Advertisement

ಬಸ್‌ ನಿರ್ವಾಹಕನಿಂದ ಅವಮಾನ ರಾಜ್ಯ ಸಾರಿಗೆ ಸಚಿವರಿಗೆ ಯುವತಿ ದೂರು

11:25 AM Feb 22, 2017 | Team Udayavani |

ಉಪ್ಪಿನಂಗಡಿ: ಬಸ್‌ ಪಾಸಿನೊಂದಿಗೆ ಪ್ರಯಾಣಿಸುತ್ತಿದ್ದ ಯುವತಿಯನ್ನು ಬಸ್‌ ಪಾಸಿನಲ್ಲಿದ್ದ ಲೋಪಕ್ಕಾಗಿ ನಿರ್ವಾಹಕ ಬಸ್ಸಿನಲ್ಲಿ ಸಹ ಪ್ರಯಾಣಿಕರ ಮುಂದೆ ಅವಮಾನಿಸಿ ನಿಂದಿಸಿರುವ ಘಟನೆಯ ಬಗ್ಗೆ ನ್ಯಾಯ ಬಯಸಿ ಸಾರಿಗೆ ಸಚಿವರಿಗೆ ದೂರು ನೀಡಲಾಗಿದೆ.

Advertisement

ಆಲಂಕಾರು ಗ್ರಾಮದ ನಿವಾಸಿ ಯುವತಿ ಉಪ್ಪಿನಂಗಡಿಯ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು,  ಫೆ. 17ರಂದು ಸಾಯಂಕಾಲ ಉಪ್ಪಿನಂಗಡಿಯಿಂದ ಆಲಂಕಾರಿಗೆಂದು ಪ್ರಯಾಣಿಸಲು ಗೋಕರ್ಣದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ವಾಯುವ್ಯ ಸಾರಿಗೆ ಬಸ್ಸನ್ನೇರಿದ್ದರು.  ಪ್ರಯಾಣದ ವೇಳೆ ಎಂದಿ ನಂತೆ ವೇಗದೂತ ಬಸ್ಸುಗಳಲ್ಲಿ ಸಂಚರಿಸುವ ಬಸ್‌ ಪಾಸ್‌ ತೋರಿಸಿದ್ದರು.  ಆದರೆ ಬಸ್‌ ಪಾಸಿನಲ್ಲಿ ವೇಗದೂತ ( ಎಕ್ಸ್‌ ಪ್ರಸ್‌) ಎಂದು ಬರೆಯಲಾಗಿತ್ತೇ ವಿನಃ ಅಲ್ಲಿ ಇಲಾಖೆಯ ಮೊಹರು ಹಾಕಿರಲಿಲ್ಲ. 

ಮೊಹರು ಹಾಕದಿರುವ ಲೋಪ ಇಲಾಖೆಯದ್ದೇ ಆಗಿದ್ದರೂ ಪ್ರಕರಣದಲ್ಲಿ ಪ್ರಯಾಣಿಕರ ಕಡೆಯಿಂದ ವಂಚನೆ ನಡೆಯುವ ಸಾಧ್ಯತೆಯನ್ನು ಮನಗಂಡು ಮುಂದಿನ ದಿನಗಳಲ್ಲಿ‌ ಇಲಾಖೆಯ ಮೊಹರು ಹಾಕಿಸಬೇಕೆಂದು ನಿರ್ದೇಶ ನೀಡುವ ಅಥವಾ ಬಸ್‌ ಪಾಸನ್ನು ಮಾನ್ಯ ಮಾಡದೇ ಟಿಕೇಟ್‌ ಖರೀದಿಸಲು ನಿರ್ವಾಹಕ ಸೂಚಿಸಬೇಕಿತ್ತು. ಆದರೆ ಅದರ ಬದಲು ನಿರ್ವಾಹಕ ಯುವತಿಯ ಬಸ್‌ ಪಾಸನ್ನು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ತೋರಿಸಿ ಆಕೆಯೇ ವಂಚಿಸಿದ್ದಾಳೆ ಎಂದು ಬಿಂಬಿಸುತ್ತಾ ಹೋದರು. ಅಲ್ಲದೇ   ಏಕ ವಚನದಲ್ಲಿ ನಿಂದಿಸಿ ಆಕೆ ಬಸ್ಸಿನಿಂದ ಇಳಿಯುವ ವರೆಗೆ ಅವಮಾನಿಸಿ ಅಳುವಂತೆ ಮಾಡಿದರು ಎನ್ನಲಾಗಿದೆ. ಇÇಖೆಯ ಅಧಿಕಾರಿಗಳಿಂದ ನಡೆದಿರುವ ಲೋಪಕ್ಕೆ ತನ್ನನ್ನು ವಂಚಕಿಯನ್ನಾಗಿ ಬಿಂಬಿಸಿ ಅವಮಾನಿಸಿದ್ದಾರೆಂದು ಸಚಿವರಿಗೆ ಸಲ್ಲಿಸಿದ ಲಿಖೀತ ದೂರಿನಲ್ಲಿ ಆಕೆ ತಿಳಿಸಿದ್ದಾರೆ. ಬಸ್ಸಿನ ಮಹಿಳಾ ಪ್ರಯಾಣಿಕರನ್ನು ಸತಾಯಿಸುವ ಸ್ವಭಾವದ  ಈ ನಿರ್ವಾಹಕನ ಬಗ್ಗೆ ಅಮೂಲಾಗ್ರ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಕೆ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next