Advertisement

ಮಲಿಂಡೋ ಏರ್‌ ವತಿಯಿಂದ ಮಲೇಷಿಯಾಕ್ಕೆ ವಿಮಾನ ಸೇವೆ

12:58 PM Dec 23, 2017 | |

ಬೆಂಗಳೂರು: ಮಲೇಷಿಯನ್‌ ವಿಮಾನ ಸಂಸ್ಥೆಯವರ ಮಲಿಂಡೋಏರ್‌, ಸಿಎಪಿಎ 2016 ವಾರದಲ್ಲಿ ಎರಡು ದಿನ (ಗುರುವಾರ ಮತ್ತು ಭಾನುವಾರ) ಬೆಂಗಳೂರಿಂದ ನೇರವಾಗಿ ಮಲೇಷಿಯಾದ ಕೌಲಾಲಂಪುರ ನಗರಕ್ಕೆ ವಿಮಾನ ಪ್ರಯಾಣ ಸೇವೆಯನ್ನು ಆರಂಭಿಸಿದೆ.

Advertisement

ಈ ಬಗ್ಗೆ ನಗರದ ಹೋಟೆಲಿನಲ್ಲಿ ಶುಕ್ರವಾರ ಮಲಿಂಡೋ ಏರ್‌ (ಮಾರಾಟ ಮತ್ತು ಬಿಸಿನೆಸ್‌ ಡೆವೆಲಪ್‌ಮೆಂಟ್‌) ಜನರಲ್‌ ಮ್ಯಾನೇಜರ್‌ ರಾಮದಾಸ್‌ ಶಿವರಾಂ ಅವರು ಪತ್ರಿಕಾಗೋಷ್ಠಿ ನಡೆಸಸಿ, ಮಲಿಂಡೋ ಏರ್‌ ವಿಮಾನ ಪ್ರಯಾಣ ಸೇವೆ ಇದು ಮೊದಲಲ್ಲ. 2013ರಿಂದಲೇ ದೆಹಲಿ, ಅಮೃತಸರ, ಮುಂಬೈನಿಂದ ಆರಂಭವಾಗಿದೆ ಎಂದರು.

ಪ್ರಸ್ತುತ ಬೆಂಗಳೂರು ನಮ್ಮ 8ನೇ ನಗರವಾಗಿದ್ದು, ಇಲ್ಲಿಂದ ವಾರಕ್ಕೆ ಎರಡು ದಿನಗಳು ನೇರವಾಗಿ ಕೌಲಾಲಂಪುರ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿದ್ದೇವೆ. ಬೆಂಗಳೂರಿನಿಂದ ದೆಹಲಿಗೆ ಹೋಗುವ ವಿಮಾನ ಪ್ರಯಾಣ ವೆಚ್ಚದಲ್ಲಿ ಮಲೇಷಿಯಾ ಸೇರಬಹುದಾಗಿದೆ. ಅಷ್ಟು ಕಡಿಮೆ ವೆಚ್ಚದಲ್ಲಿ ಸೇವೆ ಆರಂಭಿಸಿದ್ದೇವೆ.

ಮಲೇಷಿಯಾ ಟೂರಿಸಂ ನಿರ್ದೇಶಕ (ದಕ್ಷಿಣ ಭಾರತ ಮತ್ತು ಶ್ರೀ ಲಂಕಾ) ನೂರ್‌ ಅಜ್ಮಾನ್‌ ಮಾತನಾಡಿ, ಭಾರತದ ಪ್ರವಾಸಿಗರಿಗೆ ಮಲೇಷಿಯಾ ಸರ್ಕಾರ ಕೂಡಲೇ ಟೂರಿಸ್ಟ್‌ ವಿಸಾ ಬಿಡುಗಡೆ ಮಾಡುತ್ತಿದ್ದು ಇದರ ಉಪಯೋಗ ವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಜನರಲ್‌ ಮ್ಯಾನೇಜರ್‌ (ಮಾರಾಟ – ಇಂಡಿಯಾ) ಮನೋಜ್‌ ಮೆಹ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next