Advertisement

ಶರೀರವನ್ನು ಸಾಧನೆಗೆ ಬಳಸಿಕೊಳ್ಳಬೇಕು: ಶ್ರೀ ಈಶಪ್ರಿಯ ಸಾಮೀಜಿ

05:57 PM Apr 01, 2023 | Team Udayavani |

ಮುಂಬಯಿ: ಶ್ರೀರಾಮನನ್ನು ತಿಳಿಸಿಕೊಡುವ ಹನುಮನನ್ನು ನಾವು ಮೊದಲು ಕಾಣಬೇಕು. ಶ್ರೀರಾಮನ ದರ್ಶನವಾಗಬೇಕಾದರೆ ಹನುಮಂತನ ಕೃಪೆ ಬಹಳ ಮುಖ್ಯವಾಗಿದೆ. ಮನುಷ್ಯರಾಗಿ ಹುಟ್ಟಿದ ಬಳಿಕ ನಾವು ಶರೀರವನ್ನು ಸಾಧನೆಗೆ ಬಳಸಿಕೊಳ್ಳಬೇಕು. ವೈಕುಂಠ ಯಾತ್ರೆಗೆ ಹೋಗುವಂತಾಗಬೇಕು. ಅದಕ್ಕಾಗಿ ಇಂತಹ ಸಾಧನೆಗೆ ಈ ಶರೀರ ಬಳಸಿಕೊಳ್ಳಬೇಕು.

Advertisement

ಶರೀರರಲ್ಲಿ ಸಾಧನೆ ಮಾಡಬೇಕು ಅಂದರೆ ಪ್ರಾಣ ದೇವರ ಅನುಗ್ರಹ ಇರಬೇಕು. ಸಾಧಕರ ಫಲ ಅವರೊಬ್ಬರಿಗಲ್ಲ. ಅವರ ಪರಂಪರೆಗೆ ದೊರಕುತ್ತದೆ ಎಂದು ಉಡುಪಿ ಅದಮಾರು ಮಠದ ಕಿರಿಯ ಯತಿವರ್ಯ ಶ್ರೀ ಈಶಪ್ರಿಯ ಸ್ವಾಮೀಜಿ ಹೇಳಿದರು.

ಅಂಧೇರಿ ಪಶ್ಚಿಮದ ಇರ್ಲಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ಮಾ. 30ರಂದು ನಡೆದ 26ನೇ ವಾರ್ಷಿಕ ಶ್ರೀರಾಮ ನವಮಿ ಉತ್ಸವ ಮತ್ತು ಸಾಂಸ್ಕೃತಿಕ ವೈಭವ ಸಂಭ್ರಮದಲ್ಲಿ ಪ್ರತಿಷ್ಠಾಪಿತ ಶ್ರೀ ದೇವರಿಗೆ ಸ್ವಾಮೀಜಿಯವರು ಪೂಜೆ ನೆರವೇರಿಸಿ, ಜನರಲ್ಲಿ ಭಕ್ತಿ ಮೂಡಲು ಮತ್ತು ಸೂಕ್ತ ಪರಿಸರ ನಿರ್ಮಾಣ ಮಾಡಲು ಮೂಲ ಕಾರಣರು ವಿಭುಧೇಶ ತೀರ್ಥರು.

ಪ್ರವಚನಕ್ಕೆ ಸೌಂದರ್ಯ ತಂದುಕೊಟ್ಟವರು ಇವರು. ಇಂತಹ ಶುಭಾವಸರದಲ್ಲಿ ವಿಶ್ವಪ್ರಿಯರನ್ನು ಸ್ಮರಣೆ ಮಾಡಿಕೊಳ್ಳುವುದು ಅವಶ್ಯ. ಕ್ರಮೇಣ ಮುಂಬಯಿಯಲ್ಲಿ ವಿಶ್ವಪ್ರಿಯರು ಪ್ರವಚನವನ್ನು ಯಜ್ಞದಂತೆ ನಡೆಸಿಕೊಂಡು ಬಂದಿರುವುದು ಭಕ್ತರ ಭಾಗ್ಯವಾಗಿದೆ. ಅವರ ಸಾಧನೆಯ ಫಲವಾಗಿ ಸಂಗ್ರಹ ರಾಮಾಯಣದ ಚಿಂತನೆ ಮಾಡಿಕೊಳ್ಳಲು ಸಾಧ್ಯವಾಗಿದೆ. ಶ್ರೀರಾಮನ ಆದರ್ಶಗಳನ್ನು ಅಳವಡಿಕೊಳ್ಳಲು ಇದು ಪೂರಕವಾಗಿದೆ ಎಂದು ಭಕ್ತರಿಗೆ ಮಂಗಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಅದಮಾರು ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್‌ ರಾವ್‌ ಶ್ರೀಪಾದರಿಗೆ ತುಳಸಿ ಹಾರವನ್ನಿತ್ತು ಸಾಂಪ್ರದಾಯಿಕವಾಗಿ ಗೌರವಿಸಿದರು. ಶ್ರೀಪಾದರು ಶ್ರೀರಾಮ ನವಮಿಯ ಸೇವಾಕರ್ತರಾದ ಪರೇಲ್‌ ಶ್ರೀನಿವಾಸ್‌ ಭಟ್‌, ಸುರೇಶ್‌ ಭಟ್‌ ಕುಂಟಾಡಿ, ದಿನೇಶ್‌ ಕೋಟ್ಯಾನ್‌, ಅಶೋಕ್‌ ದೇವಾಡಿಗ, ನಟರಾಜ್‌ ಪಿ. ಎಸ್‌., ಗಣೇಶ್‌ ರಾವ್‌ ಮತ್ತು ಗಣ್ಯರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು.

Advertisement

ಮಮತಾ ರಾವ್‌, ಮಹಿಷಮರ್ದಿನಿ ಭಜನ ಮಂಡಳಿ, ವಾಗ್ದೇವಿ ಭಜನ ಮಂಡಳಿಯವರು ಭಜನೆಗೈದರು. ಶ್ರೀನಿವಾಸ ಭಟ್‌ ಮತ್ತು ಬಳಗ, ಸಾವಿತ್ರಿ ಮತ್ತು ಬಳಗದಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಿನೇಶ್‌ ಕೋಟ್ಯಾನ್‌ ಬಳಗದಿಂದ ಸ್ಯಾಕ್ಸೋಪೋನ್‌ ವಾದನ, ಸುಕನ್ಯಾ ಭಟ್‌ ಮತ್ತು ಬಳಗ, ಶ್ವೇತಾ ಪೈ ನೃತ್ಯ ಆಕಾಡೆಮಿಯ ಕಲಾವಿದರಿಂದ ಭರತನಾಟ್ಯ ಪ್ರದರ್ಶನಗೊಂಡಿತು.

ದಿನಪೂರ್ತಿ ನಡೆದ ಉತ್ಸವದಲ್ಲಿ ಚೆಂಬೂರು ಶ್ರೀ ಸುಬ್ರಹ್ಮಣ್ಯ ಮಠದ ವಿದ್ವಾನ್‌ ವಿಷ್ಣು ಕಾರಂತ್‌, ಸಾಂತಾಕ್ರೂಜ್‌ ಪೇಜಾವರ ಮಠದ ವಿಷ್ಣುತೀರ್ಥ ಸಾಲಿ, ಸಯಾನ್‌ ಗೋಕುಲಾದ ಗೋಪಾಲ್‌ ಭಟ್‌ ಕಿದಿಯೂರು ಹಾಗೂ ಪುರೋಹಿತರಾದ ಅಂಬೋಲಿ ಶ್ರೀಪಾದ್‌ ಭಟ್‌, ಶಂಕರ್‌ ಕಲ್ಯಾಣಿತ್ತಾಯ, ರಾಘವೇಂದ್ರ ಉಡುಪ, ಹರೀಶ್‌ ಭಟ್‌ ರೇರೋಡ್‌, ನಾರಾಯಣ ದೇಸಾಯಿ, ಜನಾರ್ದನ ಅಡಿಗ, ಆರ್‌. ಎಲ್‌. ಭಟ್‌, ಮಠದ ಮುಂದಾಳು ಸರ್ವಜ್ಞ ಉಡುಪ, ಸಿಎ ಸುಧೀರ್‌, ಆರ್‌. ಎಲ್‌. ಶೆಟ್ಟಿ, ಶೇಖರ್‌ ಜೆ. ಸಾಲ್ಯಾನ್‌ ಸಾಂತಾಕ್ರೂಜ್‌, ವಾಣಿ ರಾಜೇಶ್‌ ರಾವ್‌, ಮಾ| ಶ್ರೀಷ ಆರ್‌. ರಾವ್‌, ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು, ಭಕ್ತರು ಪಾಲ್ಗೊಂಡಿದ್ದರು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next