Advertisement

ಯುವಕರ ಬಳಸಿ ಸಮಾಜದಲ್ಲಿ ಬಿಜೆಪಿ ಕೋಮು ದಳ್ಳುರಿ

11:31 AM Jan 06, 2018 | Team Udayavani |

ಮೈಸೂರು: ಹಿಂದುತ್ವದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡಿರುವ ಬಿಜೆಪಿ, ಯುವಕರಲ್ಲಿ ವಿಷಬೀಜ ಬಿತ್ತುತ್ತಿದ್ದು, ಹಿಂದುಳಿದ ಜನಾಂಗ ಬಿಜೆಪಿಯ ಒಳತಂತ್ರಗಳನ್ನು ಮನಗಾಣಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

Advertisement

ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಸಮಿತಿ ಹಿಂದುಳಿದ ವರ್ಗಗಳ ವಿಭಾಗದಿಂದ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಪದಾಧಿಕಾರಿಗಳ ಮತ್ತು ಬ್ಲಾಕ್‌ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು 1952ರಲ್ಲಿ ಕಾಂಗ್ರೆಸ್‌ ಸರ್ಕಾರ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದಿತು.

ಈ ಸಂದರ್ಭದಲ್ಲಿ ಮಂಡಲ್‌ ಆಯೋಗ ಸೇರಿದಂತೆ ಅನೇಕ ಆಯೋಗಗಳನ್ನು ರಚಿಸಿದ್ದು, ಇದೇ ರೀತಿಯಲ್ಲಿ ಡಿ.ದೇವರಾಜ ಅರಸು ಅವರು, ರಾಜ್ಯದಲ್ಲಿ ಹಾವನೂರು ಆಯೋಗ ರಚಿಸಿದರು. ಆದರೆ, ಜಾತಿಯ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದರೆ ದೇಶ ವಿಭಜನೆಯಾಗಲಿದೆ

ಎಂಬ ಕಾರಣಕ್ಕೆ ಜನತಾ ಪಕ್ಷ, ಬಿಜೆಪಿ, ಸನಾತನವಾದಿಗಳು ವಿರೋಧ ವ್ಯಕ್ತಪಡಿಸಿ. ಆಯೋಗದ ವಿರುದ್ಧ ರಥಯಾತ್ರೆ ನಡೆಸಿದ್ದರು. ಇಂತಹ ವಿರೋಧದ ನಡುವೆಯೂ ಮೀಸಲು ತಿದ್ದುಪಡಿ ಕಾಯ್ದೆ ಅನುಷ್ಠಾನಗೊಂಡಿದೆ ಎಂದರು.

ಮೀಸಲು ವಿರೋಧಿ ಬಿಜೆಪಿ: ಸಂವಿಧಾನದ ಮೊದಲ ತಿದ್ದುಪಡಿಯಿಂದ ದೊರೆತ ಮೀಸಲು ಸೌಲಭ್ಯ ಇಂದಿಗೂ ಹಿಂದುಳಿದ ವರ್ಗಗಳಿಗೆ ಸಮರ್ಪಕವಾಗಿ ತಲುಪಿಲ್ಲ ಮತ್ತು ಈವರೆಗೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಮೀಸಲು ವಿರೋಧಿಯಾಗಿರುವ ಬಿಜೆಪಿ, ತನ್ನ ಅಂಗ ಸಂಸ್ಥೆಗಳಾದ ಭಜರಂಗದಳ,

Advertisement

ಎಬಿವಿಪಿ, ಆರ್‌ಎಸ್‌ಎಸ್‌ ಮುಂತಾದ ಸಂಸ್ಥೆಗಳ ಮೂಲಕ ಹಿಂದುಳಿದ ವರ್ಗದ ಯುವಕರನ್ನು ಬಳಸಿಕೊಂಡು ಕೋಮುದಳ್ಳುರಿ ಹುಟ್ಟು ಹಾಕುತ್ತಿವೆ. ಈ ಕಾರಣದಿಂದಾಗಿ ಹಿಂದುತ್ವದ ಪರಿಕಲ್ಪನೆಯಲ್ಲಿ ಯುವಕರಲ್ಲಿ ವಿಷ ಬೀಜ ಬಿತ್ತುತ್ತಿರುವ ಬಿಜೆಪಿಯನ್ನು ತಿರಸ್ಕರಿಸಿ ರಾಜಾÂಂಗಕ್ಕೆ ಬದ್ಧವಾದ ಹಕ್ಕುಗಳನ್ನು ನೀಡಲು ಹೋರಾಡುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್‌, ಶಾಸಕ ಕಳಲೆ ಕೇಶವಮೂರ್ತಿ, ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ, ವರುಣಾ ವಿಧಾನಸಭಾ ಕ್ಷೇತ್ರದ ವಸತಿ ಯೋಜನೆಗಳ ಜಾಗೃತ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ,

ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ಮಾಜಿ ಶಾಸಕ ಸತ್ಯನಾರಾಯಣ, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಡಾ.ಪುಷ್ಪಾ ಅಮರನಾಥ್‌, ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೆ.ಮಾರುತಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next