Advertisement

ರೈತ ಸಂಪರ್ಕ ಕೇಂದ್ರದಲ್ಲಿಲ್ಲ ಸೈಕಲ್‌ ಕುಂಟೆ

02:28 PM Dec 02, 2019 | Suhan S |

ನರೇಗಲ್ಲ: ಹಿಂಗಾರು ಮಳೆ ಉತ್ತಮವಾಗಿದ್ದು ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಗದಿಗೆದರಿವೆ. ಈ ಮಧ್ಯೆ ಸಕಾಲಕ್ಕೆ ಸಿಗದ ಕಾರ್ಮಿಕರಿಂದ ಬೆಳೆದ ಫಸಲುಗಳಲ್ಲಿ ಕಳೆ (ಕಸ) ತೆಗೆಯುವುದು ಸವಾಲಿನ ಕೆಲಸವಾಗಿದೆ.

Advertisement

ಹೀಗಿರುವಾಗ ರೈತ ಸಂಪರ್ಕ ಕೇಂದ್ರದಲ್ಲಿ ಕಸ ತೆಗೆಯಲು ಬಳಸುವಸೈಕಲ್‌ ಎಡೆ ಕುಂಟೆ ಸಿಗದಿರುವುದು ರೈತರನ್ನು ಇನ್ನಷ್ಟು ಕಂಗಾಲಾಗಿಸಿದೆ.ನರೇಗಲ್ಲ ಹೋಬಳಿಯ ಅಬ್ಬಿಗೇರಿ,.. ಹಡಗಲಿ, ಯರೇಬಲೇರಿ, ಗುಜಮಾಗಡಿ, ನಾಗರಾಳ, ಕುರುಡಗಿ,ಜಕ್ಕಲಿ, ಬೂದಿಹಾಳ, ಮಾರನಬಸರಿ,ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಹೊಸಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಈಗಾಗಲೇ ಕಡಲೆ, ಗೋದಿ, ಜೋಳ ಬಿತ್ತನೆ ಮಾಡಲಾಗಿದೆ. ನಿರಂತರಸುರಿದ ಮಳೆಯಿಂದ ಬೆಳೆದ ಕಳೆ ಪೈರಿಗೆ ತೊಂದರೆ ಕೊಡುತ್ತಿದ್ದು, ಕಸ ತೆಗೆಯವಕಾರ್ಯ ಭರದಿಂದ ಸಾಗಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಬೇಡಿಕೆಯೂ ಹೆಚ್ಚಿದ್ದು,ರೈತರಿಗೆ ದೊಡ್ಡ ತಲೆನೋವಾಗಿದೆ.

ಕಡಲೆ ಬಿತ್ತನೆ ಮಾಡಿರುವ ಜಮೀನುಗಳಲ್ಲಿ ಹುಳಿ ಹೆಚ್ಚಿರುವುದರಿಂದ ಕೂಲಿ ಕಾರ್ಮಿಕರು ಕಸತೆಗೆಯಲು ಹಿಂದೇಟು ಹಾಕುತ್ತಿರುವುದು ರೈತರ ನಿದ್ದೆಗೆಡಿಸಿದೆ. ವರ್ಷದಿಂದ ವರ್ಷಕ್ಕೆ ಕಾರ್ಮಿಕರ ಕೂಲಿ ಹೆಚ್ಚುತ್ತಿದ್ದು, ರೈತರಿಗೆ ನುಂಗಲಾರದತುತ್ತಾಗಿದೆ. ಕಳೆ (ಕಸ) ತೆಗೆಯಲು ಮಹಿಳಾಕಾರ್ಮಿಕರಿಗೆ ದಿನವೊಂದಕ್ಕೆ 150-200 ರೂ, ಕೂರಿಗೆ, ಕುಂಟೆ, ಎಡೆ ಹೊಡೆಯಲು 500 ಕೊಡಬೇಕು. ಜತೆಗೆ ಕೆಲವು ಕಡೆ ಊಟ,ಉಪಹಾರವೂ ಮಾಮೂಲು. ಪರಿಸ್ಥಿತಿ ಹೀಗಿರುವಾಗ ರೈತ ಸಂಪರ್ಕ ಕೇಂದ್ರದಲ್ಲಿ ಸೈಕಲ್‌ ಎಡೆ ಕುಂಟೆಯೇ ಸಿಗುತ್ತಿಲ್ಲ.

ಎತ್ತುಗಳಿಗೂ ಬೇಡಿಕೆ: ಕಡಲೆ ಪೈರಿನಲ್ಲಿ ಎಡೆ ಕುಂಟೆ ಹೊಡೆಯಲು, ಬಿತ್ತುವುದು,ಕಳೆ ತೆಗೆಯಲು ಎತ್ತುಗಳ ಸಂಖ್ಯೆ ಕಡಿಮೆಇದೆ. ಇದ್ದರೂ ಸಕಾಲದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಒಂದು ದಿನದ ಬಿತ್ತನೆ ಹಾಗೂಎಡೆ ಹೊಡೆಯಲು ಜೋಡಿಎತ್ತು ಪರಿಕರ,ಕಾರ್ಮಿಕ ಸೇರಿ 300 ರಿಂದ 500 ರೂ. ಇದ್ದ ಬಾಡಿಗೆ ದರ ಈಗ ಒಂದು ಸಾವಿರಕ್ಕೆಏರಿದೆ. ಹೀಗೆ ಬಾಡಿಗೆ ಎಷ್ಟೇ ಹೆಚ್ಚಾದರೂ,ಕೂಲಿ ಕೊಟ್ಟು ಕಳೆ ತೆಗೆಸುವುದು ಅನಿವಾರ್ಯವಾಗಿದೆ.

ಕಡಲೆ ಬೆಳೆಯುಈಗಾಗಲೇ ಹುಳಿ ಇರುವುದರಿಂದ ಕೃಷಿಕಾರ್ಮಿಕರು ಕಳೆ (ಕಸ) ತೆಗೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿರೈತರ ಅನುಕೂಲಕ್ಕಾಗಿ ಸರ್ಕಾರದಿಂದನೀಡುವ ಸೈಕಲ್‌ ಎಡೆ ಕುಂಟೆ ರೈತರ ಕೈಗೆಸಿಗುತ್ತಿಲ್ಲವೆನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಕಡಲೆ ಬಿತ್ತನೆ ಕ್ಷೇತ್ರ: ಹಿಂಗಾರು ಹಂಗಾಮಿನಲ್ಲಿಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 22ಸಾವಿರ ಹೆಕ್ಟೆರ್‌ ಕಡಲೆ ಬಿತ್ತನೆಯಾಗಿದೆ. ಆದರೆ, ಸಕಾಲದಲ್ಲಿ ಕಡಲೆ ಬೆಳೆದ ಜಮೀನುಗಳಲ್ಲಿ ಕಾರ್ಮಿಕರು ಕಳೆ (ಕಸ)ತೆಗೆಯಲು ಬರುತ್ತಿಲ್ಲ ಎನ್ನುವ ದುಗುಡ ರೈತರಲ್ಲಿದ್ದು, ನಿತ್ಯ ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ನರೇಗಲ್ಲ ಹೋಬಳಿ ವ್ಯಾಪ್ತಿಯ ಕಡೆ ಹಳ್ಳಿಯಾದ ಡ.ಸಹಡಗಲಿಯಿಂದ ಕಳೆದೊಂದು ತಿಂಗಳಿಂದ ರೈತರ ಸಂಪರ್ಕ ಕೇಂದ್ರಕ್ಕೆ ಅಲೆದಾಡಿ ಸಾಕಾಗಿದೆ. ಅಧಿ ಕಾರಿಗಳ ಗಮಕ್ಕೆ ತಂದರೂಪ್ರಯೋಜನವಾಗುತ್ತಿಲ್ಲ. ಸೈಕಲ್‌ ಎಡೆ ಕುಂಟೆಯಿಂದ ಕಾರ್ಮಿಕರ ಅವಶ್ಯಕತೆ ಕಡಿಮೆಯಾಗುತ್ತಿದೆ.-ರುದ್ರಯ್ಯ ಹಿರೇಮಠ, .. ಹಡಗಲಿ ರೈತ

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next