Advertisement

ಬಿಜೆಪಿ ಪ್ರಮುಖರು, ಉಸ್ತುವಾರಿಗಳಿಗೆ ಶಾ 23 ಸೂತ್ರಗಳು

08:37 AM Jan 10, 2018 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಮುಖರು ಮತ್ತು ವಿಧಾನಸಭಾ ಕ್ಷೇತ್ರ ಉಸ್ತುವಾರಿಗಳಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ 23 ಸೂತ್ರಗಳನ್ನು ನೀಡಿದ್ದಾರೆ.

Advertisement

1. ಉಸ್ತುವಾರಿಗಳಿಗೆ ವಾರದಲ್ಲಿ ಎರಡು ದಿನ ವಾಸ್ತವ್ಯ ಸಹಿತ ಪ್ರವಾಸ.
2. ಪ್ರತಿ ಮತಗಟ್ಟೆಗೆ ಬೂತ್‌ ಕಮಿಟಿಯಲ್ಲದೆ ಪ್ರಮುಖರ ನೇಮಕ.
3. ಪ್ರತಿ ಮಂಡಲದ ವಿಸ್ತೃತ ಸಭೆ ನಡೆಸಿ ಕಾರ್ಯಕರ್ತರನ್ನು ಸಕ್ರಿಯ ಗೊಳಿಸುವುದು
4. ಶಕ್ತಿಕೇಂದ್ರದ ಪ್ರಮುಖರಿಗೆ ಜನವರಿ ಮತ್ತು ಫೆಬ್ರವರಿಯಲ್ಲಿ ಎರಡು ದಿನ ಪ್ರವಾಸ ಕಡ್ಡಾಯ.
5.2008, 2013, 2014ರ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳನ್ನು ಎ, ಬಿ, ಸಿ ಎಂದು ವರ್ಗೀಕರಿಸುವುದು.
6. ಫೆ. 10ರೊಳಗೆ ಮತಗಟ್ಟೆ ಸಶಕ್ತೀಕರಣ ಪೂರ್ಣಗೊಳಿಸಬೇಕು. 
7. ಕನಿಷ್ಠ 10 ಎಸ್‌ಸಿ, ಎಸ್‌ಟಿ, ಓಬಿಸಿ ಸಮುದಾಯದವರನ್ನು ಸದಸ್ಯರನ್ನಾಗಿ ನೋಂದಣಿ ಮಾಡಬೇಕು.
8. ಸಹಕಾರಿ ಸಂಘಗಳ ನಿರ್ದೇಶಕರು ಮತ್ತು ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸುವುದು.
9. ಮಂದಿರ, ಮಠ, ಸಾಧು, ಸಂತರ ಪಟ್ಟಿ ಸಿದ್ಧಪಡಿಸಿ ಚರ್ಚಿಸುವುದು. 
10. ಪಂಚಾಯಿತಿ ಚುನಾವಣೆ ಸೋತವರ ಪಟ್ಟಿ ಸಿದ್ಧಪಡಿಸುವುದರೊಂದಿಗೆ ಹೊಸ ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು.
11. ಸ್ಮಾರ್ಟ್‌ಫೋನ್‌ ಅಥವಾ ಆ್ಯಂಡ್ರಾಯ್ಡ ಫೋನ್‌ ಇರುವವರ ಪಟ್ಟಿ ತಯಾರಿಸಬೇಕು.
12. ಮೋಟಾರ್‌ ಬೈಕ್‌ ಇರುವವರ ಪಟ್ಟಿ ಸಿದ್ಧಪಡಿಸಬೇಕು.
13. ಪ್ರತಿ ಮತಗಟ್ಟೆ ವ್ಯಾಪ್ತಿಯ ಐದು ಕಡೆ “ಈ ಬಾರಿ ಬಿಜೆಪಿ ಸರ್ಕಾರ’ ಎಂಬ ಘೋಷಣೆಯುಳ್ಳ ಗೋಡೆ ಬರಹ ಬರೆಸಬೇಕು.
14. ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರ ವಿರುದ್ಧ ಆರೋಪಪಟ್ಟಿ ತಯಾರಿಸಿ ಮಾಚ್‌ ìನಲ್ಲಿ ಬೈಕ್‌ ರ್ಯಾಲಿ ತೆರಳಿ ಹಂಚಬೇಕು
15. ವಿಧಾನಸಭೆ ಕ್ಷೇತ್ರದಲ್ಲಿ 8ರಿಂದ 10 ಪ್ರಮುಖರ ಕೋರ್‌ ಕಮಿಟಿ ರಚಿಸಬೇಕು.
16. ಪ್ರತಿ ಬೂತ್‌ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜಾರೋಹಣ ಮಾಡಬೇಕು.
17. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನವಶಕ್ತಿ ಸಮಾವೇಶ ಕಡ್ಡಾಯವಾಗಿಆಯೋಜಿಸಬೇಕು.
18. ಸಾಮಾಜಿಕ ಜಾಲತಾಣ ಕಾರ್ಯಾಗಾರ ಮಾಡಬೇಕು.
19. ಪ್ರಣಾಳಿಕೆ ಮತ್ತು ಆರೋಪಪಟ್ಟಿ ಕುರಿತು ಕಾರ್ಯಾಗಾರ ಕೈಗೊಳ್ಳಬೇಕು.
20. ಪ್ರತಿ ಮಂಡಲದಲ್ಲಿ 20 ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳ ರಚನೆ ಮಾಡಬೇಕು.
21. ಕಾಲಕಾಲಕ್ಕೆ ಚುನಾವಣಾ ವಿಸ್ತಾರಕರ ಜತೆ ವಿಚಾರ ವಿನಿಮಯ ಮಾಡಬೇಕು.
22. ಹೊರ ರಾಜ್ಯದ ಕ್ಷೇತ್ರ ಸಂಯೋಜಕರ ಜತೆ ಕಾರ್ಯ ಹಂಚಿಕೆ ಮಾಡಿಕೊಳ್ಳಬೇಕು.
23. ಪೇಜ್‌ ಪ್ರಮುಖರ ನೇಮಕಾತಿಗೆ ಚಾಲನೆ ಕೊಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next