Advertisement

ತಾವೂ ಗೆದ್ದು, ಇತರರನ್ನೂ ಗೆಲ್ಲಿಸೋರಿಗೆ ಬಿಜೆಪಿ ಆದ್ಯತೆ

08:00 AM Aug 24, 2017 | Harsha Rao |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ತಳಮಟ್ಟದಲ್ಲಿ ಸಿದಟಛಿತೆ ಚುರುಕುಗೊಳಿಸುತ್ತಿರುವ ಬಿಜೆಪಿ, “ನೀವೂ ಗೆದ್ದು ಇತರರನ್ನೂ ಗೆಲ್ಲಿಸಿಕೊಂಡು ಬನ್ನಿ’ ಎಂಬ ಹೊಸ ಕಾಯತಂತ್ರ ರೂಪಿಸುವ ಮೂಲಕ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ.

Advertisement

ಅಂದರೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರು ತಮ್ಮ ಕ್ಷೇತ್ರದ ಜತೆಗೆ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ತಮ್ಮ ಪ್ರಭಾವವನ್ನು ಬಳಸಿಕೊಂಡು ಆ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಅಂಥವರಿಗೆ ವಿಧಾನಸಭೆ ಚುನಾವಣೆ ಟಿಕೆಟ್‌ ನೀಡುವ ವೇಳೆ ಆದ್ಯತೆ ನೀಡಲು ನಿರ್ಧರಿಸಿದೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಭ್ಯರ್ಥಿಗಳ ಆಯ್ಕೆಗಾಗಿ ಕೆಲವು ಮಾನದಂಡಗಳನ್ನು ನಿಗದಿಪಡಿಸಿದ್ದರು.

ಪಕ್ಷದಿಂದ ಸ್ಥಾನಮಾನ ಬಯಸುವವರು ಪಕ್ಷಕ್ಕೂ ನೆರವಾಗಬೇಕು. ಅವರು ಗೆಲ್ಲುವ ಜೊತೆಗೆ ಅಕ್ಕಪಕ್ಕದ ಕ್ಷೇತ್ರಗಳಲ್ಲೂ
ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತಿರಬೇಕು ಎಂದು ಟಿಕೆಟ್‌ ಆಕಾಂಕ್ಷಿಗಳಿಗೆ ರಾಜ್ಯ ನಾಯಕರ ಮೂಲಕ
ಸಂದೇಶ ರವಾನಿಸಿದ್ದರು. ಅದರಂತೆ ರಾಜ್ಯ ನಾಯಕರು, ಜಿಲ್ಲಾಧ್ಯಕ್ಷರು ಮತ್ತು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವವರಿಗೆ ಅಮಿತ್‌ ಶಾ ನೀಡಿದ ಮಾರ್ಗಸೂಚಿಯನ್ನು ಕಳುಹಿಸಿಕೊಟ್ಟಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಮಿಷನ್‌-150 ಕಾರ್ಯಕ್ರಮ ರೂಪಿಸಿರುವ ಬಿಜೆಪಿ, 150
ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಬಯಕೆ ಹೊಂದಿದೆ. ಅದರಲ್ಲಿ ಯಶಸ್ಸು ಸಾಧಿಸಬೇಕಾದರೆ ಎಲ್ಲಾ ಕ್ಷೇತ್ರಗಳತ್ತ
ಗಮನಹರಿಸಬೇಕಾಗಿರುವುದು ಅಗತ್ಯ. ರಾಷ್ಟ್ರೀಯ ನಾಯಕರು ರಾಜ್ಯ ಮಟ್ಟದಲ್ಲಿ ಪ್ರಚಾರ ಮಾಡಿದರೆ, ರಾಜ್ಯ ನಾಯಕರು ಜಿಲ್ಲಾ ಮಟ್ಟದಲ್ಲಿ ಪ್ರಚಾರ ಮಾಡುತ್ತಾರೆ. ಉಳಿದಂತೆ ಸ್ಥಳೀಯವಾಗಿ ಅಭ್ಯರ್ಥಿಗಳೇ ಪ್ರಚಾರ ಮಾಡಬೇಕಾ
ಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಅಕ್ಕಪಕ್ಕದ ಕ್ಷೇತ್ರದ ಅಭ್ಯರ್ಥಿಗಳು ಸಾಥ್‌ ನೀಡಲು ಅನುಕೂಲವಾಗುವಂತೆ
ನೋಡಿಕೊಳ್ಳಲು ಪಕ್ಷ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

ವಿಸ್ತಾರಕ ಯೋಜನೆಯ ಮುಂದುವರಿದ ಭಾಗ: ಈ ಕಾರ್ಯತಂತ್ರವನ್ನು ವಿಸ್ತಾರಕ ಯೋಜನೆಯ ಮುಂದುವರಿದ ಭಾಗ
ಎಂದು ವಿಶ್ಲೇಷಿಸಲಾಗುತ್ತಿದೆ. ಜುಲೈನಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ವಿಸ್ತಾರಕ ಯೋಜನೆಯಡಿ ಒಂದು ಕ್ಷೇತ್ರದ
ಮುಖಂಡರು ತಮ್ಮ ಕ್ಷೇತ್ರದಲ್ಲಿ ಬೂತ್‌ ಮಟ್ಟದಲ್ಲಿ ಸಂಘಟನೆ ಮಾಡುವುದರ ತೆಗೆ ತಮ್ಮ ಅಕ್ಕಪಕ್ಕದ ವಿಧಾನಸಭಾ
ಕ್ಷೇತ್ರಗಳಿಗೂ ತೆರಳಿ ಅಲ್ಲೂ ಕೆಲಸ ಮಾಡಬೇಕಿತ್ತು. ಈ ಯೋಜನೆ ಮೂಲಕ ರಾಜ್ಯದಲ್ಲಿರುವ ಸುಮಾರು 57 ಸಾವಿರ
ಬೂತ್‌ಗಳ ಪೈಕಿ 41 ಸಾವಿರಕ್ಕೂ ಹೆಚ್ಚು ಬೂತ್‌ಗಳನ್ನು ತಲುಪಲಾಗಿತ್ತು. ಇದನ್ನೇ ಮುಂದುವರಿಸಿಕೊಂಡು ಅಭ್ಯರ್ಥಿ
ಆಕಾಂಕ್ಷಿಗಳು ತಮ್ಮ ಕ್ಷೇತ್ರದ ಜತೆಗೆ ಅಕ್ಕ ಪಕ್ಕದ ಕ್ಷೇತ್ರಗಳಲ್ಲೂ ಕೆಲಸ ಮಾಡುವ ಮೂಲಕ ರಾಜ್ಯದಲ್ಲಿ ಪಕ್ಷ ಗೆಲ್ಲಿಸಲು
ಇನ್ನಷ್ಟು ಸಂಘಟಿತ ಪ್ರಯತ್ನ ಮಾಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನೀತಿ ರಾಜ್ಯ ಮಟ್ಟದ ಮುಖಂಡರು ಮತ್ತು ಪಕ್ಷದ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿರುವ ಶಾಸಕರು ಮತ್ತು
ಟಿಕೆಟ್‌ ಆಕಾಂಕ್ಷಿಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ ಎಲ್ಲಾ ಅಭ್ಯರ್ಥಿ
ಆಕಾಂಕ್ಷಿಗಳಿಗೆ ಅನ್ವಯವಾಗುತ್ತದೆ. ರಾಜ್ಯ ಮಟ್ಟದ ಮುಖಂಡರು ಮತ್ತು ಪಕ್ಷದ ಪದಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ
ಇರುವುದರಿಂದ ಅವರಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

Advertisement

ಕಣ್ಣಿಡಲಿದ್ದಾರೆ ಅಮಿತ್‌ ಶಾ: ಜನ ತಮ್ಮ ಕ್ಷೇತ್ರದಲ್ಲಿ ಗೆಲ್ಲುವುದರ ಜತೆ ಅಕ್ಕಪಕ್ಕದ ಕ್ಷೇತ್ರಗಳ ಅಭ್ಯರ್ಥಿಗಳೂ ಗೆಲ್ಲಲು ಸಹಕಾರ ನೀಡುವ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿರುವ ಅಮಿತ್‌ ಶಾ ಅದಕ್ಕಾಗಿ ತಮ್ಮದೇ ಆದ ತಂಡ
ಸಿದಟಛಿಪಡಿಸಿದ್ದಾರೆ. ಸಂಘ ಪರಿವಾರದ ಮುಖಂಡರ ನೇತೃತ್ವದಲ್ಲಿ ಕೆಲವು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಅಂಥವರ ಮೇಲೆ ಕಣ್ಣಿಡಲಿದ್ದಾರೆ. ಯಾರು ತಮ್ಮ ಕ್ಷೇತ್ರದ ಜತೆಗೆ ಬೇರೆ ಕ್ಷೇತ್ರಗಳತ್ತ ಗಮನಹರಿಸುತ್ತಿದ್ದಾರೆ ಎಂಬ ಮಾಹಿತಿಸಂಗ್ರಹಿಸಿ ಅಮಿತ್‌ ಶಾ ಅವರಿಗೆನೀಡಲಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಸಿದಟಛಿಪಡಿಸುವ ಸಂದರ್ಭದಲ್ಲಿ ಅವರು
ಇದನ್ನು ಪರಿಗಣಿಸಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next