ಶಿವಮೊಗ್ಗ :ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಇರುವ 10 ಷೆಡ್ಯೂಲ್ ಉದ್ದೇಶವನ್ನೆ ಅಮಿತ್ ಷಾ, ಯಡಿಯೂರಪ್ಪ ನಾಶ ಮಾಡಲು ಹೊರಟ್ಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡಮಂಡಾಲರಾಗಿದ್ದರೆ.
17 ಜನರ ಕೈಯಲ್ಲಿ ರಾಜೀನಾಮೆ ಕೊಡಿಸಿ, ಚುನಾಯಿತ ಸರಕಾರ ಬೀಳಿಸಿದ್ದಾರೆ, ರಾಜೀನಾಮೆ ನೀಡುವುದಕ್ಕೆ ಕುಮ್ಮಕ್ಕು ನೀಡಿ, ರಾಜ್ಯದ ಜನತೆಯ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಆಡಿಯೋ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಾನು ಇದ್ನಾ, ಕೋರ್ ಕಮಿಟಿ ಸಭೆಯಲ್ಲಿ ಇದ್ದವರು ಅವರು, ಇದ್ದವರು ಮೂವರಲ್ಲಿ ಕದ್ದವರು ಯಾರು ಎನ್ನುವಂತಾಗಿದೆ ಎಂದರು.
ಆಪರೇಷನ್ ಕಮಲ ಬಗ್ಗೆ ಮಾತನಾಡಿದ ಅವರು ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಸತ್ಯವನ್ನೇ ಹೇಳಿದ್ದಾರೆ. ಯಡಿಯೂರಪ್ಪನವರು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಅಂದರೆ ಅದರ ಅರ್ಥ ಏನು..
ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈಯಲ್ಲಿ ಇದೆ ಅವರು ಏನು ಹೇಳ್ತಾರೆ ಅದನ್ನು ಅವರು ಮಾಡ್ತಾರೆ ಎಂದು ಹೇಳಿದರು.
ಕೋಡ್ ಆಫ್ ಕಂಡಕ್ಟ್ ಇಲ್ಲದೇ ಎಲೆಕ್ಷನ್ ನಲ್ಲಿ ಕ್ಯಾಲೆಂಡರ್ ಆಫ್ ಇವೆಂಟ್ಸ್ ಮಾಡೋದು ನೋಡಿದ್ದೀರಾ ಎಲ್ಲಾದ್ರೂ..
ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹ ಮಾಡಿ ಅಂತ ಸ್ಪೀಕರ್ ಗೆ ಮನವಿ ಮಾಡಿದ್ದೇ ನಾನು. 17 ಜನ ರಾಜೀನಾಮೆ ಕೊಡಲಿಲ್ಲ ಅಂದ್ರೆ ಸಿದ್ದರಾಮಯ್ಯ ಸರಕಾರ ಬೀಳಿಸುತ್ತಿದ್ದನಾ..?