Advertisement

ಬಸ್‌ ಬರುವುದನ್ನೇ ಮರೆತಿದ್ದಾರೆ ಮರಕುಂಬಿ ಮಂದಿ

05:30 PM Jul 16, 2018 | |

ಕನಕಗಿರಿ: ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ದೇಶಕ್ಕೆ ಸ್ವತಂತ್ರ್ಯ ಬಂದು 60 ವರ್ಷಗಳಾದರೂ ಈ ಗ್ರಾಮಕ್ಕೆ ಬಸ್‌ ಆಗಮಿಸಿಲ್ಲ. ಬಸ್‌ ಹತ್ತಬೇಕು ಎಂದರೆ ಸುಮಾರು 6ರಿಂದ 7 ಕಿ.ಮೀ. ಟಂಟಂನಲ್ಲಿಸಾಗಬೇಕು ಇಲ್ಲವೇ ನಡೆದುಕೊಂಡು ಹೋಗುವುದು ಅನಿವಾರ್ಯ. ಇನ್ನು ಗ್ರಾಮದ ವಿದ್ಯಾರ್ಥಿಗಳು ಪ್ರತಿದಿನ 6ರಿಂದ 7 ಕಿ.ಮೀ. ನಡೆದುಕೊಂಡು ಹೋಗಿ ತರಗತಿಗೆ ಹಾಜರಾಗಬೇಕಿದೆ. ಇದು ಸಮೀಪದ ಮರಕುಂಬಿ ಗ್ರಾಮದ ದುಸ್ಥಿತಿ.

Advertisement

ಹೌದು, ಮರಕಂಬಿ ಗ್ರಾಮದಲ್ಲಿ ಇದೂವರೆಗೂ ಬಸ್‌ ಸಂಚರಿಸಿದ ಉದಾಹರಣೆಯಿಲ್ಲ. ಹೆದ್ದಾರಿಯಿಂದ ಏಳು ಕಿ.ಮೀ. ದೂರದಲ್ಲಿರುವ ಈ ಗ್ರಾಮದ ರಸ್ತೆ ದಶಕಗಳಾದರೂ ದುರಸ್ತಿ ಆಗಿಲ್ಲ. ಹೀಗಾಗಿ ಮರಕುಂಬಿ ಗ್ರಾಮಕ್ಕೆ ಸಾರಿಗೆ ಸಂಸ್ಥೆಯವರು ಬಸ್‌ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಮರಕುಂಬಿ ಗ್ರಾಮಸ್ಥರು ಬಸ್‌ ಬೇರೆ ಊರುಗಳಿಗೆ ತೆರಲು ಕೇಸರಹಟ್ಟಿ ವರೆಗೂ ಖಾಸಗಿ ವಾಹನ, ಟಂಟಂ ಇಲ್ಲವೇ ನಡೆದುಕೊಂಡೇ ಹೋಗುತ್ತಾರೆ. 

ವಿದ್ಯಾರ್ಥಿಗಳ ಪರಿಸ್ಥಿತಿಯಂತೂ ಹೇಳ ತೀರದು. ಗ್ರಾಮದ ಪ್ರೌಢಶಾಲೆ ಮತ್ತು ಕಾಲೇಜಿನ 45 ವಿದ್ಯಾರ್ಥಿಗಳು ಪಕ್ಕದ ಕೇಸರಹಟ್ಟಿ ಗ್ರಾಮದ ಪ್ರೌಢಶಾಲೆ ಮತ್ತು ಕಾಲೇಜಿಗೆ ದಿನವೂ ನಡೆದುಕೊಂಡು ಹೋಗುತ್ತಾರೆ. ಮಳೆಗಾಲ ಶುರುವಾಗಿದ್ದು, ತಮ್ಮ ಮಕ್ಕಳು ಶಾಲೆಯಿಂದ ಮರಳಿ ಗ್ರಾಮಕ್ಕೆ ವಾಪಾಸಾಗುವವರೆಗೂ ಪಾಲಕರು ಭೀತಿಯಲ್ಲಿಯೇ ಕಾಲ ಕಳೆಯುವಂತಾಗಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಈ ಹಿಂದೆ ಶೈಕ್ಷಣಿಕ ವರ್ಷದಲ್ಲಿ ಸೈಕಲ್‌ ನೀಡಲಾಗಿದೆ. ಆದರೆ ಸೈಕಲ್‌ಗ‌ಳು ವಿವಿಧ ಕಾರಣಗಳಿಂದ ದುರಸ್ತಿಗೆ ಬಂದು ಮೂಲೆಗೆ ಸೇರಿವೆ. ಪ್ರತಿದಿನ ಹೋಗಿ-ಬರಲು ಟಂಟಂಗೆ 20 ರೂ. ವ್ಯಯಿಸುವುದು ಅಸಾಧ್ಯ. ಆದ್ದರಿಂದ ನಡೆದುಕೊಂಡು ಹೋಗಬೇಕಿದೆ.

ಸಮನ್ವಯ ಕೊರತೆ: ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳ ಸಮನ್ವಯ ಕೊರತೆಯಿಂದ ಕೇಸರಹಟ್ಟಿ ಗ್ರಾಮದಿಂದ ಮರುಕುಂಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾಣದೇ ಅನಾಥವಾಗಿದೆ. ರಸ್ತೆ ಸರಿ ಇಲ್ಲದೇ ಇರುವುದರಿಂದ ಗ್ರಾಮಕ್ಕೆ ಬಸ್‌ ಸಂಚಾರವನ್ನು ಕಲ್ಪಿಸಲು ಸಾರಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಸಾರಿಗೆ ಸೌಕರ್ಯದ ಕೊರತೆಯಿಂದಾಗಿ ಈ ಗ್ರಾಮದ ವಿದ್ಯಾರ್ಥಿಗಳು ದಿನವೂ ಶಾಲಾ, ಕಾಲೇಜಿಗೆ ತಲುಪಲು ಹರಸಾಹಸ ಪಡಬೇಕಾಗಿದೆ. ಶಾಲಾ ಮತ್ತು ಕಾಲೇಜಿನಿಂದ ವಾಪಾಸ್‌ ಬರುವಾಗ ಮಳೆ ಬಂದರೆ ರಕ್ಷಣೆಗಾಗಿ ಪರಿತಪ್ಪಿಸಬೇಕಾಗಿದೆ. ದಿನವೂ ನಡೆದುಕೊಂಡೆ ಶಾಲೆಗೆ ಹೋಗಬೇಕಿರುವುದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಬೇಸರಿಸಿಕೊಳ್ಳುತ್ತಾರೆ.

Advertisement

ರಸ್ತೆ ದುರಸ್ತಿಗೆ ಒತ್ತಾಯ: ಕೇಸರಹಟ್ಟಿ ಗ್ರಾಮದಿಂದ ಮರುಕುಂಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣಗೊಳಿಸಿ, ಡಾಬಂರೀಕರಣ ಮಾಡಬೇಕೆಂದು ಗ್ರಾಮಸ್ಥರು ಹಲವಾರು ಸಂಬಂಧಪಟ್ಟ ಅ ಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಮತ್ತು ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ತುಂಬಾ ತೊಂದರೆಯಾಗುತ್ತಿದೆ. ಕೊಡಲೇ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ಥಿಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಕೇಸರಹಟ್ಟಿ ಗ್ರಾಮದಿಂದ ಮರಕುಂಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾತಂರಿಸಿಲ್ಲ. ಇದರಿಂದ ರಸ್ತೆ ನಿರ್ಮಣಕ್ಕೆ ತೊಂದರೆಯಾಗಿದೆ. ಜಿಪಂನಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನವೂ ಇಲ್ಲ. ಗ್ರಾಮಸ್ಥರ ಹಿತದೃಷ್ಠಿಯಿಂದ ಈ ರಸ್ತೆಯ ಬಗ್ಗೆ ಒಮ್ಮೆ ಶಾಸಕರೊಂದಿಗೆ ಮಾತನಾಡುತ್ತೇನೆ.
 ಅಮರೇಶ ಗೋನಾಳ, ಜಿಪಂ ಸದಸ್ಯ.

ಸುಮಾರು ವರ್ಷಗಳಿಂದ ರಸ್ತೆಯನ್ನು ದುರಸ್ತಿಗೊಳಿಸಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿ ಕಾರಿಗಳು ಮತ್ತು ಜನಪತ್ರಿನಿಧಿ ಗಳು ಇದರ ಬಗ್ಗೆ ಗಮನ ಹರಿಸಬೇಕು.
 ಖದರಸಾಬ್‌ ಹುಸೇನಸಾಬ್‌,
ಗ್ರಾಮಸ್ಥರು.

ಶರಣಪ್ಪ ಗೋಡಿನಾಳ

Advertisement

Udayavani is now on Telegram. Click here to join our channel and stay updated with the latest news.

Next