Advertisement
ರೈಲ್ವೇ ನಿಲ್ದಾಣದ ಪ್ಲಾಟ್ ಫಾರಂನಿಂದ ಎಡಕ್ಕೆ ಚಲಿಸಿದರೆ ಎಪಿಎಂಸಿ ರೈಲ್ವೇ ಗೇಟ್‌ಗೆ ಸಮೀಪ ರೈಲ್ವೇ ನಾಮಫಲಕದ ಪಕ್ಕದಲ್ಲಿರುವ ಪೊದೆಯಲ್ಲಿ ಶವ ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದ್ದರಿಂದ ಗುರುತು ಪತ್ತೆಯಾಗಿಲ್ಲ. ಗೆಜ್ಜೆ, ಸೀರೆ ಮೇಲ್ನೊಟಕ್ಕೆ ಕಾಣಿಸುತ್ತಿದ್ದು, ತಲೆ ಭಾಗ ಯಾವುದೋ ಪ್ರಾಣಿ ತಿಂದಿರುವಂತೆ ಮತ್ತು ಹುಳವಾಗಿರುವುದರಿಂದ ಮುಖ ಗುರುತು ಸಿಗುತ್ತಿಲ್ಲ. ಸುಮಾರು 35 ರಿಂದ 40 ವರ್ಷದ ಮಹಿಳೆ ಆಗಿರಬಹುದೆಂದು ಊಹಿಸಲಾಗಿದ್ದು, ಎರಡು ಮೂರು ದಿನದ ಹಿಂದೆಯೇ ಮಹಿಳೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ಮತ್ತು ರೈಲ್ವೇ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ: ಧರ್ಮಸ್ಥಳ ಪ್ರವೇಶ ದ್ವಾÌರದ ಸಮೀಪ ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಮಾರು 70 ವರ್ಷ ಪ್ರಾಯದ ಮಹಿಳೆ ಧರ್ಮಸ್ಥಳ ಗೇಟಿನ ಸಮೀಪ ಅಸ್ವಸ್ಥರಾಗಿ ಕುಸಿದು ಬಿದ್ದವರನ್ನು ಸ್ಥಳೀಯರು ಧರ್ಮಸ್ಥಳ ಪೊಲೀಸರ ಸಹಕಾರದೊಂದಿಗೆ ಮಂಗಳೂನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈಕೆ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತಪಟ್ಟಿದ್ದಾರೆ.
Related Articles
Advertisement