Advertisement

ಉತ್ತರ ಕನ್ನಡದಲ್ಲಿ ಕೈ-ಬಿಜೆಪಿ ಸಮಬಲ

06:25 AM Sep 04, 2018 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಲ್ಲಿ ಕೈ-ಕಮಲ ತಲಾ ಮೂರು ಸ್ಥಾನ ಪಡೆದು ಸಮಬಲ ಹೊಂದಿದ್ದರೆ, ಎರಡು ಕಡೆ ಅತಂತ್ರ ಸ್ಥಿತಿಯಿದೆ. 

Advertisement

ಹಳಿಯಾಳ ಪುರಸಭೆ, ದಾಂಡೇಲಿ ನಗರಸಭೆ, ಯಲ್ಲಾಪುರ ಪಟ್ಟಣ ಪಂಚಾಯತ್‌ ಕೈವಶವಾಗಿದ್ದರೆ, ಶಿರಸಿ ನಗರಸಭೆ, ಕುಮಟಾ ಪುರಸಭೆ, ಮುಂಡಗೋಡ ಪಟ್ಟಣ ಪಂಚಾಯತ್‌ಗಳಲ್ಲಿ ಕಮಲ ಅರಳಿದೆ. ಕಾರವಾರ ನಗರಸಭೆ ಹಾಗೂ ಅಂಕೋಲಾಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸಚಿವ ಆರ್‌.ವಿ. ದೇಶಪಾಂಡೆ ಸ್ವಕ್ಷೇತ್ರ ಹಳಿಯಾಳ, ದಾಂಡೇಲಿಗಳಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ.

ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಇದ್ದು, ಮೊದಲ ಬಾರಿಗೆ ಸ್ಥಳೀಯ ಆಡಳಿತವನ್ನು ಕಮಲಮಯ ಮಾಡಿಕೊಳ್ಳುವ ಯತ್ನದಲ್ಲಿ ಪ್ರಗತಿಯಾಗಿದೆ. ಆದರೆ ಸ್ಪಷ್ಟ ಬಹುಮತ ಪ್ರಾಪ್ತಿಯಾಗಿಲ್ಲ. ಬಿಜೆಪಿಯೊಳಗಿನ
ಬಂಡಾಯದಿಂದ ಹಲವು ಕಡೆ ಬಿಜೆಪಿ ಅಭ್ಯರ್ಥಿಗಳು ಸೋಲು ಕಾಣುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next