Advertisement
”ನಾನು ಕಡಿಮೆ ತೆರಿಗೆ ಪದ್ಧತಿಯಲ್ಲಿ ನಂಬಿಕೆಯುಳ್ಳವನು. ಆದ್ದರಿಂದ, ಯಾವುದೇ ತೆರಿಗೆ ಕಡಿತ ಸ್ವಾಗತಾರ್ಹ ಏಕೆಂದರೆ ಜನರ ಕೈಗೆ ಹೆಚ್ಚಿನ ಹಣವನ್ನು ನೀಡುವುದು ಆರ್ಥಿಕತೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.
Related Articles
Advertisement
ಬಜೆಟ್ ನ ಲ್ಲಿ ಏನೂ ಇಲ್ಲ. ಅದು ‘ಸಪ್ನೋ ಕಾ ಸೌದಾಗರ್’ ಎಂಬಂತೆ – ಕನಸು ಕಂಡ ನಂತರ ಎಚ್ಚರವಾದಾಗ ಯಾವುದೂ ನಿಜವಾಗುವುದಿಲ್ಲ. ಅಲ್ಲದೆ, ಹಣದುಬ್ಬರ ಮತ್ತು ನಿರುದ್ಯೋಗವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ಏನನ್ನೂ ಉಲ್ಲೇಖಿಸಲಾಗಿಲ್ಲ ಎಂದು ಜೆಡಿಯು ಸಂಸದ ರಾಜೀವ್ ರಂಜನ್ ಪ್ರತಿಕ್ರಿಯಿಸಿದ್ದಾರೆ.
ಇದು ಕಾರ್ಪೊರೇಟ್ ಪರ ಬಜೆಟ್. ಈ ಬಜೆಟ್‌ನಲ್ಲಿ ಅದಾನಿಯ ಎಲ್ಲಾ ಹಿತಾಸಕ್ತಿಗಳನ್ನು ಈಡೇರಿಸಲಾಗಿದೆ, ಆದರೆ ಸಾಮಾನ್ಯ ಜನರನ್ನು ಕಡೆಗಣಿಸಲಾಗಿದೆ. ಈ ಬಜೆಟ್ ಅದಾನಿ, ಅಂಬಾನಿ, ಗುಜರಾತ್ ಪರವಾಗಿದೆ ಎಂದು ಕಾಂಗ್ರೆಸ್ ಸಂಸದ ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯ ಜನರಿಗೆ ಅನುಕೂಲವಾಗುವ ಬದಲು ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ರದ್ದುಗೊಳಿಸಲಾಗುತ್ತಿದೆ. ಬಡತನದಿಂದ ಮೇಲಕ್ಕೆ ಏರಿದ ಜನರು ಮತ್ತೆ ಬಡತನದ ಮಟ್ಟಕ್ಕಿಂತ ಕೆಳಕ್ಕೆ ಇಳಿದಿದ್ದಾರೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಪ್ರಸ್ತುತಪಡಿಸಲಾಗಿದೆ, ಆದರೆ ಮಧ್ಯಮ ವರ್ಗದವರಿಗೆ ಕೆಲವು ಸಡಿಲಿಕೆಗಳನ್ನು ನೀಡಲಾಗಿದೆ. ರೈತರು, ಉದ್ಯೋಗ ಮತ್ತು ಯುವಕರಿಗೆ ಎಂಎಸ್‌ಪಿ ಬಗ್ಗೆ ಸರ್ಕಾರ ಏನನ್ನೂ ಹೇಳಿಲ್ಲ. ಈ ಬಜೆಟ್‌ನಲ್ಲಿ ರೈಲ್ವೆಯನ್ನೂ ಕಡೆಗಣಿಸಲಾಗಿದೆ. ಇದು ನಿರಾಶಾದಾಯಕ ಬಜೆಟ್ ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಆದಾಯ ತೆರಿಗೆ ಪಾವತಿದಾರರಿಗೆ ಅತ್ಯಧಿಕ ಸ್ಲ್ಯಾಬ್‌ನಲ್ಲಿ ಕಡಿತಗೊಳಿಸಿರುವ ಈ ಬಜೆಟ್ ಹಮ್ ದೋ, ಹಮಾರೆ ದೋ..ಎನ್ನುವಂತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ.