Advertisement

ಡಿ.9ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಲ್ಲ: ಹೆಚ್ ಡಿಕೆ

09:35 AM Nov 19, 2019 | Team Udayavani |

ಚಿಕ್ಕಬಳ್ಳಾಪುರ: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಮುಂದಿನ ಡಿ.5 ರ ಮತದಾನ ಮತ್ತು ಡಿ.9 ರ ಫಲಿತಾಂಶದ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

Advertisement

ನಗರದಲ್ಲಿ ಸೋಮವಾರ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ನಾಮಪತ್ರ ಸಲ್ಲಿಕೆಗೂ ಮೊದಲು ನೆರದಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಮುಸ್ಮಾನರ ವಿರುದ್ದ ದಂಗೆ ಎದ್ದಂತಹ ಶಿವ ಸೇನೆಯ ಜೊತೆ ಕೈ ಜೋಡಿಸಿದಂತಹ ಕಾಂಗ್ರೆಸ್ ಕೋಮುವಾದಿಗಳೋ ಅಥವಾ ನಾವು ಕೋಮುವಾದಿಗಳೋ ಎಂಬುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ತಿಳಿಸಬೇಕೆಂದು ಕುಮಾರಸ್ವಾಮಿ ಕಿಡಿಕಾರಿದರು.

ಕಾಂಗ್ರೆಸ್ ನಾಯಕರು ನಮ್ಮನ್ನು ಕೋಮುವಾದಿಗಳು ಹಾಗೂ ಬಿಜೆಪಿಯ ಬಿ ಟೀಂ ಎಂದು ಕರೆಯುತ್ತಾರೆ ಆದರೆ ಇವತ್ತು ಮಹಾರಾಷ್ಟ್ರದಲ್ಲಿ ಏನಾಗಿದೆ. ಶಿವಸೇನೆಯ ನಾಯಕರು ಮುಸಲ್ಮಾನರನ್ನು ಈ ದೇಶದಿಂದ ಹೊರಗಟ್ಟಬೇಕು ಎಂದು ಬಾಷಣ ಮಾಡಿದ್ದರು. ಆದೇ ಶಿವಸೇನೆಯೊಂದಿಗೆ ಕಾಂಗ್ರೆಸ್ ಕೈ ಜೋಡಿಸುತ್ತಿದೆಯೆಂದು ಟೀಕಿಸಿದರು.

ಈ ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿಗಳು ಏನಾಗಿವೆ ಹಲವಾರು ಕಾರ್ಖಾನೆಗಳು ಮುಚ್ಚು ಹೋಗುತ್ತಿವೆ ನಿರುದ್ಯೋಗ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೂ 13 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನ ಬೀದಿಗೆ ಬಂದಿದ್ದಾರೆ ಇಂತಹ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ಕೇಂದ್ರದಿಂದ ನೆರೆ ಪರಿಹಾರಕ್ಕೆ ಹಣ ತರದೇ ಬಿಜೆಪಿ ಸರ್ಕಾರದಿಂದ ರಾಜ್ಯದ ಅಭಿವೃದ್ದಿ ನಿರೀಕ್ಷಿಸುವುದು ಹೇಗೆ ಎಂದು ಪ್ರಶ್ನಿಸಿದರು.

ನಾನು ಮುಖ್ಯ ಮಂತ್ರಿಯಾಗಿದ್ದಾಗ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ ಕಾಂಗ್ರೆಸ್ ಆಡಳಿತದಲ್ಲಿ ನನಗೆ ಹಲವಾರು ರೀತಿಯ ಅವಮಾನ ಹಾಗೂ ಕಿರುಕುಳ ಕೊಟ್ಟಿದ್ದಾರೆ ಅದು ಯಾವುದೂ ನನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಬಡವರಿಗೆ ಮತ್ತು ರೈತರಿಗೆ 25 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದ್ದೇನೆ ಎಂದು ತಿಳಿಸಿದರು.

Advertisement

ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನವನ್ನು ಇವತ್ತು ಬಿಜೆಪಿ ಸರ್ಕಾರ ಮಕ್ಕಳಿಗೆ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿಲ್ಲ ಎಂದು ಮಕ್ಕಳಿಗೆ ಬೋದನೆ ಮಾಡಲು ಹೊರಟಿದೆ ಇದು ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಿಂದ ಈ ದೇಶ ಮಾರಾಟವಾಗುತ್ತಿದೆ ಈ ದೇಶದಲ್ಲಿ ಬಿಜೆಪಿ ಸರ್ಕಾರದಿಂದ ರೈತರಿಗೆ ಉಳಿಗಾಳವಿಲ್ಲ ರೈತರ ಮತ್ತು ಯುವಕರ ಕಷ್ಟಗಳ ನೆರವಿಗೆ ಬಾರದ ಪ್ರಧಾನಿ ನರೇಂದ್ರ ಮೋದಿ ವಿಧೇಶಗಳು ಸುತ್ತಿಕೊಂಡು ಕೈ ಕುಲುಕುತ್ತಿದ್ದಾರೆಂದು ತಮ್ಮ ಆಕೊ್ರೀಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next