Advertisement

Haveri: ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

10:49 AM Oct 17, 2024 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ರಸ್ತೆಗಳು ಕೆರೆಯಂತಾಗಿದ್ದು, ರಸ್ತೆ ಕಾಣದೆ ಚರಂಡಿಗೆ ಬಿದ್ದು ಬಾಲಕನೊಬ್ಬ ಕೊಚ್ಚಿ ಹೋದ ಘಟನೆ ನಗರದ ಎಸ್.ಪಿ. ಕಚೇರಿ ಮುಂಭಾಗದಲ್ಲಿ ನಡೆದಿದೆ.

Advertisement

ನೀವೆದನ್ ಬಸವರಾಜ ಗುಡಗೇರಿ (12) ಚರಂಡಿಯಲ್ಲಿಕೊಚ್ಚಿ ಹೋದ ಬಾಲಕ.  ರಾತ್ರಿ ಸುರಿದ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರೆಯುತ್ತಿದ್ದು, ರಸ್ತೆ ಯಾವುದು ಚರಂಡಿ ಯಾವುದು ಎಂಬದು ಗೊತ್ತಾಗಂತಾಗಿದೆ. ಬೆಳಗ್ಗೆ ಬಾಲಕ ರಸ್ತೆಯಲ್ಲಿ ಸಂಚರಿಸುವ ನೀರು ಹರಿಯುತ್ತಿದ್ದರಿಂದ  ಚರಂಡಿ ಇರುವುದು ಗೊತ್ತಾಗದೆ  ಚರಂಡಿ ಮೇಲೆ ಕಾಲಿಟ್ಟಾಗ ನೀರಿನಲ್ಲಿ ಕೊಚ್ಚಿಹೊಗಿದ್ದಾನೆ ಎನ್ನಲಾಗುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಅಂಶುಕುಮಾರ, ನಗರಸಭೆ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ಬಾಲಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಅನಾಥಶ್ರಮಕ್ಕೆ ನುಗ್ಗಿದ ನೀರು

Advertisement

ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿರುವ ಶಕ್ತಿ ಅನಾಥಶ್ರಮಕ್ಕೆ ನೀರು ನುಗ್ಗಿ ಜಲಾವೃತಗೊಂಡಿದೆ. ಆಶ್ರಮದಲ್ಲಿರುವ 17 ಜನ ವೃದ್ಧರು ನೀರಿನಲ್ಲಿ ನೆನೆಯುವಂತಾಗಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ನಗರಸಭೆ ಸಮೀಪವಿರುವ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next