Advertisement
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರದ ಮೂರು ವಿಧಾನಸಭಾ ಕ್ಷೇತ್ರಗಳ ಬೂತ್ ಪ್ರಮುಖರ ನವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ದ ಬಗ್ಗೆ ಬರೆಯುವುದಾದರೆ ಕರ್ನಾಟಕದಲ್ಲಷ್ಟೇ ಅಲ್ಲ, ಕೇರಳದ ಗಡಿವರೆಗೂ ಬರೆಯಬಹುದು ಎಂದು ದೂರಿದ ಅವರು, ಕರ್ನಾಟಕದ ವಿಕಾಸಕ್ಕೆ ಕೆಲಸ ಮಾಡುವ ಬಿಜೆಪಿ ಸರ್ಕಾರ ಬೇಕಾ? ಕಾಂಗ್ರೆಸ್ ನೇತೃತ್ವದ ಕಮೀಷನ್ ಸರ್ಕಾರ ಬೇಕಾ ನೀವೇ ತೀರ್ಮಾನಿಸಿ ಎಂದರು.
Related Articles
Advertisement
ರಾಜ್ಯಸಭೆಗೆ ಪ್ರಮೋದಾದೇವಿ?ಈ ಮಧ್ಯೆ, ರಾಜವಂಶಸ್ಥರನ್ನು ಭೇಟಿ ಮಾಡಿದ ಅಮಿತ್ ಶಾ ಅವರು, ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ರಾಜವಂಶಸ್ಥರಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಮುಂದೆ ಕರ್ನಾಟಕದಿಂದಲೇ ರಾಜವಂಶ ಸ್ಥರನ್ನು ರಾಜ್ಯ ಸಭೆಗೆ ಕಳುಹಿಸುವ ಬಗ್ಗೆಯೂ ಪ್ರಸ್ತಾಪ ಮಾಡಿ ದ್ದಾರೆ ಎನ್ನಲಾಗಿದೆ. ಮೈಸೂರು ಭಾಗದಲ್ಲಿ ರಾಜವಂಶಸ್ಥರ ಮೇಲೆ ಜನ ಇರಿಸಿರುವ ಪೂಜ್ಯ ಭಾವನೆಯನ್ನು ಮತವಾಗಿ ಪರಿ ವರ್ತಿಸಿಕೊಳ್ಳಲು ಬಿಜೆಪಿ, ಯದುವೀರ್ ಅವರನ್ನೇ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದೆ.
ಆದರೆ,ಅವರು ನಿರಾಸಕ್ತಿ ತೋರುತ್ತಿ ರುವುದರಿಂದ ಪ್ರಮೋದಾದೇವಿ ಒಡೆಯರ್ ಅವರನ್ನೇ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆದಿವೆ ಎನ್ನಲಾಗಿದೆ. ಪಾತಾಳದಲ್ಲಿದ್ದರೂ ಹಂತಕರ ಬಿಡೆವು
ರಾಜ್ಯದಲ್ಲಿನ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿರುವ ಹಂತಕರು ಪಾತಾಳದಲ್ಲಿ ಅಡಗಿ ದ್ದರೂ ಅವರನ್ನು ಬಿಡೆವು ಎಂದು ಅಮಿತ್ ಶಾ ಎಚ್ಚರಿಕೆ ನೀಡಿ ದ್ದಾರೆ. ಕ್ಯಾತಮಾರನಹಳ್ಳಿ ರಾಜು ಕುಟುಂಬದವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 24 ಮಂದಿ ಹತ್ಯೆಯಾಗಿದ್ದು, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಹಂತಕರನ್ನು ಜೈಲಿಗೆ ತಳ್ಳಿ ಶಿಕ್ಷೆ ಕೊಡಿಸಲಾಗುವುದು ಎಂದರು.