Advertisement
ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಮಂಗಳೂರು ಗ್ರಾಮದ ಪ್ರಗತಿಪರ ರೈತ ಮಲ್ಲಪ್ಪ ರಾಮಪ್ಪ ಸಣ್ಣಪ್ಪನ್ನವರ, ಈ ದೇವರ ಕೆಲಸವನ್ನೇ ಬಿಟ್ಟು ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ.
Related Articles
Advertisement
ಎರೆಹುಳು ಗೊಬ್ಬರ, ತಿಪ್ಪೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಹಸಿರು ಎಲೆ ಗೊಬ್ಬರ, ಬಯೋ ಡೈಜಿಸ್ಟ್, ಕುರಿ ಗೊಬ್ಬರ ಬಳಸಿ ಸಾವಯವ ಕೃಷಿ ಮಾಡುವುದರಿಂದ ಉತ್ತಮ ಇಳುವರಿ ಬಂದಿದೆ. ಗೊಬ್ಬರ ಕಡಿಮೆ ಬಿದ್ದಾಗ ಕೃಷಿ ಇಲಾಖೆಯಿಂದ ಕಾಂಪೋಸ್ಟ್, ಜಿಪ್ಸಂ, ಜಿಂಕ್,ಬೋರಾನ್ ತಂದು ಹಾಕುತ್ತೇನೆ. ಜಿಂಕ್ ಬೋರಾನ್ ಹಾಕುವುದರಿಂದ ಭೂಮಿ ಅರಳಿ ಫಲವತ್ತತೆ ಆಗುತ್ತದೆ ಎಂಬುದು ಅವರ ಅನುಭವದ ಮಾತು.
ಕಳೆದ 10 ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಬೇಸಾಯದಲ್ಲಿ ತೊಡಗಿರುವ ಇವರು ಹೀಗೆ ಪ್ರಾರಂಭದಲ್ಲಿ ಕೇವಲ 8 ಎಕರೆ ಜಮೀನು ಇತ್ತು. ಈಗ 25 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಸುಮಾರು 8 ವರೆ ಎಕರೆಯಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ಉಳಿದಂತೆ ಕಡಲೆ, ಗೋದಿ, ಜೋಳ, ತೊಗರಿ, ಅಲಸಂದಿ, ಶೇಂಗಾ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಪ್ರತಿ ವರ್ಷ ಸರಾಸರಿ 350 ರಿಂದ 400 ಕ್ವಿಂಟಾಲ್ ಗೋವಿನಜೋಳ ಇಳುವರಿ ದೊರೆಯುತ್ತಿದೆ. ಇದರಿಂದ ಪ್ರತಿ ವರ್ಷ ಸರಾಸರಿ 8 ರಿಂದ 10 ಲಕ್ಷ ಆದಾಯ ಬರುತ್ತದೆ. 1 ಎಕರೆ ಭೂಮಿಯಲ್ಲಿ 65 ಟನ್ ಕಬ್ಬು ಬೆಳೆ ಬೆಳೆಯುತ್ತಾರೆ. ಇವರ ತೋಟದಲ್ಲಿ 180 ಕ್ಕೂ ಹೆಚ್ಚು ಅರಸೀಕೆರೆ ಜವಾರಿ ತೆಂಗಿನ ಗಿಡಗಳಿವೆ. ವರ್ಷವಿಡಿ ಇವರ ತೋಟದಲ್ಲಿ 10 ಜನ ಕೂಲಿಕಾರ್ಮಿಕರು ಕೆಲಸ ಮಾಡುತ್ತಾರೆ. ಒಂದು ವರ್ಷದಲ್ಲಿ ಕನಿಷ್ಠ 35 ರಿಂದ 40 ಟ್ರ್ಯಾಕ್ಟರ್ ಗೊಬ್ಬರ ಉತ್ಪಾದನೆಯಾಗುತ್ತಿರುವುದರಿಂದ, ಗೊಬ್ಬರದ ಖರ್ಚು ಉಳಿತಾಯವಾಗುತ್ತಿದೆ. ವೈಜಾnನಿಕ ರೀತಿಯಲ್ಲಿ ಸತತ ಪರಿಶ್ರಮದಿಂದ ಕೃಷಿ ಮಾಡುವುದರಿಂದ ನಷ್ಟ ಆಗುವುದಿಲ್ಲ ಎನ್ನುತ್ತಾರೆ ರಾಮಪ್ಪ ಸಣ್ಣಪ್ಪ.
ಎಚ್.ಆರ್.ಕಡಿವಾಲ, ಬಾದಾಮಿ