Advertisement
ಹಲವು ವರ್ಷಗಳ ಹಿಂದೆ ಮುಟ್ಟಳಿವೆ ಸರಿದು ಉಂಟಾಗಿದ್ದ ಭೂ ಪ್ರದೇಶವನ್ನು ಬ್ಲೂ ಫ್ಲ್ಯಾಗ್ ಬೀಚ್ ಯೋಜನಾ ಪ್ರದೇಶವಾಗಿ 8 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ವಾಕಿಂಗ್ ಬೇಗಳು, ವಸ್ತ್ರ ಬದಲಾವಣೆ ಕೊಠಡಿಗಳು, ಶೌಚಾಲಯ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಅವೆಲ್ಲವೂ ಮರಳಿನಿಂದ ಆವೃತವಾಗಿವೆ.
ಯೋಜನಾ ಪ್ರದೇಶವು ಎರಡು ಹೋಳಾಗಿದ್ದು, ನದಿಯ ಒಂದು ಭಾಗವು ಶೌಚಾಲಯಕ್ಕೆ ಸಂಬಂಧಿಸಿದ ನೀರಿನ ಟ್ಯಾಂಕ್ ಬಳಿಯೇ ಸಮುದ್ರ ಸೇರುತ್ತಿದೆ. 1 ಕಿ.ಮೀ. ತೀರ ಪ್ರದೇಶವು ಸದ್ಯ ಯೋಜನೆಗೆ ನಷ್ಟವಾಗಿದೆ. ಎಚ್ಚರಿಕೆ ನೊಟೀಸ್ ರವಾನಿಸಿತ್ತು
ಕೇಂದ್ರದ ಯೋಜನೆಯಾಗಿದ್ದರೂ ಸಿಆರ್‌ಝಡ್ ಪ್ರದೇಶವಾಗಿ ರುವುದರಿಂದ ಕರಾವಳಿ ನಿಯಂತ್ರಣ ಕಾಯಿದೆಯನ್ವಯ ಸೂಕ್ತ ಪರವಾನಿಗೆ ಪಡೆದುಕೊಳ್ಳುವಂತೆ ಇಲಾಖೆ ಎಚ್ಚರಿಕೆ ನೋಟಿಸುಗಳನ್ನು ರವಾನಿಸಿತ್ತು. ಉಳಿದೆಲ್ಲ ಅನುಮತಿ ಪತ್ರಗಳನ್ನು ಪಡೆದ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರು. ತಾನು ಈ ಪ್ರದೇಶಕ್ಕೆ ಭೇಟಿಯಿತ್ತು ಪರಿಶೀಲಿಸಿ ರುತ್ತೇನೆ ಎಂದು ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ಅಧಿಕಾರಿ ಪ್ರಸನ್ನ ಪಟಗಾರ್ ಅವರು ತಿಳಿಸಿದ್ದಾರೆ.
Related Articles
ಯೋಜನೆಯ ಪೂರ್ವಭಾವಿ ಸಿದ್ಧತೆ ಗಳಿಗಾಗಿ ರಾಜ್ಯ ಸರಕಾರದಿಂದ 2.68 ಕೋಟಿ ರೂ. ಮಂಜೂರು ಆಗಿದೆ. ಮಳೆಗಾಲ ಎದುರಾದ್ದರಿಂದ ಎಲ್ಲವನ್ನು ವ್ಯಯಿಸಿಲ್ಲ. ಈಗ ಪ್ರಾಕೃತಿಕ ವಿಕೋಪದಿಂದಾಗಿ 6,000 ಚ. ಅಡಿ ಭೂಭಾಗವು ಯೋಜನೆಯಲ್ಲಿ ನಷ್ಟವಾಗಿದೆ. ಅದರ ಹೊರತಾಗಿ ಯೋಜನೆ ಮುಂದುವರಿಯಲಿದೆ. ಕೊಚ್ಚಿ ಹೋದ ಜಾಗವು ಮತ್ತೆ ಸಿಗಬಹುದೆಂಬ ವಿಶ್ವಾಸವಿದೆ ಎಂದು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಉಪನಿರ್ದೇಶಕ ಚಂದ್ರಶೇಖರ್ ನಾಯ್ಕ ಹೇಳಿದ್ದಾರೆ.
Advertisement