Advertisement
ಸ್ನ್ಯಾಪ್ ಡೀಲ್ ಮತ್ತು ಫ್ಲಿಪ್ ಕಾರ್ಟ್ ವಿಲೀನಕ್ಕೆ ಜಪಾನ್ ನ ಪ್ರಸಿದ್ಧ ಸಾಫ್ಟ್ ಬ್ಯಾಂಕ್ ಕಂಪನಿ ಹಣ ಹೂಡಿಕೆ ಮಾಡಲಿದೆ ಎಂದು ವರದಿ ಹೇಳಿದೆ.
ವಿಲೀನ ಪ್ರಕ್ರಿಯೆಗಾಗಿ ಜಪಾನಿನ ಪ್ರಸಿದ್ಧ ಟೆಲಿಕಾಂ ಮತ್ತು ಇಂಟರ್ನೆಟ್ ಗ್ರೂಫ್ ಸಂಸ್ಥೆಯಾಗಿರುವ ಸಾಫ್ಟ್ ಬ್ಯಾಂಕ್ ಸ್ನ್ಯಾಪ್ ಡೀಲ್ ಮತ್ತು ಫ್ಲಿಪ್ ಕಾರ್ಟ್ ಸಂಸ್ಥೆಯ ಪ್ರಾಥಮಿಕ ಮತ್ತು 2ನೇ ಶೇರು ಖರೀದಿಗಾಗಿ ಅಂದಾಜು 1.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆಯಂತೆ.
Related Articles
Advertisement
ಈ ಒಪ್ಪಂದದ ಬಗ್ಗೆ ಸಾಫ್ಟ್ ಬ್ಯಾಂಕ್ ಮತ್ತು ಫ್ಲಿಪ್ ಕಾರ್ಟ್ ಸಹಮತಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ. ಈ ಬಗ್ಗೆ ಏಪ್ರಿಲ್ ಅಂತ್ಯದೊಳಗೆ ಮಾತುಕತೆ ಮುಕ್ತಾಯವಾಗುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ. ಫೆಬ್ರುವರಿಯಿಂದ ಈ ಪ್ರಸ್ತಾಪ ಇದ್ದು, ಕಳೆದ 15 ದಿನಗಳಿಂದ ಸಾಫ್ಟ್ ಬ್ಯಾಂಕ್ ಸಂಸ್ಥಾಪಕ ಮಸಾಯೋಶಿ ಸನ್ ಅವರು ಖುದ್ದಾಗಿ ವಿಲೀನ ಪ್ರಕ್ರಿಯೆ ಡೀಲ್ ಗೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.