Advertisement

ಬಿಜೆಪಿ ಆಫ‌ರ್‌ ಬಂದ್ರೆ ಜನರ ಕೇಳಿ ತೀರ್ಮಾನ

07:17 AM Mar 08, 2019 | Team Udayavani |

ಮೈಸೂರು: ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್‌ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಬೇಕು ಎಂದು ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಒತ್ತಾಯಿಸಿದೆ.

Advertisement

ನಗರದ ಪತ್ರಕರ್ತರ ಭವದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್‌, ವಿಜಯಶಂಕರ್‌ ಅವರು ಈ ಹಿಂದೆ ಎರಡು ಬಾರಿ ಈ ಕ್ಷೇತ್ರದ ಸಂಸದರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅನುಭವಿ ರಾಜಕಾರಣಿಯಾಗಿ, ಜಾತ್ಯತೀತ ಮುಖಂಡರಾಗಿರುವ ವಿಜಯ ಶಂಕರ್‌, ಎಲ್ಲಾ ಪಕ್ಷಗಳ ರಾಜಕೀಯ ನಾಯಕ ರೊಂದಿಗೂ ಉತ್ತಮ ಒಡನಾಟ ಹೊಂದಿದ್ದಾರೆ. ಅಂಥವರು ಈ ಕ್ಷೇತ್ರದ ಸಂಸದರಾಗ ಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.

ಕಾಂಗ್ರೆಸ್‌ ನಾಯಕರು ಯಾವುದೇ ಕಾರಣಕ್ಕೂ ಮೈಸೂರು-ಕೊಡಗು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡದೆ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಸಿ.ಎಚ್.ವಿಜಯಶಂಕರ್‌ ಅವರನ್ನು ಕಣಕ್ಕಿಳಿಸಬೇಕು. ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ಸಂದರ್ಭವೇ ಬೇರೆ, ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಜೆಡಿಎಸ್‌ ನವರೂ ಸಹ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ. ಸಿದ್ದರಾಮಯ್ಯ ಅವರು ಈಗಾಗಲೇ ತಾವು ಮುಂಬರುವ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರು ವುದರಿಂದ ಅವರು ನಿಲ್ಲುತ್ತಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್‌ನಲ್ಲೂ ಹಲವರು ಟಿಕೆಟ್ ಆಕಾಂಕ್ಷಿ ಗಳಿರುವುದು ಸಹಜ, ಆದರೆ ಅಂತಿಮವಾಗಿ ವಿಜಯಶಂಕರ್‌ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭ ವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡರಾದ ಮೈಸೂರು ತಾಪಂ ಮಾಜಿ ಅಧ್ಯಕ್ಷೆ ಮಂಜುಳ ಮಂಜುನಾಥ್‌, ಬಳಗದ ನಗರಾಧ್ಯಕ್ಷ ಹೆಬ್ಟಾಳ್‌ ವಿಜಯ್‌, ಜಿಲ್ಲಾಧ್ಯಕ್ಷ ಮುಳ್ಳೂರು ದೇವರಾಜ್‌, ಮುರುಳಿ, ಹುಣಸೂರು ರಘು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಆಫ‌ರ್‌ ಬಂದರೆ ಜನರ ಕೇಳಿ ತೀರ್ಮಾನಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡುವುದಾಗಿ ಬಿಜೆಪಿಯಿಂದ ಆಫ‌ರ್‌ ಬಂದರೆ ಜನರನ್ನು ಕೇಳಿ ತೀರ್ಮಾನ ತೆಗೆದು ಕೊಳ್ಳುವುದಾಗಿ ಅಭ್ಯರ್ಥಿ ಆಕಾಂಕ್ಷಿ ಸುಮಲತಾ ಅಂಬರೀಶ್‌ ಹೇಳಿದ್ದಾರೆ.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ ಬಗ್ಗೆ ಬಿಜೆಪಿಯವರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಆದರೆ, ಈವರೆಗೆ ಆ ಪಕ್ಷದವರ್ಯಾರು ನನ್ನ ಬಳಿ ನೇರವಾಗಿ ಮಾತನಾಡಿಲ್ಲ. ಬಿಜೆಪಿಯವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ನನ್ನ ಬಳಿ ಅವರು ಚರ್ಚೆಗೆ ಬಂದಾಗ ತೀರ್ಮಾನ ಮಾಡುತ್ತೇನೆ. ನನಗೆ ಯಾವುದೇ ಹುದ್ದೆಗಳೂ ಬೇಡ ಎಂದು ತಿಳಿಸಿದರು.

ಸ್ಪರ್ಧೆ ಖಚಿತ: ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಈಗಾಗಲೇ ಪ್ರವಾಸ ಮಾಡಿದ್ದು, ಎಲ್ಲೆಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕ್ಷೇತ್ರದ ಜನರ ಒತ್ತಾಯಕ್ಕೆ ಮಣಿದು ಅವರ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಆದರೆ, ಯಾವ ದಾರಿಯಲ್ಲಿ ಹೋಗಬೇಕು ಎಂಬ ಗೊಂದಲವಿದೆ. ಇದುವರೆಗೂ ಕಾಂಗ್ರೆಸ್‌ ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂದು ಕೊಂಡಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಆದರೆ, ಯಾವ ದಾರಿಯಲ್ಲಿ ಹೋಗಬೇಕು ಎಂಬುದನ್ನು ಜನರನ್ನು ಕೇಳಿ ನಿರ್ಧಾರ ಮಾಡುತ್ತೇನೆ. ಒಂದು ವೇಳೆ ಬಿಜೆಪಿಯಿಂದ ಆಫ‌ರ್‌ ಬಂದರೂ ಆ ಬಗ್ಗೆಯೂ ಜನರ ಅಭಿಪ್ರಾಯ ಕೇಳಿಯೇ ಮುಂದುವರಿಯುತ್ತೇನೆ ಎಂದು ತಿಳಿಸಿದರು.

ಮಂಡ್ಯದಿಂದಲೇ ಸ್ಪರ್ಧೆ: ಪ್ರತಿಯೊಂದು ಸೆಕೆಂಡ್‌ಗೂ ರಾಜಕೀಯದಲ್ಲಿ ಏನೇನೋ ಬೆಳೆವಣಿಗೆಗಳಾಗು ತ್ತಿರುತ್ತದೆ ಎಂಬುದೇ ಗೊತ್ತಿಲ್ಲ. ಅಂಬರೀಶ್‌ ಅವರ ಪರವಾಗಿ ನಾನು ಸೂಕ್ತ ಎಂದು ಮಂಡ್ಯ ಕ್ಷೇತ್ರದ ಜನರಿಗೆ ಅನಿಸಿದೆ. ಹೀಗಾಗಿ ನಾವಿದ್ದೇವೆ ಸ್ಪರ್ಧೆ ಮಾಡಿ ಎಂದು ಅಭಯ ನೀಡಿದ್ದಾರೆ. ಹೀಗಾಗಿ ಮಂಡ್ಯ ದಿಂದ ಸ್ಪರ್ಧಿಸಲು ನಿರ್ಧರಿ ಸಿದ್ದೇನೆ. ನನಗೆ ಮಂಡ್ಯ ಕ್ಷೇತ್ರ ಬಿಟ್ಟು ಬೇರ್ಯಾವ ಕ್ಷೇತ್ರವೂ ಬೇಡ, ನನಗೆ ಸಮಯ ಕೂಡ ಕಡಿಮೆ ಇದೆ ಎಂದು ಅವರು ಹೇಳಿದರು.

ಕಾರ್ಯಕರ್ತರ ಬೆಂಬಲ ಕಾಂಗ್ರೆಸ್‌ ನಾಯಕರು ನನಗೆ ಟಿಕೆಟ್ ನೀಡದಿದ್ದರೂ ಸ್ಥಳೀಯವಾಗಿ ಕಾಂಗ್ರೆಸ್‌ ಕಾರ್ಯಕರ್ತರು ನಮಗೆ ಬೆಂಬಲ ನೀಡುತ್ತಿದ್ದಾರೆ. ಅವರಿಗೂ ಅಸ್ತಿತ್ವದ ಪ್ರಶ್ನೆ, ನಾವು ಏನು ಮಾಡಬೇಕು? ಯಾರ ಪರ ನಿಲ್ಲಬೇಕು? ಯಾರಿಗೋಸ್ಕರ ಹೋರಾಟ ಮಾಡಬೇಕು? ಇವತ್ತು ಒಬ್ಬರಿಗೆ ಮತ ಕೇಳಿ, ಮುಂಬರುವ ಚುನಾವಣೆಯಲ್ಲಿ ಯಾರ ಪರವಾಗಿ ಮತ ಕೇಳಬೇಕು ಎಂಬ ಗೊಂದಲಗಳು ಅವರಲ್ಲಿದೆ. ಆದರೆ, ಸದ್ಯಕ್ಕೆ ಅವರು ಏನು ಮಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next