸಿದೆ. ಆ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಟ್ರಾಯ್ ಈ ನಿಯವನ್ನು ಜಾರಿಗೆ ತಂದಿದೆ.