Advertisement

ವಿವಿಧೆಡೆ ವೀರ ಸನ್ಯಾಸಿಯ ವಿಶಿಷ್ಟ ಜನ್ಮ ದಿನಾಚರಣೆ

05:58 PM Jan 13, 2021 | Nagendra Trasi |

ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ, ಚಿಂತನಾ
ಸಭೆ ಏರ್ಪಡಿಸುವ, ವಿವೇಕಾನಂದರಂತೆ ವೇಷ ಧರಿಸುವ ಹಾಗೂ ಮಕ್ಕಳಿಗೆ ಪುಸ್ತಕ, ಪೆನ್ನು ವಿತರಿಸುವ ಮೂಲಕ ಮಂಗಳವಾರ ವಿಶಿಷ್ಟವಾಗಿ
ಆಚರಿಸಲಾಯಿತು.

Advertisement

ಪಟ್ಟಣದ ಮಾರುತಿ ನಗರದಲ್ಲಿರುವ ಶೋಭಾತಾಯಿ ಶರಣಮ್ಮನವರ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಲಾಯಿತು. ಆಶ್ರಮದ ವತಿಯಿಂದ ಮಕ್ಕಳಿಗೆ ಪುಸ್ತಕ, ಪೆನ್ನು ವಿತರಿಸಲಾಯಿತು. ಪ್ರವಚನಕಾರ್ತಿ ಚೈತನ್ಯ ದಶವಂತ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯರಝರಿ ಗ್ರಾಪಂ ಸದಸ್ಯೆ ರಾಜೇಶ್ವರಿ ಬಿರಾದಾರ ಅವರನ್ನು ಗೌರವಿಸಲಾಯಿತು.

ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಸರಸ್ವತಿ ಪೀರಾಪುರ, ಗೌರಮ್ಮ ಹುನಗುಂದ (ಬಲದಿನ್ನಿ), ನರಸಮ್ಮ ಗುಬಚಿ, ಲಲಿತಾ ಚವ್ಹಾಣ, ಅಕ್ಷತಾ
ಮಾನೆ, ರೇಣುಕಾ ಬಿರಾದಾರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಾರುತಿನಗರ ಬಡಾವಣೆಯ ತಾಯಂದಿರು, ಮಕ್ಕಳು ಇದ್ದರು.

ಬಿಜೆಪಿ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ವಿವಿಧ ಮೋರ್ಚಾ ಆಶ್ರಯದಲ್ಲಿ ವಿವೇಕಾನಂದರ ಜನ್ಮದಿನ ಆಚರಿಸಲಾಯಿತು. ಜಿಲ್ಲಾ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ  ರಾಠೊಡ ನೇಬಗೇರಿ, ಮುದ್ದೇಬಿಹಾಳ ಯುವ ಮೋರ್ಚಾ ಅಧ್ಯಕ್ಷ ಪುನೀತ್‌ ಹಿಪ್ಪರಗಿ, ಮುದ್ದೇಬಿಹಾಳ ನಗರ ಮೋರ್ಚಾ ಪ್ರಧಾನ
ಕಾರ್ಯದರ್ಶಿ ಹನುಮಂತ ನಲವಡೆ, ಮುದ್ದೇಬಿಹಾಳ ಮಂಡಲ ಕಾರ್ಯದರ್ಶಿ ಮಂಜುನಾಥ ರತ್ನಾಕರ ಮತ್ತಿತರರು ಪಾಲ್ಗೊಂಡಿದ್ದರು.

ಎಂಜಿವಿಸಿ ಕಾಲೇಜ್‌: ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಹಿನ್ನೆಲೆ ಯುವ ದಿನಾಚರಣೆ, ಉಪನ್ಯಾಸ, ಹೊಸ ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಸಂಯುಕ್ತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜಿನ ಆಡಳಿತಾ ಧಿಕಾರಿ ಎ.ಬಿ. ಕುಲಕರ್ಣಿ ಉಪನ್ಯಾಸ ನೀಡಿದರು. ನ್ಯಾಕ್‌ ಕೋ ಆರ್ಡಿನೇಟರ್‌ ಡಾ|  ಬಿ.ಎ. ಗೂಳಿ, ಎಸ್‌.ವಿ. ಗುರುಮಠ, ಬಿ.ಎಸ್‌. ಕಟಗೇರಿ ಅತಿಥಿಗಳಾಗಿದ್ದರು. ಪ್ರಾಂಶುಪಾಲ ಎಸ್‌.ಎನ್‌. ಪೋಲೇಸಿ ಅಧ್ಯಕ್ಷತೆ ವಹಿಸಿದ್ದರು. ಡಾ| ಆರ್‌.ಎಚ್‌. ಸಜ್ಜನ ಸ್ವಾಗತಿಸಿದರು. ವಿದ್ಯಾರ್ಥಿ ಸೋಮು ಬಂಗಾರಗುಂಡ ನಿರೂಪಿಸಿದರು. ವಿದ್ಯಾರ್ಥಿ ಪಾವಡೆಪ್ಪ ಮಾದರ ವಂದಿಸಿದರು.

Advertisement

ಇದೇ ವೇಳೆ ಬಿಎ ಪ್ರಥಮ ವರ್ಷದ ಇತಿಹಾಸ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಳ್ಳಲಾಯಿತು.  ಪಟ್ಟಣದ ಜ್ಞಾನಭಾರತಿ ಪ್ರೌಢಶಾಲೆ ಮುಖ್ಯಾಧ್ಯಾಪಕ ರಾಮಚಂದ್ರ ಹೆಗಡೆ ಅವರ ಪುತ್ರ ಶ್ರೀಧರಾಭಿರಾಮ ಸ್ವಾಮಿ ವಿವೇಕಾನಂದರ ಛದ್ಮವೇಷಧರಿಸಿ ಗಮನ ಸೆಳೆದ. ರಾಮಚಂದ್ರ ಅವರು ಶ್ರೀಧರಾಭಿರಾಮನಿಗೆ ವಿವೇಕಾನಂದರ ಪುಸ್ತಕಗಳನ್ನು ನೀಡಿದರು.

ಕಾಳಗಿ: ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಎದುರು ಇರುವ ವೃತ್ತದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನಡೆಸಿ ವಿವೇಕಾನಂದರ ಜನ್ಮದಿನ ಆಚರಿಸಲಾಯಿತು. ಗ್ರಾಮಸ್ಥರಿಗೆ ಫಳಾರ ಹಂಚಲಾಯಿತು. ಬಿಜೆಪಿ ಧುರೀಣ ಸುಭಾಷ್‌ ಕಾಳಗಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next