Advertisement
ಎರಡು ವರ್ಷಗಳ ಹಿಂದೆ ಕೇರಳ ಸರಕಾರವು ಬಿಪಿಸಿಎಲ್ ಜತೆ ಸೇರಿ “ಮರೈನ್ ಆ್ಯಂಬುಲೆನ್ಸ್’ ಸೇವೆ ಆರಂಭಿಸಿದ ಬಳಿಕ ರಾಜ್ಯದಲ್ಲೂ ಬೋಟ್ ಆ್ಯಂಬುಲೆನ್ಸ್‌ಗೆ ಬೇಡಿಕೆ ವ್ಯಕ್ತವಾಗಿತ್ತು. ಅಧಿಕಾರಿಗಳು ಅಗತ್ಯ ಮಾಹಿತಿ ಸಂಗ್ರಹಿಸಿ ಯೋಜನೆ ಸಿದ್ಧಪಡಿಸಿ, ಕೇರಳದಲ್ಲಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಬೋಟ್ ಆ್ಯಂಬುಲೆನ್ಸ್‌ಗಳನ್ನು ಆರಂಭಿಸಲು ನಿರ್ಧರಿಸಿದ್ದರು. ಆದರೆ ಈ ಯೋಜನೆ ಬಜೆಟ್‌ನಲ್ಲಿ ಸೇರ್ಪಡೆಯಾಗಿರದ ಕಾರಣ ಕಾರ್ಯಗತಗೊಂಡಿಲ್ಲ ಎಂದು ತಿಳಿದುಬಂದಿದೆ.
ಇದು ಸಮುದ್ರದಲ್ಲಿ ತುರ್ತಾಗಿ ಜೀವ ಉಳಿಸಲು ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಒಳ ಗೊಂಡಿರುವ ನೌಕೆ. ಗಂಟೆಗೆ ಸುಮಾರು 14 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ವಿದ್ದು, ಏಕಕಾಲದಲ್ಲಿ ಸುಮಾರು 10 ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದ ರಲ್ಲಿರುತ್ತದೆ. ಈಜು ಗಾರರು, ತಜ್ಞ ವೈದ್ಯರು, ಆರೋಗ್ಯ ಸಿಬಂದಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಕಡಲಿನಲ್ಲಿ ಬೇರೆ ವ್ಯವಸ್ಥೆ ಇಲ್ಲ
ಈಗ ಮೀನುಗಾರಿಕಾ ದೋಣಿ ಗಳು ಅವಘಡಕ್ಕೀಡಾದರೆ ರಕ್ಷಣೆಗೆ ಬೇರೊಂದು ಬೋಟ್‌ನವರೇ ಧಾವಿಸಬೇಕಾಗಿದೆ. ಅನೇಕ ಬಾರಿ ರಕ್ಷಿಸಿ ದರೂ ಪ್ರಥಮ ಚಿಕಿತ್ಸೆ ಸಾಧ್ಯ ವಾಗುತ್ತಿಲ್ಲ. ತುರ್ತಾಗಿ ದಡಕ್ಕೆ ಸಾಗಿ ಸು ವುದೂ ಕಷ್ಟವಾಗಿದೆ. ಕರಾವಳಿ ಕಾವಲು ಪೊಲೀಸ್ ಪಡೆ ಅಥವಾ ಕೋಸ್ಟ್ ಗಾರ್ಡ್‌ನವರಲ್ಲಿ ಸೀಮಿತ ಸಂಖ್ಯೆಯ ಬೋಟ್‌ಗಳಿದ್ದು, ಅವು ಬೋಟ್ ಆ್ಯಂಬುಲೆನ್ಸ್‌ನಂತಹ ವ್ಯವಸ್ಥೆಗಳನ್ನೂ ಹೊಂದಿಲ್ಲ.
Related Articles
ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 2018ರಿಂದ ಮೇ 23ರ ವರೆಗೆ ಬೋಟ್ ಅವಘಡಗಳಲ್ಲಿ 9 ಮಂದಿ ಮೃತಪಟ್ಟಿದ್ದು, ಓರ್ವ ನಾಪತ್ತೆಯಾಗಿದ್ದಾರೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 2019-20ರ ಸಾಲಿನಲ್ಲಿ 32 ಮಂದಿ, 2020-21ರಲ್ಲಿ 29 ಮಂದಿ, 2021-22ರಲ್ಲಿ (ಮೇ 24ರ ವರೆಗೆ) 20 ಮಂದಿ ಮೃತಪಟ್ಟಿದ್ದಾರೆ.
Advertisement
ಮೀನುಗಾರರ ಜೀವರಕ್ಷಣೆಗೆ ನೆರವಾಗುವ ಉದ್ದೇಶದಿಂದ ಬೋಟ್ ಆ್ಯಂಬುಲೆನ್ಸ್ ಸೇವೆಗಾಗಿ ಪ್ರಸ್ತಾವನೆ ಸಿದ್ಧವಾಗಿದೆ. 3 ಬೋಟ್ ಆ್ಯಂಬುಲೆನ್ಸ್‌ಗಳನ್ನು ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಮುಖ್ಯಮಂತ್ರಿ ಜತೆಗೆ ಮಾತುಕತೆ ನಡೆಸುತ್ತೇನೆ.– ಎಸ್. ಅಂಗಾರ, ಮೀನುಗಾರಿಕಾ ಸಚಿವ - ಸಂತೋಷ್ ಬೊಳ್ಳೆಟ್ಟು