Advertisement

ಗೋವಾ ಗೆದ್ದ ಬಿಜೆಪಿ; 22 ವಿಶ್ವಾಸಮತ ಪಡೆದ ಪರ್ರಿಕರ್

06:23 AM Mar 17, 2017 | Team Udayavani |

ಪಣಜಿ/ಹೊಸದಿಲ್ಲಿ: ನಿರೀಕ್ಷೆಯಂತೆಯೇ ಗೋವಾ ಸಿಎಂ ಮನೋಹರ ಪಾರೀಕರ್‌ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 40 ಸದಸ್ಯ ಬಲದ ಅಸೆಂಬ್ಲಿಯಲ್ಲಿ 22 ಶಾಸಕರ ಬೆಂಬಲದೊಂದಿಗೆ ವಿಶ್ವಾಸಮತದ ಪರೀಕ್ಷೆಯಲ್ಲಿ ಪಾರೀಕರ್‌ ತೇರ್ಗಡೆ ಹೊಂದಿದ್ದಾರೆ.

Advertisement

ಈ ಮೂಲಕ ಅತಂತ್ರ ವಿಧಾನ ಸಭೆಯಿಂದಾಗಿ ಮೂಡಿದ್ದ ರಾಜ ಕೀಯ ಅನಿಶ್ಚಿತತೆಗೆ ತೆರೆ ಬಿದ್ದಂತಾ ಗಿದೆ. ಆದರೆ, ಈ ಬೆಳವಣಿಗೆಯಿಂದ ಕಾಂಗ್ರೆಸ್‌ನೊಳಗಿದ್ದ ಅಸಮಾಧಾನ ಸ್ಫೋಟವಾಗಿದ್ದು, ಹೈಕಮಾಂಡ್‌ ವಿರುದ್ಧ ಸ್ಥಳೀಯ ನಾಯಕರು ತಿರುಗಿ ಬೀಳುವಂತೆ ಮಾಡಿದೆ.

ಪಾರೀಕರ್‌ ವಿಶ್ವಾಸ; ಕೈ ಶಾಸಕ ಗೈರು: 17 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗುವಂತೆ ಬಿಜೆಪಿಯ 12, ಪಕ್ಷೇತರರು ಹಾಗೂ ಇತರ ಸಣ್ಣ ಪಕ್ಷಗಳ 10 ಶಾಸಕರ ಬೆಂಬಲದೊಂದಿಗೆ ಗುರುವಾರ ಗೋವಾ ವಿಧಾನಸಭೆಯಲ್ಲಿ ಪಾರೀಕರ್‌ ವಿಶ್ವಾಸಮತ ಸಾಬೀತು ಪಡಿಸಿದ್ದಾರೆ. ಅಚ್ಚರಿಯೆಂಬಂತೆ, ಕಾಂಗ್ರೆಸ್‌ ಶಾಸಕ ವಿಶ್ವಜಿತ್‌ ರಾಣೆ ಪ್ರಮುಖ ವಿಶ್ವಾಸಮತ ಪ್ರಕ್ರಿಯೆಗೆ ಗೈರಾಗಿದ್ದಲ್ಲದೆ, ಅನಂತರ ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರು ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಿಎಂ ಪ್ರತಾಪ್‌ ಸಿನ್ಹಾ ರಾಣೆ ಅವರ ಪುತ್ರ. ಪಕ್ಷ ತ್ಯಜಿಸಿ
ರುವ ವಿಶ್ವಜಿತ್‌, ಬಹುಮತ ಬಂದರೂ ಸರಕಾರ ರಚಿಸುವಲ್ಲಿ ವಿಫ‌ಲವಾದ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ. ಜತೆಗೆ, ಹೈಕಮಾಂಡ್‌ನ‌ ನಿಲುವಿಗೆ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿಯೂ ಹೇಳಿದ್ದಾರೆ. ಏತನ್ಮಧ್ಯೆ, ಎನ್‌ಸಿಪಿ ಶಾಸಕ ಚರ್ಚಿಲ್‌ ಅಲೆಮಾವೋ ಅವರೂ ಬಿಜೆಪಿ ಪರ ಮತ ಚಲಾಯಿಸಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಎನ್‌ಸಿಪಿ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಕಾಂಗ್ರೆಸ್‌ ಬಗ್ಗೆ ವ್ಯಂಗ್ಯ: ವಿಶ್ವಾಸಮತ ಸಾಬೀತಿನ ಬಳಿಕ ಮಾತನಾಡಿದ ಸಿಎಂ ಪಾರೀಕರ್‌, ಕಾಂಗ್ರೆಸ್‌ ಬಳಿ ಬಹುಮತಕ್ಕೆ ಬೇಕಾದ ಸಂಖ್ಯೆಯೇ ಇರಲಿಲ್ಲ. ಗೋವಾ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ರನ್ನು ಕಿತ್ತುಹಾಕಬೇಕೆಂಬ ಒತ್ತಾಯಗಳು ಕೇಳಿಬಂದಿದ್ದರಿಂದ ಕಾಂಗ್ರೆಸ್‌ ಸುಖಾಸುಮ್ಮನೆ ತಮಗೆ ಶಾಸಕರ ಬೆಂಬಲವಿದೆ ಎಂದು ನಾಟಕವಾಡಿತು. ನೀವು ಕೆಲಸ ಮಾಡುವ ಬದಲು ಗೋವಾಗೆ ಕೇವಲ ಎಂಜಾಯ್‌ ಮಾಡಲು ಬಂದಾಗ ಇಂಥದ್ದೆಲ್ಲ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next