ಆಕಾಶ ಮತ್ತು ಭೂಮಿ ಎಂದೂ ಒಂದು ಗೂಡುವುದಿಲ್ಲ. ಅವೆರಡೂ ಸಮಾಂತರ ರೇಖೆಗಳ ಹಾಗೆ, ಪರಸ್ಪರ ಸಂಧಿಸುವುದೇ ಇಲ್ಲ. ನಾವು ಒಂದು ಕಡೆ ನಿಂತಿದ್ದೇವೆ ಎಂದು ಕೊಳ್ಳೋಣ. ಅಲ್ಲಿಂದ ದೂರದ ಒಂದು ಬಿಂದುವಿನಲ್ಲಿ ನೆಲ – ಬಾನು ಕೂಡಿದಂತೆ ಕಾಣಿಸುತ್ತದೆ. ಆದರೆ ಅಲ್ಲಿಗೆ ಹೋಗಿ ನೋಡಿದರೆ ಅದು ಮರೀ ಚಿಕೆಯಂತೆ – ಸಂಧಿಸಿದಂತೆ ಕಾಣಿಸುವ ಬಿಂದು ಮತ್ತಷ್ಟು ದೂರಕ್ಕೆ ಓಡಿರುತ್ತದೆ. ನಾವು ಎಲ್ಲೇ ಹೋಗಲಿ; ನಮಗೂ ದಿಗಂತಕ್ಕೂ ಇರುವ ದೂರ ಒಂದೇ, ಅದು ಬದಲಾಗುವುದೇ ಇಲ್ಲ.
ಹೀಗೆ ಕೈಗೆ ಎಟುಕದೆ ಬೆಳೆಯುತ್ತ ಹೋಗುವುದೇ ಜೀವನದ ಸೌಂದರ್ಯ. ನಮ್ಮ ಬದುಕು ಕೂಡ ಹೀಗೆಯೇ ಪುರೋಗಾಮಿ ಯಾಗುತ್ತ ಹೋಗಬೇಕು. ಈ ಬೆಳವಣಿಗೆಗೆ ಅಂತ್ಯ ಎಂಬುದು ಇರಬಾರದು. ಯಾವುದು ಅಂತ್ಯವಿಲ್ಲದೆ ಬೆಳೆಯುತ್ತ ಹೋಗುತ್ತ ದೆಯೋ ಅದು ಅನಂತ. ಜೀವನ ಹಾಗಿರಬೇಕು.
ಆದರೆ ನಮ್ಮ ಪಾಲಿಗೆ ಈ ಅನಂತ ಸಾಧ್ಯವಾಗಬೇಕಾದರೆ ನಮ್ಮನ್ನು ನಾವೇ ಮೀರುವ ಹಂಬಲ ಇರಬೇಕು. ಪರಿವರ್ತನೆ ಹೇಗೆ ಎಂಬ ಚಿಂತನೆ ಸದಾಕಾಲ ಇದ್ದಾಗ ಮಾತ್ರ ಅದು ಸಾಧ್ಯ. ನಮ್ಮ ಮೂಲ ಪ್ರಾಣಿ ಜಗತ್ತಿನಲ್ಲಿದೆ. ಜೀವ ವಿಕಾಸ ಪ್ರಕ್ರಿಯೆಯ ಅತ್ಯುತ್ಕೃಷ್ಟ ಉತ್ಪಾದನೆ ನಾವು. ಆದರೆ ನಮ್ಮಲ್ಲಿಗೆ ಅದು ಮುಗಿಯಿತೇ? ಇಲ್ಲ, ಮುಗಿದಿಲ್ಲ. ಹಾಗಾದರೆ ಪ್ರಾಣಿ ಜೀವನ ಮತ್ತು ಸೃಷ್ಟಿಗಳ ನಡುವೆ ಮನುಷ್ಯ ಜೀವನ ಒಂದು ಸೇತುವೆ ಇದ್ದಂತೆ. ಆದ್ದರಿಂದಲೇ ಪುರಾತನ ದಾರ್ಶನಿಕ ಜರಾತುಷ್ಟ್ರ ಹೇಳಿದ್ದು, “ಮನುಷ್ಯನು ಪ್ರಾಣಿ ಮತ್ತು ಅತಿಮಾ ನುಷನ ನಡುವಣ ಸೇತುವೆ.’ ಮನುಷ್ಯ ಜನ್ಮ ಎಂಬುದು ಆದಿ ಮತ್ತು ಅಂತ್ಯಗಳ ನಡುವೆ ಸೇತುವೆ ಮಾತ್ರ. ನಾವು ಸೇತುವೆ ಯಲ್ಲಿಯೇ ಮನೆ ಕಟ್ಟಬಾರದು, ಸೇತುವಿ ನಲ್ಲಿಯೇ ಸ್ಥಗಿತಗೊಳ್ಳಬಾರದು. ಇನ್ನೂ ಮುಂದೆ ಹೋಗುವುದಕ್ಕಿದೆ.
ಮೊಘಲ್ ಅರಸ ಅಕºರ್‌ಗೆ ಒಂದು ಮಹಾನ್ ಕನಸು ಇತ್ತು. ಅದು ಎಂದೂ ನನಸಾಗಲಿಲ್ಲ. ಹಾಗೆಂದು ಅವನು ಕನಸು ಕಾಣುವುದನ್ನು ಬಿಟ್ಟಿದ್ದನೇ – ಇಲ್ಲ. ಕನಸು ಕಂಡ. ಕನಸು ಕಾಣಬೇಕು, ಅವು ನನಸಾಗ ದಿದ್ದರೂ ಅಡ್ಡಿಯಿಲ್ಲ. ಸಣ್ಣ ಸಣ್ಣ ಕನಸುಗಳು ಬೇಗ ಕೈಗೂಡುತ್ತವೆ; ಕನಸು ದೊಡ್ಡದಾ ದಷ್ಟು ನನಸಾಗದಿರುವ ಸಾಧ್ಯತೆ ಹೆಚ್ಚುತ್ತದೆ.
ಅಕºರ್ ಒಂದು ಹೊಸ ರಾಜಧಾನಿಯನ್ನು ನಿರ್ಮಿಸಲು ಬಯಸಿದ್ದ. ಅದು ಅತ್ಯಂತ ಅಪೂರ್ವ ವಾಗಿರಬೇಕು, ವಿನೂತನ ವಾಗಿರಬೇಕು ಎಂದು ಕೊಂಡಿದ್ದ. ಅದಕ್ಕಾಗಿ ಇನ್ನೂ ಯುವಕನಾಗಿದ್ದಾಗಲೇ . ಕೆಲಸ ಆರಂಭಿಸಿದ. ಸಾವಿ ರಾರು ಮಂದಿ ವಾಸ್ತು ಶಿಲ್ಪಿಗಳು, ಕೆಲಸಗಾರರು, ಕಲ್ಲುಕುಟಿಗರು ಐವತ್ತು ವರ್ಷಗಳ ಕಾಲ ಅದಕ್ಕಾಗಿ ದುಡಿದರು.
ಆದರೆ ಅದು ಕೈಗೂಡಲಿಲ್ಲ. ಅದಕ್ಕೆ ಮುನ್ನವೇ ಅಕºರ್ ಮರಣಿಸಿದ. ಆತ ತನ್ನ ಬೊಕ್ಕಸವನ್ನೆಲ್ಲ ಆ ರಾಜಧಾನಿಗಾಗಿ ಬರಿದು ಮಾಡಿದ್ದರಿಂದ ಅವನ ಉತ್ತರಾಧಿಕಾರಿಗಳು ಅತ್ತ ಆಸಕ್ತಿ ತೋರಿಸಲಿಲ್ಲ.
ಹೊಸ ರಾಜಧಾನಿಯನ್ನು ಒಂದು ಸುಂದರ ಸೇತುವೆಯ ಮೂಲಕ ಪ್ರವೇಶಿ ಸುವ ಹಾಗೆ ಅಕºರ್ ಯೋಜಿಸಿದ್ದ. ಅಲ್ಲಿಗೆ ಬರುವವರನ್ನು ಅಪೂರ್ವವಾದ ಲೇಖ ವೊಂದು ಸ್ವಾಗತಿಸಬೇಕು ಎಂಬುದು ಅವನ ಬಯಕೆಯಾಗಿತ್ತು.
ಅಂಥದೊಂದು ಉಕ್ತಿಯನ್ನು ವಿದ್ವಾಂಸರ ಮೂಲಕ ಹುಡುಕಿಸಿದ್ದ ಅಕºರ್. ಅವರು ಎತ್ತಿಕೊಟ್ಟ ನುಡಿ ಅದೇ, “ಮನುಷ್ಯ ಜೀವನ ಸೇತುವೆಯಷ್ಟೇ. ಯಾರೂ ಅಲ್ಲಿ ಮನೆ ಕಟ್ಟಿಕೊಳ್ಳಬಾರದು. ಅದು ದಾಟಿ ಹೋಗು ವುದಕ್ಕಾಗಿಯಷ್ಟೇ ಇದೆ’.
(ಸಾರ ಸಂಗ್ರಹ)